ಈ ಹಿಂದೆಯೂ ಪನ್ನಾ ಲಾಲ್ ಶಾಕ್ಯ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಚರ್ಚೆಯಲ್ಲಿದ್ದರು. ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ವಿದೇಶದಲ್ಲಿ ಮದುವೆಯಾಗಿರುವ ಕಾರಣ ದೇಶದ್ರೋಹಿಗಳು ಎಂದು ಹೇಳಿಕೆ ನೀಡಿದ್ದರು.
ಭೋಪಾಲ್: ಪದವಿ ಪಡೆಯುವುದರಿಂದ ಏನೂ ಲಾಭವಿಲ್ಲ. ಬದಲಿಗೆ ಸೈಕಲ್ ಪಂಕ್ಚರ್ ಅಂಗಡಿ ಹಾಗೂ ರಿಪೇರಿ ಅಂಗಡಿ ತೆರೆಯಿರಿ ಎಂದು ಬಿಜೆಪಿ ಶಾಸಕ ಪನ್ನಾಲಾಲ್ ಸಖ್ಯ ಹೇಳಿದ್ದಾರೆ. ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಾದ್ಯಂತ 55 ಜಿಲ್ಲೆಗಳಲ್ಲಿ ‘ಪಿಎಮ್ ಕಾಲೇಜ್ ಆಫ್ ಎಕ್ಸಲೆನ್ಸ್’ ಆನ್‌ಲೈನ್‌ನಲ್ಲಿ ಉದ್ಘಾಟಿಸಿದ್ದರು. ಅಮಿತ್ ಶಾ ಉದ್ಘಾಟಿಸಿದ ಸಮಾರಂಭದಲ್ಲಿ ಮಾತನಾಡಿದ ಸಖ್ಯ, ‘ಒಂದು ಮಾತನ್ನು ನೆನಪಿಟ್ಟುಕೊಳ್ಳಿ, ಬರೀ ಪದವಿ ಪಡೆಯುವುದರಿಂದ ಏನೂ ಪ್ರಯೋಜನವಿಲ್ಲ. ಬದಲಿಗೆ ಸೈಕಲ್ ರಿಪೇರಿ ಹಾಗೂ ಪಂಕ್ಚರ್ ಅಂಗಡಿಯನ್ನಾದರು ತೆರೆದರೆ ಜೀವನ ನಡೆಸಬಹುದು’ ಎಂದು ಪನ್ನಾಲಾಲ್ ಸಖ್ಯ ಹೇಳಿದ್ದಾರೆ.
ಇಂದು ನಾವು ಪಿಎಮ್ ಕಾಲೇಜ್ ಆಫ್ ಎಕ್ಸಲೆನ್ಸ್ ಉದ್ಘಾಟನೆ ಮಾಡುತ್ತಿದ್ದೇವೆ. ಇಂದು ನಾನು ನಿಮ್ಮೆಲ್ಲರಲ್ಲಿಯೂ ಒಂದು ಮನವಿಯನ್ನು ಮಾಡಿಕೊಳ್ಳುತ್ಥೇನೆ. ಇಂದು ನಾನು ಹೇಳುವ ಈ ಮಾತನ್ನು ಜೀವನದಲ್ಲಿ ಸದಾ ನೆನಪಿನಲ್ಲಿಟ್ಟುಕೊಳ್ಳಿ. ಮಹಾವಿದ್ಯಾಲಯಗಳಿಂದ ಪದವಿ ಪಡೆದುಕೊಳ್ಳುವದರಿಂದ ಏನೂ ಆಗಲ್ಲ. ಡಿಗ್ರಿ ಪಡೆಯುವ ಬದಲು ಜೀವನೋಪಾಯಕ್ಕಾಗಿ ಪಂಕ್ಚರ್ ಅಂಗಡಿ ಆರಂಭಿಸೋದು ಒಳ್ಳೆಯ ಮಾರ್ಗ ಎಂದು ಬಿಜೆಪಿ ಶಾಸಕರು ಉಚಿತ ಸಲಹೆಯನ್ನು ನೀಡಿದ್ದಾರೆ.
ಸರ್ಟಿಫಿಕೇಟ್‌ನಿಂದ ಯಾವುದೇ ಲಾಭವಿಲ್ಲ
ಈ ಉಚಿತ ಸಲಹೆ ನೀಡಿದ ಬಳಿಕ ಮಾತು ಮುಂದುವರಿಸಿದ ಶಾಸಕರು, ವಿಜ್ಞಾನ ಮತ್ತು ಗಣಿತದ ಫಾರ್ಮುಲಾಗಳನ್ನು ಸರಿಯಾಗಿ ತಿಳಿದುಕೊಳ್ಳಿ. ಕಾಲೇಜು ಮತ್ತು ಶಿಕ್ಷಣ ಸಂಸ್ಥೆಯಲ್ಲಿ ಸಂಕೋಚದಿಂದ ಇರಬಾರದು. ಈ ಪದವಿ ಪಡೆದ ನಂತರ ಸಿಗುವ ಸರ್ಟಿಫಿಕೇಟ್‌ನಿಂದ ಯಾವುದೇ ಲಾಭವಿಲ್ಲ. ಶಿಕ್ಷಣ ಸಂಸ್ಥೆಗಳಲ್ಲಿ ಎರಡೂವರೆ ಅಕ್ಷರ ಓದಿದ್ರೆ ಪಂಡಿರಾಗಲ್ಲ. ಹಾಗಾಗಿ ಜೀವನೋಪಾಯಕ್ಕಾಗಿ ಪ್ರತ್ಯೇಕ ಆಯ್ಕೆಯೊಂದನ್ನ ಮಾಡಿಕೊಳ್ಳಬೇಕು ಎಂದಿದ್ದಾರೆ.
