ದೇಶದ 6.4 ಲಕ್ಷ ಸ್ಥಳಗಳಲ್ಲಿ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ನಡೆದಿದ್ದು, ಬೆಳಗ್ಗೆ 10 ಗಂಟೆಯಿಂದ 1 ಗಂಟೆ ಕಾಲ ದೇಶವ್ಯಾಪಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ನಡೆದಿದೆ. ಪ್ರಧಾನಿ ಮೋದಿ ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ನವದೆಹಲಿ (ಅಕ್ಟೋಬರ್ 1, 2023): ಮಹಾತ್ಮಾ ಗಾಂಧಿಯವರ 154 ನೇ ಜನ್ಮದಿನಾಚರಣೆ ಹಿನ್ನೆಲೆ ದೇಶವ್ಯಾಪಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂದು ದೇಶದ 6.4 ಲಕ್ಷ ಸ್ಥಳಗಳಲ್ಲಿ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ನಡೆದಿದ್ದು, ಈ ಅಭಿಯಾನದಲ್ಲಿ ಸ್ವತ: ಪ್ರಧಾನಿ ಮೋದಿ ಭಾಗಿಯಾಗಿದ್ದಾರೆ. ಅಲ್ಲದೆ, ಪ್ರಧಾನಿ ಮೋದಿ ನೀಡಿದ ಕರೆಗೆ ಓಗೊಟ್ಟ ಜನತೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಇಂದು ದೇಶದ 6.4 ಲಕ್ಷ ಸ್ಥಳಗಳಲ್ಲಿ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ನಡೆದಿದ್ದು, ಬೆಳಗ್ಗೆ 10 ಗಂಟೆಯಿಂದ 1 ಗಂಟೆ ಕಾಲ ದೇಶವ್ಯಾಪಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ನಡೆದಿದೆ. ಮಹಾತ್ಮಾ ಗಾಂಧಿಯವರ 154 ನೇ ಜನ್ಮದಿನಾಚರಣೆ ಹಿನ್ನೆಲೆ ಈ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಇದನ್ನು ಓದಿ: ತಾಯಿಯಿಂದ ಪಡೆದ 2000 ರೂ. ನಿಂದ ವ್ಯಾಪಾರ ಪ್ರಾರಂಭ: ಹೇರ್ ಆಯಿಲ್ ಮಾರಾಟ ಮಾಡಿ 1651 ಕೋಟಿ ಗಳಿಸಿದ ಯಶಸ್ವಿ ಉದ್ಯಮಿ!
ಬೆಳಗ್ಗೆ 10 ಗಂಟೆಯಿಂದ 1 ಗಂಟೆಯ ಕಾಲ ದೇಶವ್ಯಾಪಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ನಡೆದಿದ್ದು, ದೇಶದ ಮೂಲೆ ಮೂಲೆಯನ್ನು ಸ್ವಚ್ಛ ಮಾಡುವುದು, ಜನರು ಬಯಲಿನಲ್ಲಿ ಮಲವಿಸರ್ಜನೆ ಮಾಡುವುದನ್ನು ತಡೆಯುವುದು, ಭಾರತದ ಪ್ರತಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆಯಲ್ಲೂ ಶೌಚಾಲಯಗಳನ್ನು ನಿರ್ಮಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.
