ಭಾರತದಲ್ಲಿ ಮಾರುತಿ ಸುಜುಕಿಗೆ 40 ವರ್ಷ, ವಾಹನ ಉತ್ಪಾದನಾ, ಬ್ಯಾಟರಿ ಘಟಕದ ಶಿಲಾನ್ಯಾಸ!

By Suvarna News  |  First Published Aug 28, 2022, 6:30 PM IST

ಭಾರತದಲ್ಲಿ ಮಾರುತಿ ಸುಜುಕಿ 40 ವರ್ಷಗಳ ಸಂಭ್ರಮದಲ್ಲಿದೆ. ಇದರ ಪ್ರಯುಕ್ತ ಮಾರುತಿ ತನ್ನು ವಹಿವಾಟನ್ನು ಮತ್ತಷ್ಟು ವಿಸ್ತರಿಸಿದೆ. ಇಂದು ಅಹಮ್ಮದಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾರುತಿ ಸುಜುಕಿ ವಾಹನ ಉತ್ಪಾದನಾ ಘಟಕ ಹಾಗೂ ಬ್ಯಾಟರಿ ಘಟಕದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಮೋದಿ ಭಾಷಣದ ಹೈಲೈಟ್ಸ್ ಇಲ್ಲಿದೆ.


ಅಹಮ್ಮದಾಬಾದ್(ಆ.28): ಮಾರುತಿ ಸುಜುಕಿ ಭಾರತದಲ್ಲಿ ಅತ್ಯಂತ ಯಶಸ್ವಿ ಹಾಗೂ ಅತೀ ದೊಡ್ಡ ಆಟೋಮೊಬೈಲ್ ಕಂಪನಿಯಾಗಿ ಬೆಳೆದು ನಿಂತಿದೆ. ಇದು ಭಾರತ ಹಾಗೂ ಜಪಾನ್ ನಡುವಿನ ಅತ್ಯುತ್ತಮ ಸಂಬಂಧದ ಪ್ರತೀಕವಾಗಿದೆ. ಕಳೆದ 8 ವರ್ಷದಲ್ಲಿ ಈ ಸಂಬಂಧ ಮತ್ತಷ್ಟು ವೃದ್ಧಿಯಾಗಿದೆ. ಇದರ ಪರಿಣಾಮ ಮಾರುತಿ ಸುಜುಕಿ ಇದೀಗ ಭಾರತದಲ್ಲಿ ವ್ಯವಾಹಾರ ವೃದ್ಧಿಸುವುದರ ಜೊತೆಗೆ ಭಾರತದ ಆರ್ಥಿಕತೆಯಲ್ಲಿ ಅತೀ ದೊಡ್ಡ ಕೊಡುಗೆಯನ್ನು ನೀಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಾರುತಿ ಸುಜುಕಿ 40ನೇ ವರ್ಷದ ಸಂಭ್ರಮಾಚರಣೆಯಲ್ಲಿ ವಾಹನ ಉತ್ಪಾದನಾ ಘಟಕ ಹಾಗೂ ಬ್ಯಾಟರಿ ಉತ್ಪಾದನೆ ಘಟಕದ ಶಿಲಾನ್ಯಾಸ ನೆರವೇರಿಸಿ ಮೋದಿ ಮಾತನಾಡಿದರು. ಹರ್ಯಾಣದಲ್ಲಿ ಉತ್ಪಾದನಾ ಘಟಕ ಹಾಗೂ ಅಹಮ್ಮದಾಬಾದ್‌ನಲ್ಲಿ ಬ್ಯಾಟರಿ ಉತ್ಪಾದನಾ ಹೊಸ ಘಟಕವನ್ನು ಸುಜುಕಿ ತೆರೆದಿದೆ. 

ಜಪಾನಿಗಳು ನಿರ್ದಿಷ್ಠ ಗುರಿ ಇಲ್ಲದೆ ಯಾವುದೇ ಕೆಲಸಕ್ಕೆ ಇಳಿಯಲ್ಲ. ಹೀಗೆ ನಿರ್ದಿಷ್ಠ ಗುರಿಯೊಂದಿಗೆ ಭಾರತದಲ್ಲಿ ಆರಂಭಗೊಂಡ ಸುಜುಕಿ ಇದೀಗ 40 ವರ್ಷ ಪೂರೈಸಿ ಭಾರತದಲ್ಲಿ ಅತೀ ಹೆಚ್ಚು ವ್ಯವಹಾರ ನಡೆಸುವ ಕಂಪನಿಯಾಗಿದೆ. ಜಪಾನ್ ಮೂಲದ ಹಲವು ಕಂಪನಿಗಳು ಗುಜರಾತ್‌ನಲ್ಲಿದೆ. ಗುಜರಾತ್ ಹಾಗೂ ಜಪಾನ್ ಸಂಬಂಧ ಅತ್ಯುತ್ತಮವಾಗಿದೆ ಎಂದು ಮೋದಿ ಹೇಳಿದ್ದಾರೆ.