ಭೋಜಶಾಲಾ ಸಂಕೀರ್ಣದಲ್ಲಿರುವ ಕಟ್ಟಡವು ಮಂದಿರವೋ ಮಸೀದಿಯೋ? -2000 ಪುಟಗಳ ವರದಿ ಸಲ್ಲಿಕೆ
ಸಸಿ ನೆಡುವ ಕಾರ್ಯಕ್ರಮಕ್ಕೂ ಟಾಂಗ್
ಇಂದೋರ್‌ನಲ್ಲಿ ಒಂದೇ ದಿನದಲ್ಲಿ 11 ಲಕ್ಷ ಸಸಿ ನೆಟ್ಟು ವಿಶ್ವ ದಾಖಲೆ ನಿರ್ಮಿಸಿದ ಬಗ್ಗೆ ಮಾತನಾಡಿದ ಅವರು, ‘ಜನರು ಗಿಡಗಳನ್ನು ನೆಡುತ್ತಾರೆ. ಆದರೆ ಅವುಗಳಿಗೆ ನೀರುಣಿಸಲು ತಯಾರಿಲ್ಲ. ಮಾಲಿನ್ಯದ ಬಗೆಗಿನ ಕಳವಳ ಹೆಚ್ಚುತ್ತಿದ್ದರೂ ಯಾರೂ ಪಂಚ ತತ್ವಗಳನ್ನು ರಕ್ಷಿಸುವತ್ತ ಗಮನ ಹರಿಸುತ್ತಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು
ಬಿಜೆಪಿ ಶಾಸಕರ ಈ ಹೇಳಿಕೆಗೆ ಕಾಂಗ್ರೆಸ್ ಹರಿಹಾಯ್ದಿದೆ. 400 ಕೋಟಿ ರೂ. ವೆಚ್ಚದಲ್ಲಿಅಮಿತ್ ಶಾ ಪಿಎಮ್ ಕಾಲೇಜ್ ಆಫ್ ಎಕ್ಸಲೆನ್ಸ್ ಉದ್ಘಾಟನೆ ಮಾಡ್ತಾರೆ. ಅದೇ ಪಕ್ಷದ ಶಾಸಕರು, ಶಿಕ್ಷಣದಿಂದ ಏನು ಲಾಭವಿಲ್ಲ ಎಂದು ಹೇಳುತ್ತಾರೆ. ಸರ್ಕಾರವೇ ಶಿಕ್ಷಣದ ಮಹತ್ವವನ್ನು ಕುಂದಿಸುವ ಕೆಲಸ ಮಾಡುತ್ತಿದೆ. ಬಿಜೆಪಿ ಶಾಸಕರೇ ಪಿಎಮ್ ಕಾಲೇಜ್ ಆಫ್ ಎಕ್ಸಲೆನ್ಸ್ ವಿರೋಧ ಮಾಡುತ್ತಿರೋದು ಗಮನಿಸಿದ್ರೆ ಇಲ್ಲಿ ಭ್ರಷ್ಟಾಚಾರ ನಡೆಯುತ್ತಿರಬಹುದು ಎಂದು ಕಾಂಗ್ರೆಸ್ ವಕ್ತಾರ ಸ್ವದೇಶ್ ಶರ್ಮಾ ಆರೋಪಿಸಿದ್ದಾರೆ.
ಈ ಹಿಂದೆಯೂ ಪನ್ನಾ ಲಾಲ್ ಶಾಕ್ಯ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಚರ್ಚೆಯಲ್ಲಿದ್ದರು. ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ವಿದೇಶದಲ್ಲಿ ಮದುವೆಯಾಗಿರುವ ಕಾರಣ ದೇಶದ್ರೋಹಿಗಳು ಎಂದು ಹೇಳಿಕೆ ನೀಡಿದ್ದರು. ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಹೆಚ್ಚಳಕ್ಕೆ ಮಹಿಳೆಯರೇ ಕಾರಣ ಎಂದಿದ್ದರು.
विधायक Panna Lal Shakya ने छात्रों को दी अनोखी सलाह, देखें वायरल हो रहा ये pic.twitter.com/SRpoYERXsH
— suman (@suman_pakad)