ಮೀರತ್(ಡಿ.2): ಪ್ರಧಾನಿ ನರೇಂದ್ರ ಮೋದಿ ಜಿಮ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾನು 2024 ಹಾಗೂ 2029 ಕ್ಕೂ ಸಧೃಡ ಹಾಗೂ ಸಮರ್ಥನಾಗಿದ್ದೇನೆ ಎಂದು ವಿಡಿಯೋಗೆ ಕ್ಯಾಪ್ಷನ್ ನೀಡಿದ್ದು, ಮಾಧವ ತಿವಾರಿ ಎಂಬುವವರು ಟ್ವಿಟ್ಟರ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೇಜರ್ ಧ್ಯಾನ್ ಚಂದ್(Dhyan Chand) ಕ್ರೀಡಾ ವಿಶ್ವವಿದ್ಯಾಲಯ (Sports University)ಕ್ಕೆ ಅಡಿಪಾಯ ಹಾಕಲು ಮೀರತ್‌ಗೆ ಆಗಮಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಮೀರತ್‌ನಲ್ಲಿ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯಕ್ಕೆ ಭಾನುವಾರ ಅಡಿಪಾಯ ಹಾಕಿದರು. ಮೀರತ್‌ನ ಸರ್ಧಾನ(Sardhana) ಪಟ್ಟಣದ ಸಲಾವಾ(Salawa) ಮತ್ತು ಕೈಲಿ(Kaili) ಪ್ರದೇಶದ ನಡುವೆ 700 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಈ ಕ್ರೀಡಾ ಸಂಸ್ಥೆಯನ್ನು ನಿರ್ಮಿಸಲು ಯೋಜಿಸಲಾಗಿದೆ. ಸಂಸ್ಥೆಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಜಿಮ್‌ಗೆ ತೆರಳಿದ ಪ್ರಧಾನಿ, ದೇಶಾದ್ಯಂತ ಫಿಟ್ ಇಂಡಿಯಾ ಎಂಬ ಸಂದೇಶವನ್ನು ಸಾರಿದರು. ಪ್ರಧಾನಿ ಮೋದಿ ಜಿಮ್‌ನಲ್ಲಿರುವ ಯಂತ್ರವೊಂದರಲ್ಲಿ ಕುಳಿತು ವ್ಯಾಯಾಮಾ ಮಾಡುತ್ತಿರುವ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ ಮತ್ತು ಅನೇಕರು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ.
in Gym
I am fit for twenty four and for twenty nine too. pic.twitter.com/LWKXhyEQrc
undefined
ದೇಶದ ನಾಗರಿಕರು, ರಾಷ್ಟ್ರದ ಅಭಿವೃದ್ಧಿಗೆ ದೇಶದ ನಾಯಕರು ನೀಡುವ ಕೊಡುಗೆಗಳನ್ನು ನೋಡುತ್ತಾರೆ. ಮೀರತ್‌ನಲ್ಲಿ ಈ ಕ್ರೀಡಾ ವಿಶ್ವವಿದ್ಯಾನಿಲಯದ ನಿರ್ಮಾಣವು ಕ್ರೀಡಾ ಸಂಸ್ಕೃತಿಯನ್ನು ಹುಟ್ಟುಹಾಕುವ ಮತ್ತು ದೇಶದ ಎಲ್ಲಾ ವಿಭಾಗಗಳಲ್ಲಿ ವಿಶ್ವದರ್ಜೆಯ ಅಥ್ಲೆಟಿಕ್ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಪ್ರಧಾನ ಮಂತ್ರಿಯವರ ಗುರಿಯನ್ನು ಸಾಧಿಸುವತ್ತ ಒಂದು ದೊಡ್ಡ ಹೆಜ್ಜೆಯಾಗಿದೆ ಎಂದು ಈ ಹೊಸ ಕ್ರೀಡಾ ವಿಶ್ವವಿದ್ಯಾನಿಲಯದ ಶಂಕುಸ್ಥಾಪನೆ ಬಗ್ಗೆ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Over Exercising Effect: ಜಿಮ್ ವರ್ಕೌಟ್ ಅತಿ ಬೇಡ, ಪುರುಷತ್ವವೇ ಹೋಗ್ಬೋದು!
