
ಮುಂಬೈ (ಜು.16): ‘ನರೇಂದ್ರ ಮೋದಿ ನಮ್ಮ ಶತ್ರುವಲ್ಲ. ಅವರು ತಪ್ಪು ಮಾಡಿದರೆ ಅವರಿಗೆ ಹೇಳುತ್ತೇವೆ. ಆಶೀರ್ವಾದ ಬೇಡಿದರೆ ಆಶೀರ್ವದಿಸುತ್ತೇವೆ’ ಎಂದು ಉತ್ತರಾಖಂಡ ಬದರಿ ಜ್ಯೋತಿಷ್ಯಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಶ್ರೀಗಳು ಹೇಳಿದ್ದಾರೆ.
ಮುಕೇಶ್ ಅಂಬಾನಿ ಮದುವೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ(PM Modi) ತಮ್ಮ ಆಶೀರ್ವಾದ ಪಡೆದ ಪ್ರಸಂಗದ ಬಗ್ಗೆ ಸೋಮವಾರ ಶಂಕರಾಚಾರ್ಯರು ಪ್ರತಿಕ್ರಿಯಿಸಿ, ‘ಪ್ರಧಾನಿ ನನ್ನ ಬಳಿ ಬಂದು ನಮಸ್ಕಾರ ಮಾಡಿದರು. ಯಾರೇ ಬಂದು ನಮಸ್ಕರಿಸಿದರೂ ಆಶೀರ್ವಾದ ಮಾಡುವುದು ನಮ್ಮ ನಿಯಮ. ನರೇಂದ್ರ ಮೋದಿ(Narendra Modi) ನಮ್ಮ ಶತ್ರು ಅಲ್ಲ. ನಾವು ಅವರ ಹಿತೈಷಿಗಳು ಮತ್ತು ಅವರ ಒಳ್ಳೆಯದಕ್ಕಾಗಿಯೇ ಮಾತನಾಡುತ್ತೇವೆ. ಅವರು ತಪ್ಪು ಮಾಡಿದರೆ, ಅದನ್ನು ಗುರುತಿಸಿ ಅವರಿಗೆ ಹೇಳುತ್ತೇವೆ’ ಎಂದರು.
ವಿಶ್ವ ನಾಯಕ ಮೋದಿಗೆ 10 ಕೋಟಿ ‘ಎಕ್ಸ್’ ಫಾಲೋವರ್ಸ್: ಮೈಲಿಗಲ್ಲು!
ಇದೇ ವೇಳೆ, ಸೋಮವಾರ ಶಿವಸೇನೆ (UBT) ಮುಖಂಡ ಉದ್ಧವ್ ಠಾಕ್ರೆ ಮನೆಗೆ ಭೇಟಿ ನೀಡಿದ್ದ ಅವರು, ‘ದ್ರೋಹ ಮಾಡುವುದು ದೊಡ್ಡ ಪಾಪ. ದ್ರೋಹ ಮಾಡುವವನು ಹಿಂದೂ ಆಗುವುದಿಲ್ಲ. ಮಹಾರಾಷ್ಟ್ರದಲ್ಲಿ ಠಾಕ್ರೆ ಅವರಿಗೆ ದ್ರೋಹವಾಗಿದೆ. ಇದರಿಂದ ರಾಜ್ಯದ ಜನ ನೊಂದು ದ್ರೋಹಿಗಳಿಗೆ ಲೋಕಸಭೆ ಚುನಾವಣೆಯಲ್ಲಿ ಪಾಠ ಕಲಿಸಿದ್ದಾರೆ. ಠಾಕ್ರೆ ಮುಖ್ಯಮಂತ್ರಿಯಾಗುವವರೆಗೂ ಜನರ ನೋವು ಕಡಿಮೆ ಆಗಲ್ಲ’ ಎಂದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