
ನವದೆಹಲಿ(ಮೇ.30): ಪ್ರಧಾನ ಮಂತ್ರಿ ನರೇಂದ್ರ ಮೋದಿ 77ನೇ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಕೊರೋನಾ ಮತ್ತು ಚಂಡಮಾರುತದ ಹಾನಿ ವಿರುದ್ಧ ಹೋರಾಡುತ್ತಿರುವವರನ್ನು ಶ್ಲಾಘಿಸಿದ್ದಾರೆ.
ಕೊರೋನಾ ವಾರಿಯರ್ಸ್ ಜತೆ ಮಾತನಾಡಿ ಮತ್ತಷ್ಟು ಧೈರ್ಯ ತುಂಬಿದ್ದಾರೆ. ಭಾರತದ ವಾಯುಸೇನೆ ಗ್ರೂಪ್ ಕ್ಯಾಪ್ಟನ್ ಎಕೆ ಪಟ್ನಾಯಕ್ ಬಗ್ಗೆಯೂ ಮೋದಿ ಮಾತನಾಡಿದ್ದಾರೆ. ಈ ವೇಳೆ ಪಟ್ನಾಯಕ್ ಅವರ 12 ವರ್ಷದ ಪುತ್ರಿ ಅದಿತಿ ಸಹ ಲೈನ್ ಗೆ ಬಂದು ಪ್ರಧಾನಿ ಜತೆ ಮಾತನಾಡಿದ್ದಾರೆ.
ವಾರಿಯರ್ಸ್ ಗಳಿಗೆ ಮನ್ ಕೀ ಬಾತ್ ನಲ್ಲಿ ಮೋದಿ ಸಲಾಂ
ನನ್ನ ತಂದೆ ಕುರಿತು ನನಗೆ ಹೆಮ್ಮೆ ಇದೆ, ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆಕ್ಸಿಜನ್ ಪೂರೈಕೆ ಮಾಡುತ್ತ ಕುಟುಂದಿಂದ ಅವರು ದೂರವೇ ಇದ್ದಾರೆ. ನಾವೆಲ್ಲರೂ ಸೇರಿ ಈ ಕೊರೋನಾದಿಂದ ಹೊರಗೆ ಬರುತ್ತೇವೆ, ಅದು ಸಾಧ್ಯವಾಗಲಿದೆ ಎಂದು ಎಂಟನೇ ತರಗತಿ ಬಾಲಕಿ ಹೇಳಿದ್ದಾಳೆ.
ಬಾಲಕಿಯ ಮಾತು ದೇವಿ ಸರಸ್ವತಿಯ ಮಾತಿನಂತೆ ಇದೆ. ನಮ್ಮೆಲ್ಲರ ಹೋರಾಟ ಸರಿಯಾದ ಹಾದಿಯಲ್ಲಿ ಮುಂದುವರಿಯುತ್ತದೆ ಎಂದು ಮೋದಿ ನುಡಿದಿದ್ದಾರೆ.
ಈ ವೇಳೆ ಸಂವಾದದಲ್ಲಿ ಮಾತನಾಡಿದ ಕ್ಯಾಪ್ಟನ್ ಎಕೆ ಪಟ್ನಾಯಕ್ ಮೊದಲು ಎರಡು ಮೂರು ದಿನ ತೆಗೆದುಕೊಳ್ಳುತ್ತಿದ್ದ ಆಕ್ಸಿಜನ್ ಪೂರೈಕೆ ಈಗ ಎರಡು-ಮೂರು ಗಂಟೆಯಲ್ಲಿ ಮುಕ್ತಾಯವಾಗುತ್ತಿದೆ. ಬೇರೆ ದೇಶದಿಂದ ಆಕ್ಸಿಜನ್ ತೆಗೆದುಕೊಂಡು ಬರುವ ಕೆಲಸವೂ ರೌಂಡ್ ದ ಕ್ಲಾಕ್ ನಡೆಯುತ್ತಿದೆ. ಕಳೆದ ಒಂದು ತಿಂಗಳಲ್ಲಿ ಭಾರತೀಯ ವಾಯುಪಡೆಯು 3,000 ಗಂಟೆಗಳ ಕಾಲ ಹಾರಾಟ ನಡೆಸಿ ಆಕ್ಸಿಜನ್ ಪೂರೈಸುವ ಕೆಲಸ ಮಾಡಿದೆ. 160 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿಸಿದರು.
ನರೇಂದ್ರ ಮೋದಿ ಕ್ಯಾಪ್ಟನ್‌ಗೆ ಧನ್ಯವಾದ ಅರ್ಪಿಸಿದರು. ಈ ಕೃತಜ್ಞತೆಯು ಕ್ಯಾಪ್ಟನ್ ಪಟ್ನಾಯಕ್‌ಗೆ ಮಾತ್ರವಲ್ಲದೆ ಎಲ್ಲಾ ಸಶಸ್ತ್ರ ಪಡೆಗಳಿಗೂ ನನ್ನಿಂದ ಎಂದು ತಿಳಿಸಿದರು. ಇದು ಸಾಮಾನ್ಯ ಕೆಲಸ ಅಲ್ಲ. ಈ ಹಿಂದೆ ಭಾರತವು 900 ಮೆಟ್ರಿಕ್ ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು ಉತ್ಪಾದಿಸುತ್ತಿತ್ತು. ಉತ್ಪಾದನೆ ಈಗ 10 ಪಟ್ಟು ಹೆಚ್ಚಾಗಿದೆ ಮತ್ತು ಈಗ 9,500 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕವನ್ನು ಉತ್ಪಾದಿಸಲಾಗುತ್ತಿದೆ ಎಂದು ಮೋದಿ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