ಒವೈಸಿಗೆ ಅನರ್ಹತೆ ಭೀತಿ, ಸಂಸತ್ತಿನಲ್ಲಿ ಜೈ ಪ್ಯಾಲೆಸ್ತೀನ್ ಘೋಷಣೆ ಕೂಗಿ ಸಂಕಷ್ಟಕ್ಕೆ ಸಿಲುಕಿದ ನಾಯಕ!

By Kannadaprabha News  |  First Published Jun 26, 2024, 8:38 AM IST

ಸಂಸತ್ತಿನಲ್ಲಿ ಪ್ರಮಾಣವಚನ ಸ್ವೀಕರಿಸುವ ವೇಳೆ ಸಂಸದ ಅಸಾದುದ್ದೀನ್ ಒವೈಸಿ ಪ್ಯಾಲೆಸ್ತೀನ್ ಪರ ನಿಷ್ಠೆ ತೋರಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೈ ಪ್ಯಾಲೆಸ್ತೀನ್ ಘೋಷಣೆ ಕೂಗಿ ಇದೀಗ ಅನರ್ಹತೆ ಭೀತಿ ಎದುರಿಸುತ್ತಿದ್ದಾರೆ.
 


ನವದೆಹಲಿ(ಜೂ.26) : ಎಐಎಂಐಎಂ ಸಂಸದ ಅಸಾದುದ್ದೀನ್‌ ಒವೈಸಿ ಅವರು ‘ಜೈ ಪ್ಯಾಲೆಸ್ತೀನ್‌’ ಎಂದು ಸಂಸತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಘೋಷಣೆ ಕೂಗಿರುವುದು ಅವರ ಅನರ್ಹತೆಗೆ ಕಾರಣ ಆಗಬಹುದೆ? ಹೀಗೊಂದು ಜಿಜ್ಞಾಸೆ ಈಗ ಹರಿದಾಡುತ್ತಿದೆ.  ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಮಂಗಳವಾರ ಸಂಜೆ ಹೇಳಿಕೆ ಬಿಡುಗಡೆ ಮಾಡಿ, ಸಂವಿಧಾನದ 102 ನೇ ವಿಧಿಯನ್ನು ಉಲ್ಲೇಖಿಸಿದ್ದಾರೆ. ‘ವಿದೇಶವೊಂದಕ್ಕೆ ನಿಷ್ಠೆಯನ್ನು ತೋರಿಸುವವರನ್ನು ಅನರ್ಹಗಗೊಳಿಸಬಹುದು’ ಎಂದು ಈ ನಿಯಮ ಹೇಳುತ್ತದೆ. ಇದನ್ನೇ ಉಲ್ಲೇಖಿಸಿ ಓವೈಸಿಯನ್ನು ಅನರ್ಹಗೊಳಿಸಬಹುದು ಎಂದು ಮಾಳವೀಯ ಆಗ್ರಹಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು, ‘ನಮಗೆ ಪ್ಯಾಲೆಸ್ತೀನ್ ಅಥವಾ ಇತರ ಯಾವುದೇ ದೇಶದೊಂದಿಗೆ ಯಾವುದೇ ದ್ವೇಷವಿಲ್ಲ, ಒಂದೇ ವಿಷಯವೆಂದರೆ, ಪ್ರಮಾಣ ವಚನ ಸ್ವೀಕರಿಸುವಾಗ, ಯಾವುದೇ ಸದಸ್ಯರು ಬೇರೆ ದೇಶವನ್ನು ಹೊಗಳಿ ಘೋಷಣೆ ಕೂಗುವುದು ಸರಿಯೇ ಎಂಬುದು. ಹೀಗಾಗಿ ನಾವು ನಿಯಮಗಳನ್ನು ಪರಿಶೀಲಿಸಬೇಕು. ಈ ಬಗ್ಗೆ ಸ್ಪೀಕರ್‌ ಜತೆ ಮಾತನಾಡುವೆ’ ಎಂದಿದ್ದಾರೆ.

Latest Videos

undefined

ಪ್ರಮಾಣವಚನ ಸ್ವೀಕಾರದ ವೇಳೆ 'ಜೈ ಪ್ಯಾಲೆಸ್ತೇನ್‌..' ಘೋಷಣೆ ಕೂಗಿದ ಅಸಾದುದ್ದೀನ್‌ ಓವೈಸಿ!

ಪ್ರಮಾಣವಚನ ಸ್ವೀಕಾರಕ್ಕೆ ಒವೈಸಿ ಹೆಸರನ್ನು ಕರೆದ ಕ್ಷಣ ಆಡಳಿತ ಪಕ್ಷದ ಕೆಲ ಸಂಸದರು ಜೈಶ್ರೀರಾಂ ಮತ್ತು ಭಾರತ್‌ ಮಾತಾ ಕಿ ಜೈ ಘೋಷಣೆಯನ್ನು ಕೂಗಿದರು. ಬಳಿಕ ಪ್ರಮಾಣ ಸ್ವೀಕರಿಸಿದ ಅಸಾದುದ್ದೀನ್‌, ಕೊನೆಯಲ್ಲಿ ‘ಜೈ ಭೀಮ್‌, ಜೈ ಎಂಐಎಂ, ಜೈ ಪ್ಯಾಲೆಸ್ತೀನ್‌, ಜೈ ತೆಲಂಗಾಣ, ಅಲ್ಲಾಹು ಅಕ್ಬರ್’ ಎಂದು ಕೂಗಿದರು. ಇದು ವಿವಾದಕ್ಕೆ ಕಾರಣವಾಯಿತು. ಸಂಸತ್‌ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಗದ್ದಲ ಎಬ್ಬಿಸಿದಾಗ ಆ ವಾಕ್ಯವನ್ನು ಕಡತದಿಂದ ತೆಗೆಯುವುದಾಗಿ ಸ್ಪೀಕರ್‌ ಪ್ರಕಟಿಸಿದರು.

ಒವೈಸಿ ಸಮರ್ಥನೆ:
ಬಳಿಕ ಸಂಸತ್‌ ಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿ ತಮ್ಮ ಕ್ರಮ ಸಮರ್ಥಿಸಿಕೊಂಡಿರುವ ಒವೈಸಿ ‘ಇತರರೂ ಸಹ ತಮಗೆ ತೋಚಿದ ಘೋಷಣೆಗಳನ್ನು ಕೂಗಿದ್ದಾರೆ. ನಾನು ದಮನಿತರ ಪರವಾಗಿ ದನಿ ಎತ್ತಿರುವೆ. ಅದರಲ್ಲಿ ತಪ್ಪೇನು? ಮಹಾತ್ಮಾ ಗಾಂಧಿ ಪ್ಯಾಲೆಸ್ತೀನ್‌ ಬಗ್ಗೆ ಏನು ಹೇಳಿದ್ದರು ನೋಡಿ.. ಅವರು ದಮನಿತರು’ ಎಂದರು.

ಅಂಗಡಿ ಮುಂದೆ ಕುಳಿತಿದ್ದ ಓವೈಸಿ ಪಕ್ಷದ ನಾಯಕನ ಮೇಲೆ ಗುಂಡಿನ ದಾಳಿ

ಒವೈಸಿ ಘೋಷಣೆಗೆ ಬಿಜೆಪಿ ಸದಸ್ಯರು ಆಕ್ಷೇಪಿಸಿದ್ದಾರೆ ಹಾಗೂ ಸ್ಪೀಕರ್‌ ಜತೆ ಈ ಬಗ್ಗೆ ಚರ್ಚಿಸುವುದಾಗಿ ಸಂಸದೀಯ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ.
 

click me!