PM Modi in Kerala ಕೊಚ್ಚಿ ಮೆಟ್ರೋ ಉದ್ಘಾಟಿಸಿದ ಮೋದಿ, 1 ಲಕ್ಷ ಕೋಟಿ ರೂಪಾಯಿ ವೆಚ್ಚದ ಮೂಲಭೂತ ಸೌಕರ್ಯ!

By Suvarna NewsFirst Published Sep 1, 2022, 7:43 PM IST
Highlights

ಕಾಮಗಾರಿ ಪೂರ್ಣಗೊಳಿಸಿ ಜನರ ಉಪಯೋಗಕ್ಕೆ ಲಭ್ಯವಾಗಿರುವ ಕೊಚ್ಚಿ ಮೊದಲ ಹಂತದ ಮೆಟ್ರೋ ಉದ್ಘಾಟನೆ ಹಾಗೂ ಎರಡನೇ ಹಂತದ ಮೆಟ್ರೋ ಶಂಕು ಸ್ಛಾಪನೆ ನೆರವೇರಿಸಿದ ಮೋದಿ, ಕೇರಳದ ಸಂಪರ್ಕ ಸೇತುವೆ ಕುರಿತು ಮಹತ್ವದ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಕೊಚ್ಚಿ(ಸೆ.01): ದಕ್ಷಿಣ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ  ಪೆಟ್ಟಾದಿಂದ ಎಸ್ಎನ್ ಜಂಕ್ಷನ್ ವರೆಗೆ ನಿರ್ಮಿಸಲಾಗಿರುವ ಕೇರಳ ಕೊಚ್ಚಿ ಮೆಟ್ರೋ ಮೊದಲ ಹಂತದ ವಿಸ್ತರಣೆ ಯೋಜನೆಯನ್ನು ಉದ್ಘಾಟಿಸಿದ್ದಾರೆ. ಬಳಿಕ ಮಾತನಾಡಿದ ಮೋದಿ, ಕೇರಳದ ಸಂಪರ್ಕ ಸೇತುವೆಯನ್ನು ಕೇಂದ್ರ ಮತ್ತಷ್ಟು ಬಲಪಡಿಸಲಿದೆ. ಕೇರಳದಲ್ಲಿ ಬರೋಬ್ಬರಿ 1 ಲಕ್ಷ ಕೋಟಿ ರೂಪಾಯಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಯೋಜನೆಗಳು ಪ್ರಗತಿಯಲ್ಲಿದೆ ಎಂದು ಮೋದಿ ಹೇಳಿದರು. ಕೊಚ್ಚಿ ವಿಸ್ತರಿಸಿದ ಮೆಟ್ರೋ ರೈಲುಗಳು ಶೇಕಡಾ 55 ರಷ್ಟು ಸೌರಶಕ್ತಿಯಿಂದ ಚಾಲಿತವಾಗಿದೆ ಎಂದರು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೊಚ್ಚಿ ಎರಡನೇ ಹಂತದ ಮೆಟ್ರೋ ವಿಸ್ತರಣೆ ಯೋಜನೆಯ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನಮ್ಮದೇಶದಲ್ಲಿ ಮೊದಲ ಮೆಟ್ರೋ(Metro Train) ಬಂದಿರುವುದು 40 ವರ್ಷಗಳ ಹಿಂದೆ. ಬಳಿಕ 30 ವರ್ಷದ ಕಾಲಘಟದ್ದಲ್ಲಿ 280 ಕಿಲೋಮೀಟರ್ಗಿಂತಲೂ ಕಡಿಮೆ ಮೆಟ್ರೋ ಕಿಲೋಮೀಟರ್ ಮೆಟ್ರೋ ನಿರ್ಮಾಣವಾಗಿದೆ. ಆದೆ ಕಳೆದ 8 ವರ್ಷಗಳಲ್ಲಿ 1,000 ಕಿಲೋಮೀಟರ್‌ಗೂ ಅಧಿಕೂ ಕಾಮಾಗಾರಿಗಳು ನಡೆಯುತ್ತಿದೆ ಎಂದು ಮೋದಿ ಹೇಳಿದ್ದಾರೆ. 

ಪಂಚೆ, ಶರ್ಟ್ ಧರಿಸಿ ಕೇರಳಕ್ಕೆ ಆಗಮಿಸಿದ ಪ್ರಧಾನಿ ಮೋದಿ ವಸ್ತ್ರಕ್ಕೆ ಮಾರು ಹೋದ ಜನ!

ಇಂದು ರಾಜ್ಯದಲ್ಲಿ ಏರ್‌ಪೋರ್ಟ್ ರೀತಿಯಲ್ಲಿ ಮೆಟ್ರೋ ನಿಲ್ದಾಣ ತಲೆ ಎತ್ತುತ್ತಿದೆ. ಎರ್ನಾಕುಲಂ ಟೌನ್ ಸ್ಟೇಶನ್, ಎರ್ನಾಲುಕುಲಂ ಜಂಕ್ಷನ್ ಸೇರಿದಂತೆ 3 ನಿಲ್ದಾಣಗಳು ಆಧುನೀಕರಣಗೊಳ್ಳುತ್ತಿದೆ. ಕೇರಳದ ರೈಲು ಸಂಪರ್ಕ ಆಧುನೀಕರಣಗೊಳ್ಳುತ್ತಿದೆ. ತಿರುವನಂತಪುರಂದಿಂದ ಮಂಗಳೂರು ವರೆಗೆ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಕೇರಳ ಪ್ರವಾಸ(Kerala Tourism) ದೃಷ್ಟಿಯಿಂದ ಮಾತ್ರವಲ್ಲ, ಧಾರ್ಮಿಕ ಕೇಂದ್ರಗಳ ಸಂಪರ್ಕವೂ ಸುಲಭವಾಗಿದೆ. ಏಟಮಾನೂರು, ಕೋಟಯಂ ರಸ್ತೆಗಳ ಅಭಿವೃದ್ಧಿಯಾಗಿದೆ. ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಅನೂಕುಲವಾಗಿದೆ ಎಂದು ಮೋದಿ ಹೇಳಿದ್ದಾರೆ. 