Latest Videos

undefined

Bagalkote: ಮನ್ ಕಿ ಬಾತ್‌ನಲ್ಲಿ ಬಿಲ್‌ಕೆರೂರ ಗ್ರಾಮದ ಕೆರೆ ಬಗ್ಗೆ ಶ್ಲಾಘನೀಯ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಆವಿಷ್ಕಾರಗಳು ನಡೆಯತ್ತಲೇ ಇದೆ. ಇದೀಗ ಭಾರತ ಎಲೆಕ್ಟ್ರಿಕ್ ವಾಹನಗಳ ಹಬ್ ಆಗಿ ಮಾರ್ಪಟ್ಟಿದೆ. ಎಲೆಕ್ಟ್ರಿಕ್ ವಾಹನ ಸದ್ದೇ ಬರುವುದಿಲ್ಲ. ಇದರ ಜೊತೆಗೆ ಸದ್ದಿಲ್ಲದೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನದ ಕ್ರಾಂತಿಯಾಗುತ್ತಿದೆ. ನಾವು ಎಲೆಕ್ಟ್ರಿಕ್ ವಾಹನದ ಪೂರೈಕೆ ಹಾಗೂ ಬೇಡಿಕೆಯಲ್ಲಿ ಸಮತೋಲನ ಕಾಪಾಡಿಕೊಂಡಿದೆ. ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ನೀಡುತ್ತಿದೆ. ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡಲಾಗುತ್ತಿದೆ. ಸಾಲದ ಸೌಲಭ್ಯ ಸುಲಭಗೊಳಿಸಲಾಗಿದೆ. ಈ ಮೂಲಕ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಇದರಲ್ಲಿ ಪ್ರಮುಖವಾಗಿ ಬ್ಯಾಟರಿ ಉತ್ಪಾದನೆಗೆ ಕೇಂದ್ರ ಸರ್ಕಾರ ಒತ್ತು ನೀಡಿದೆ. ಕೇಂದ್ರ ಈಗಾಗಲೇ ಬ್ಯಾಟರಿ ಸ್ವ್ಯಾಪ್ ಪಾಲಿಸಿಯನ್ನ ಜಾರಿಗೊಳಿಸಲಾಗಿದೆ ಎಂದು ಮೋದಿ ಹೇಳಿದ್ದಾರೆ. 

2030ರಲ್ಲಿ ಭಾರತ ಶೇಕಡಾ 50 ರಷ್ಟು ಎಲೆಕ್ಟ್ರಿಕ್ ವಾಹನ ಉಪಯೋಗ ಮಾಡಲಿದೆ ಎಂದು ಘೋಷಿಸಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ವ್ಯವಸ್ಥೆ, ಬ್ಯಾಟರಿ ಉತ್ಪಾದನೆ ಸೇರಿದಂತೆ ಹಲವು ಕ್ರಮಗಳನ್ನು ಮುತುವರ್ಜಿಯಿಂದ ಮಾಡುತ್ತಿದೆ. ನನಗೆ ಹೆಚ್ಚಿನ ಸಂತಸ ಎಂದರೆ ಮಾರುತಿ ಸುಜುಕಿ ಇದೀಗ ಹೈಬ್ರಿಡ್ ವಾಹನಗಳನ್ನು ಉತ್ಪಾದಿಸುತ್ತಿದೆ. ಇದೀಗ ಮಾರುತಿ ಬ್ಯಾಟರಿ ಉತ್ಪಾದನೆಗೆ ಮುಂದಾಗಿದೆ. ಇದರಿಂದ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಮತ್ತಷ್ಟು ವೇಗ ನೀಡಲಿದೆ ಎಂದು ಮೋದಿ ಹೇಳಿದ್ದಾರೆ. 

ಗುಜರಾತ್‌ನಲ್ಲಿ ಪ್ರಧಾನಿ ಮೋದಿ ರೋಡ್‌ಶೋ: ಭುಜ್‌ ಜನರಿಂದ ‘ನಮೋ’ಗೆ ಸ್ವಾಗತ

ಈ ಬೆಳವಣಿಗೆಗಳಿಂದ ಭಾರತ ಅತೀ ವೇಗವಾಗಿ ಆತ್ಮನಿರ್ಭರ ಭಾರತವಾಗಲಿದೆ. ಮಾರುತಿ ಸುಜುಕಿ ಹಾಗೂ ಇತರ ಆಟೋ ಕಂಪನಿಗಳಿಂದ ಭಾರತ ಮತ್ತಷ್ಟು ಆಟೋ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಲಿದೆ. ಇದರಿಂದ ಪರಿಸರಕ್ಕೆ ಪೂರಕವಾದ ವ್ಯವಸ್ಥೆಯನ್ನು ಕಲ್ಪಿಸಲಿದೆ ಎಂದು ಮೋದಿ ಹೇಳಿದ್ದಾರೆ. ಮಾರುತಿ ಸುಜುಕಿ ಸೇರದಂತೆ ಎಲ್ಲಾ ಆಟೋ ಕಂಪನಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಲ್ಲಾ ನೆರವು ನೀಡಲಿದೆ ಎಂದು ಮೋದಿ ಹೇಳಿದ್ದಾರೆ. 

click me!