ಬೆಂಗಳೂರಿನ ಯುವ ಚಿತ್ರಕಲಾವಿದನ ಅದ್ಭುತ ಪ್ರತಿಭೆಗೆ ಪ್ರಧಾನಿ ಮೋದಿ ಮೆಚ್ಚುಗೆ!

By Suvarna NewsFirst Published Aug 26, 2021, 6:51 PM IST
Highlights
  • ಸಾರ್ವಜನಿಕ ಆರೋಗ್ಯ ಕಾಳಜಿಗೆ ಬೆಂಗಳೂರಿನ ಚಿತ್ರ ಕಲಾವಿದನಿಗೆ ಮೆಚ್ಚುಗೆ
  • 20ರ ಹರೆಯದ ಸ್ಟೀವನ್ ಹ್ಯಾರಿಸ್ ಚಿತ್ರ ಕೊಂಡಾಡಿದ ಪ್ರಧಾನಿ ಮೋದಿ
  • ಸ್ಟೀವನ್ ಪ್ರಯತ್ನದಿಂದ ಜನರಿಗೆ ಸ್ಫೂರ್ತಿ ಎಂದು ಮೋದಿ

ನವದೆಹಲಿ(ಆ.26): ಕ್ರೀಡಾಪಟುಗಳನ್ನು, ವಿಜ್ಞಾನಿಗಳನ್ನು, ಮಕ್ಕಳನ್ನು, ವಿದ್ಯಾರ್ಥಿಗಳನ್ನು ಸೇರಿದಂತೆ ಸಾಧಕರನ್ನು ಪ್ರಧಾನಿ ನರೇಂದ್ರ ಮೋದಿ ವಿಶೇಷವಾಗಿ ಹುರಿದುಂಬಿಸುತ್ತಾರೆ. ದೇಶದ ಯಾವುದೇ ಮೂಲೆಯಲ್ಲಿದ್ದರೂ ಅವರನ್ನು ಹುಡುಕಿ ಗೌರವಿಸುತ್ತಾರೆ. ಇದೀಗ ಬೆಂಗಳೂರಿನ ಯುವ ಚಿತ್ರ ಕಲಾವಿದನ ಪ್ರತಿಭೆ ಹಾಗೂ ಸಾಮಾಜಿಕ ಕಳಕಳಿಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಧಾರ​ವಾಡ: ಬಾಲ​ಕನ ಕಲೆ ಮೆಚ್ಚಿದ ಪ್ರಧಾನಿ ಮೋದಿ

20ರ ಹರೆಯದ ಸ್ಟೀವನ್ ಹ್ಯಾರಿಸ್ ಅದ್ಭುತ ಚಿತ್ರಗಾರ. ತನ್ನ ಕುಂಚದಿಂದ ಅದ್ಭುತ ಚಿತ್ರಗಳನ್ನು ಬಿಡಿಸಿ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದಾನೆ. ಇತ್ತೀಚಗೆ ಸ್ಟೀವನ್ ಪ್ರಧಾನಿ ಮೋದಿಯ ಭಾವಚಿತ್ರ ಬಿಡಿಸಿ, ನರೇಂದ್ರ ಮೋದಿಗೆ ಕಳುಹಿಸಿದ್ದಾನೆ. ಇದರ ಜೊತೆಗೆ ತನ್ನ ಸಾಮಾಜಿಕ ಬದ್ಧತೆ ಹಾಗೂ ಕಳಕಳಿ ಕುರಿತ ಪತ್ರವೊಂದನ್ನು ಬರೆದಿದ್ದಾನೆ. ಸ್ವೀವನ್ ಹ್ಯಾರಿಸ್ ಚಿತ್ರಗಳನ್ನು ಗಮನಿಸಿದ ಮೋದಿ, ಪ್ರತಿಭೆ, ಶ್ರದ್ಧೆ ಹಾಗೂ ಅಭ್ಯಾಸಕ್ಕೆ ಸಲಾಂ ಹೇಳಿದ್ದಾರೆ. 