ಹಾಕಿ ಮತ್ತು ಫುಟ್‌ಬಾಲ್ (football) ಮೈದಾನಗಳು, ಬ್ಯಾಸ್ಕೆಟ್‌ಬಾಲ್ ಮೈದಾನ, ವಾಲಿಬಾಲ್ (volleyball), ಹ್ಯಾಂಡ್‌ಬಾಲ್ ( handball) ಮತ್ತು ಕಬಡ್ಡಿ (kabaddi) ಮೈದಾನ, ಟೆನ್ನಿಸ್ ಕೋರ್ಟ್ ಲಾನ್ , ಜಿಮ್ನಾಷಿಯಂ ಹಾಲ್ (gymnasium hall), ಸಿಂಥೆಟಿಕ್ ರನ್ನಿಂಗ್ ಸ್ಟೇಡಿಯಂ, ಈಜುಕೊಳ, ವಿವಿಧೋದ್ದೇಶದ ಹಾಲ್ ಮತ್ತು ಸೈಕ್ಲಿಂಗ್ ಟ್ರ್ಯಾಕ್ (cycling track) ಎಲ್ಲವೂ ಕ್ರೀಡಾ ವಿಶ್ವ ವಿದ್ಯಾನಿಲಯದ ಭಾಗವಾಗಿರಲಿದೆ. ಆರ್ಚರಿ, ವೇಟ್‌ಲಿಫ್ಟಿಂಗ್, ಶೂಟಿಂಗ್, ಕ್ಯಾನೋಯಿಂಗ್, ಕಯಾಕಿಂಗ್, ಜಿಮ್ನಾಸ್ಟಿಕ್ಸ್ ಮತ್ತು ಸ್ಕ್ವಾಷ್ ಸೇರಿದಂತೆ ಎಲ್ಲಾ ಕ್ರೀಡೆಗಳ ಸೌಲಭ್ಯಗಳು ಈ ವಿಶ್ವವಿದ್ಯಾಲಯದಲ್ಲಿ ಲಭ್ಯವಿರಲಿದೆ.
ಜಿಮ್‌ಗಳಿಂದ ದೂರ ಉಳಿದ ಯುವ ಸಮೂಹ! ದಾಖಲಾಗುವುದಕ್ಕೂ ಹಿಂಜರಿಕೆ
ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವ ವಿದ್ಯಾನಿಲಯದ ಶಿಲಾನ್ಯಾಸ ಸಮಾರಂಭದಲ್ಲಿ ಮಾತನಾಡಿದ ಗೌರವಾನ್ವಿತ ಪ್ರಧಾನಿ, 700 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಈ ವಿಶ್ವ ವಿದ್ಯಾಲಯವು ಯುವ ಸಮೂಹಕ್ಕೆ ಅಂತಾರಾಷ್ಟ್ರೀಯ ಕ್ರೀಡಾ ಸೌಲಭ್ಯಗಳನ್ನು ಒದಗಿಸುತ್ತದೆ. ಪ್ರತಿ ವರ್ಷ, 1000 ಕ್ಕೂ ಹೆಚ್ಚು ಹುಡುಗಿಯರು ಮತ್ತು ಹುಡುಗರು ಇಲ್ಲಿಂದ ಪದವಿ ಪಡೆಯುತ್ತಾರೆ ಎಂದರು. ಘೋಷಣೆಯ ಪ್ರಕಾರ, ಈ ಕ್ರೀಡಾ ವಿಶ್ವವಿದ್ಯಾನಿಲಯವು 540 ಮಹಿಳೆಯರು ಮತ್ತು 540 ಪುರುಷರನ್ನು ಒಳಗೊಂಡು ಒಟ್ಟು 1,080 ಕ್ರೀಡಾಪಟುಗಳಿಗೆ ತರಬೇತಿ ನೀಡಲಿದೆ.