ಕೊಲ್ಲಂ ಪುನರೂರ್ ಸ್ಟೇಶನ್ ವಿದ್ಯುತ್ತೀಕರ ಮಾಡಲಾಗಿದೆ. ಇದರಿಂದ ಅತೀ ವೇಗದ ರೈಲಿಗೆ ಚಾಲನೆ ಸಿಕ್ಕಿದೆ. ಇದಿರಿಂದ ಪ್ರಾದೇಶಿಕ ಪ್ರಯಾಣಿಕರಿಗೆ ಅನೂಕೂಲ ಮಾತ್ರವಲ್ಲ. ಪ್ರವಾಸಿಗರ ಆಕರ್ಷಣೆಯಾಗಿ ಹೊರಹೊಮ್ಮಿದೆ. ಕೇರಳದ ಮೂಲಭೂತ ಸೌಕರ್ಯ(Kerala Infrastructure) ಅಭಿವೃದ್ಧಿಪಡಿಸುವ ಯೋಜನೆಯಡಿ 1 ಲಕ್ಷ ಕೋಟಿ ರೂಪಾಯಿ ಯೋಜನೆಗಳ ಕಾಮಗಾರಿ ನಡೆಯುತ್ತಿದೆ. ಇದರಿಂದ ಕೇರಳದಲ್ಲಿ ಉದ್ಯೋಗ, ಕೃಷಿ ಸೇರಿದಂತೆ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಯಾಗಲಿ ಎಂದು ಮೋದಿ(PM narendra Modi) ಹೇಳಿದ್ದಾರೆ. 

ದೇವರನಾಡಿಗೂ ಡಬಲ್ ಎಂಜಿನ್ ಸರ್ಕಾರ, ಮಲಯಾಳಂನಲ್ಲೇ ಮೋದಿ ಮಂತ್ರ!

ಕೇರಳದ ಸಂಪರ್ಕ(Kerala Conectivity) ಸೇತುವೆಗೆ ಹೆಚ್ಚಿನ ಒತ್ತು ನೀಡಿದೆ. ರಾಷ್ಟೀಯ ಹೆದ್ದಾರಿಯನ್ನು 6 ಪಥಗಳ ರಸ್ತೆಯನ್ನಾಗಿ ಮಾಡಲಾಗುತ್ತಿದೆ. ಇದಕ್ಕಾಗಿ 55 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಆಧುನಿಕ ಹಾಗೂ ಸುಲಭ ಸಂಪರ್ಕದಿಂದ ವ್ಯಾಪಾರ ಹಾಗೂ ಪ್ರವಾಸಿ ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ಸಿಗಲಿದೆ. ದೇಶದ ಅಭಿವೃದ್ಧಿಯಲ್ಲಿ ಟೂರಿಸಂ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಪ್ರವಾಸಿ ಕ್ಷೇತ್ರದಲ್ಲಿ ಎಲ್ಲಾ ವರ್ಗದ ಜನರು ಆದಾಯಗಳಿಸುತ್ತಾರೆ.

ಕೇಂದ್ರ ಸರ್ಕಾರ ಪ್ರವಾಸಿ ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ನೀಡುತ್ತಿದೆ ಮುದ್ರಾ ಯೋಜನೆಯಡಿ 10 ಲಕ್ಷ ರೂಪಾಯಿ ವರೆಗೆ ಸಾಲ ನೀಡಲಾಗುತ್ತಿದೆ. 70,000 ಕೋಟಿ ರೂಪಾಯಿ ಈಗಾಗಲೇ ಮುದ್ರಾ ಯೋಜನೆಯಡಿ ಸಾಲ ನೀಡಲಾಗಿದೆ. ಇತ್ತೀಚೆಗೆ ಹರ್ಯಾಣದಲ್ಲಿ ಕೇರಳದ ಮಾತೆ ಅಮೃತಾನಂದಮಯಿ ಅವರ ಆಸ್ಪತ್ರೆ ಉದ್ಘಾಟಿಸಿದೆ. ನಾನು ಧನ್ಯನಾದೆ. ಇಂದು ಮತ್ತೆ ಕೇರಳದ ಮಣ್ಣಿನಿಂದ ಅಮೃತಾನಂದಮಯಿ ಅವರಿಗೆ ಕೃತಜ್ಞತೆ ಅರ್ಪಿಸುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.

ಅಜಾದಿಕಾ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ನಾವೆಲ್ಲರೂ ಜೊತೆಯಾಗಿ ನಿಲ್ಲೋಣ. ಅಭಿವೃದ್ಧಿಯ ಪಥದಲ್ಲಿ ಸಾಗೋಣ. ಎಲ್ಲರಿಗೂ ಮತ್ತೊಮ್ಮೆ ಓಣಂ ಹಬ್ಬದ ಶುಭಾಶಯಗಳು ಎಂದು ಮೋದಿ(PM Modi in Kerala) ಹೇಳಿದ್ದಾರೆ.

click me!