ಈ ವೇಳೆ 35 ಸಾವಿರ ಅಂಗನವಾಡಿ, 22 ಸಾವಿರ ಮಾರುಕಟ್ಟೆ, 7 ಸಾವಿರ ಬಸ್ ನಿಲ್ದಾಣ, 1 ಸಾವಿರ ಗೋಶಾಲೆ ಮತ್ತು 300 ಮೃಗಾಲಯಗಳು ಈ ಅಭಿಯಾನದ ಪ್ರಮುಖ ಸ್ಥಳಗಳಾಗಿವೆ. ಈ ಅಭಿಯಾನದಲ್ಲಿ ದೇಶದಾದ್ಯಂತ ಸಂಚರಿಸುವ 29 ವಂದೇ ಭಾರತ್ ರೈಲುಗಳನ್ನು ಪ್ರತಿ 14 ನಿಮಿಷಗಳಿಗೊಮ್ಮೆ ಸ್ವಚ್ಛಗೊಳಿಸಲಾಗುವುದು ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: ಸ್ಯಾಮ್ಸಂಗ್ ಪ್ರಿಯರಿಗೆ ಗುಡ್ ನ್ಯೂಸ್: ಅಕ್ಟೋಬರ್ 4 ರಂದು ನೂತನ ಪ್ರೀಮಿಯಂ ಫೋನ್ ಬಿಡುಗಡೆ; ವೈಶಿಷ್ಟ್ಯಗಳು ಹೀಗಿದೆ..
ಇನ್ನು, ತಾನು ಕರೆ ನೀಡಿದ್ದ ಸ್ವಚ್ಛತಾ ಅಭಿಯಾನದಲ್ಲಿ ಪ್ರಧಾನಿ ಮೋದಿ ಸಹ ಭಾಗಿಯಾಗಿದ್ದರು. ಪ್ರಧಾನಿ ಮೋದಿ, ಅಂಕಿತ್ ಬೈಯನಪುರಿಯ ಎಂಬುವರ ಜತೆ ಸ್ವಚ್ಛತೆ ಕಾರ್ಯ ನಡೆಸಿದ್ದಾರೆ. ಶುಚಿತ್ವದ ಜತೆ ಫಿಟ್‌ನೆಸ್ ಮತ್ತು ಯೋಗಕ್ಷೇಮವನ್ನು ಸಹ ಸೇರಿಸಿದ್ದೇವೆ ಎಂದು ಈ ಸಂಬಂಧ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಇಂದು, ದೇಶವು ಸ್ವಚ್ಛತೆಯತ್ತ ಗಮನಹರಿಸುತ್ತಿರುವಾಗ, ಅಂಕಿತ್ ಬೈಯನಪುರಿಯ ಮತ್ತು ನಾನು ಹಾಗೆಯೇ ಮಾಡಿದೆವು! ಶುಚಿತ್ವದ ಜತೆ, ನಾವು ಫಿಟ್‌ನೆಸ್ ಮತ್ತು ಯೋಗಕ್ಷೇಮವನ್ನು ಸಹ ಸೇರಿಸಿದ್ದೇವೆ. ಇದು ಸ್ವಚ್ಛ ಮತ್ತು ಆರೋಗ್ಯಕರ ಭಾರತದ ಆತ್ಮಕ್ಕೆ ಸಂಬಂಧಿಸಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. … https://t.co/b1FFKkXrCl
— Asianet Suvarna News (@AsianetNewsSN)ಇಂದು, ದೇಶವು ಸ್ವಚ್ಛತೆಯತ್ತ ಗಮನಹರಿಸುತ್ತಿರುವಾಗ, ಅಂಕಿತ್ ಬೈಯನಪುರಿಯ ಮತ್ತು ನಾನು ಹಾಗೆಯೇ ಮಾಡಿದೆವು! ಶುಚಿತ್ವದ ಹೊರತಾಗಿ, ನಾವು ಫಿಟ್‌ನೆಸ್ ಮತ್ತು ಯೋಗಕ್ಷೇಮವನ್ನು ಸಹ ಸೇರಿಸಿದ್ದೇವೆ. ಇದು ಸ್ವಚ್ಛ ಮತ್ತು ಆರೋಗ್ಯಕರ ಭಾರತದ ಆತ್ಮಕ್ಕೆ ಸಂಬಂಧಿಸಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ವಾಜಪೇಯಿ ಕಲಿಸಿದ ಚದುರಂಗದಾಟ ಆಡಿದ್ರಾ ಪ್ರಧಾನಿ..? ಜಗತ್ತು ಗೆಲ್ಲೋಕೆ ಮೋದಿ ಬಳಿ ಅಟಲ್ ಸೂತ್ರ!