ಸ್ಟೀವನ್ ಹ್ಯಾರಿಸ್‌ ಪತ್ರ ಹಾಗೂ ಭಾವಚಿತ್ರಕ್ಕೆ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.  ಹ್ಯಾರಿಸ್‌ಗೆ ಮೋದಿ ಪತ್ರ ಬರೆದು ಕಲಾವಿದನ ಪ್ರತಿಭೆ ಮೆಚ್ಚಿಕೊಂಡಿದ್ದಾರೆ. ನಿಮ್ಮ ಚಿತ್ರಗಳು ಪ್ರತಿಭೆ ಹಾಗೂ ಆಳವಾದ ಅನುಭವವನ್ನು ಬಿಂಬಿಸುತ್ತಿದೆ. ಸೂಕ್ಷ್ಮತೆಯೊಂದಿಗೆ ಕಾರ್ಯಗತಗೊಳಿಸುವ ಕೌಶಲ್ಯ, ಸೃಜನಶೀಲ ಕ್ಷೇತ್ರಗಳಲ್ಲಿ ಯುವಜನರ ಆಸಕ್ತಿ ಹಾಗೂ ಶ್ರದ್ಧೆಯನ್ನು ನೋಡುವುದೇ ಸಂತಸವಾಗುತ್ತಿದೆ ಎಂದು ಮೋದಿ ಪತ್ರದಲ್ಲಿ ಹೇಳಿದ್ದಾರೆ.

ಎಲೆಯಲ್ಲಿ ಬಿಎಸ್‌ವೈ ಚಿತ್ರ: ಕಲಾವಿದನಿಗೆ ಸಿಎಂ ಬಂಪರ್ ಗಿಫ್ಟ್..!

ಇದೇ ವೇಳೆ ಸ್ಟೀವನ್ ಹ್ಯಾರಿಸ್ ಸಾರ್ವಜನಿಕ ಆರೋಗ್ಯ ಹಾಗೂ ಸಾಮಾಜಿಕ ಬದ್ಧತೆ ಕುರಿತ ಅಭಿಪ್ರಾಯಗಳನ್ನು ಮೋದಿ ಪ್ರಶಂಸಿದ್ದಾರೆ. ನಿಮ್ಮ ನಿರಂತ ಪ್ರಯತ್ನ ಸಾಂಕ್ರಾಮಿಕ ರೋಗದ ವಿರುದ್ಧದ ನಮ್ಮ ಹೋರಾಟಕ್ಕೆ ಶಕ್ತಿ ತುಂಬಲಿದೆ ಎಂದು ಪ್ರಧಾನಿ ಪತ್ರದಲ್ಲಿ ಹೇಳಿದ್ದಾರೆ. ಸಕಾರಾತ್ಮಕತೆಯನ್ನು ಹರಡುವ ಸ್ಟೀವನ್‌ನ ಪ್ರಯತ್ನ ಜನರಿಗೆ ಸ್ಫೂರ್ತಿಯಾಗಿದೆ ಎಂದಿದ್ದಾರೆ.

ಅಡುಗೆ ಮನೆಯಲ್ಲಿ ಬಿದ್ದಿದ್ದ ಪೇಂಟಿಂಗ್'ಗೆ ಸಿಕ್ತು ಕೋಟಿ ಕೋಟಿ ದುಡ್ಡು!

ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಸ್ಟೀವನ್ ಹ್ಯಾರಿಸ್, ತನ್ನ ಚಿತ್ರಕಲೆ ಕುರಿತು ಹೇಳಿದ್ದಾನೆ. ಕಳೆದ 15 ವರ್ಷದಿಂದ ಚಿತ್ರಕಲೆಯಲ್ಲಿ ತೊಡಗಿದ್ದು, 100 ಹೆಚ್ಚು ಪ್ರಶಸ್ತಿಗಳನ್ನು ಪಡೆದಿರುವುದಾಗಿ ಬರೆದುಕೊಂಡಿದ್ದಾನೆ. ಮೋದಿ ನನ್ನ ಸ್ಪೂರ್ತಿ, ಮೋದಿ ಕೈಗೊಂಡ ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಶ್ಲಾಘಿಸಿದ್ದಾನೆ.

click me!