Latest Videos

ಇಸ್ರೇಲ್‌ನಿಂದ ಭಾರತೀಯರ ಕರೆತರಲು ಆಪರೇಶನ್ ಅಜಯ್ ಆರಂಭಿಸಿದ ಕೇಂದ್ರ ಸರ್ಕಾರ!

By Suvarna NewsFirst Published Oct 11, 2023, 11:10 PM IST
Highlights

ಇಸ್ರೇಲ್‌ನಲ್ಲಿನ ಯುದ್ಧ, ಭಯೋತ್ಪಾದಕರ ದಾಳಿಗೆ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ತವರಿಗೆ ಕರೆತರಲು ಭಾರತ ಆಪರೇಶನ್ ಅಜಯ್ ಕಾರ್ಯಾಚರಣೆ ಆರಂಭಿಸಿದೆ. 

ನವದೆಹಲಿ(ಅ.11) ಉಕ್ರೇನ್ ಮೇಲೆ ರಷ್ಯಾ ಯುದ್ದ ಆರಂಭಿಸಿದ ಬೆನ್ನಲ್ಲೇ ಭಾರತ ಆಪರೇಶನ್ ಗಂಗಾ ಕಾರ್ಯಾಚರಣೆ ಮೂಲಕ ಸುರಕ್ಷಿತವಾಗಿ ಭಾರತೀಯರನ್ನು ತವರಿಗೆ ಕರೆತಂದಿತ್ತು. ಇದೀಗ ಭಯೋತ್ಪಾದಕರ ದಾಳಿ, ಪ್ರತಿದಾಳಿಯಲ್ಲಿ ಸಿಲುಕಿರುವ ಭಾರತೀಯರನ್ನು ಇಸ್ರೇಲ್‌ನಿಂದ ಸುರಕ್ಷಿತವಾಗಿ ಕರೆತರಲು ಭಾರತ ಆಪರೇಶನ್ ಅಜಯ್ ಕಾರ್ಯಾಚರಣೆ ಆರಂಭಿಸಿದೆ. ಚಾರ್ಟೆಟ್ ವಿಮಾನದ ಮೂಲಕ ಭಾರತಕ್ಕೆ ಮರಳಲು ಇಚ್ಚಿಸುವ ಭಾರತೀಯರನ್ನು ಅತ್ಯಂತ ಸುರಕ್ಷಿತವಾಗಿ ತವರಿಗೆ ಕರೆತರಲಾಗುತ್ತದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಇಸ್ರೇಲ್‌ನಲ್ಲಿ ಸಿಲುಕಿರುವ ಹಲವು ಭಾರತೀಯರು ಈಗಾಗಲೇ ರಾಯಭಾರ ಕಚೇರಿ ವೆಬ್‌ಸೈಟ್ ಮೂಲಕ ನೋಂದಣಿ ಮಾಡಿದ್ದಾರೆ. ಭಾರತಕ್ಕೆ ಮರಳಲು ಇಚ್ಚಿಸುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲಾಗುತ್ತದೆ ಎಂದು ಜೈಶಂಕರ್ ಹೇಳಿದ್ದಾರೆ. ಮೊದಲ ಬ್ಯಾಚ್ ನಾಳೆ ಇಸ್ರೇಲ್‌ನಿಂದ ಹೊರಡಲಿದೆ. ತವರಿಗೆ ಮರಳಲು ವಿಶೇಷ ವಿಮಾನ ವ್ಯವಸ್ಥೆ ಮಾಡಲಾಗಿದೆ. ಇಸ್ರೇಲ್‌ನ ಭಾರತೀಯ ರಾಯಭಾರ ಕಚೇರಿ ಎಲ್ಲಾ ವ್ಯವಸ್ಥೆ ಮಾಡಿದ್ದು, ನಾಳೆಯಿಂದ ತಾಯ್ನಾಡಿಗೆ ಹಂತ ಹಂತವಾಗಿ ಭಾರತೀಯರು ಮರಳಲಿದ್ದಾರೆ.

ಹಮಾಸ್ ಬಳಿಕ ಉತ್ತರ ಇಸ್ರೇಲ್ ಗಡಿ ಸ್ಫೋಟಿಸಿ ಒಳನುಗ್ಗಿದ ಲೆಬೆನಾನ್ ಹೆಝ್‌ಬೊಲ್ಹಾ ಉಗ್ರರು!

ಇಸ್ರೇಲ್ ಪರಿಸ್ಥಿತಿ ಗಂಭೀರವಾಗುತ್ತಿದೆ. ಇಸ್ರೇಲ್ ಹಮಾಸ್ ಉಗ್ರರ ವಿರುದ್ದ ಹೋರಾಟ ತೀವ್ರಗೊಳಿಸಿದ್ದರೆ, ಇದೀಗ ಇಸ್ರೇಲ್ ವಿರುದ್ಧ ಲೆಬೆನಾನ್ ಉಗ್ರರು, ಸಿರಿಯಾ ಉಗ್ರರು ದಾಳಿ ಆರಂಭಿಸಿದ್ದಾರೆ. ಹೀಗಾಗಿ ಈ ಯುದ್ಧ ತೀವ್ರಸ್ವರೂಪ ಪಡೆದುಕೊಳ್ಳುತ್ತಿದೆ. ಇತ್ತ ಇಸ್ರೇಲ್ ಮೇಲೆ ಭಯೋತ್ಪಾದಕ ದಾಳಿ ಬೆನ್ನಲ್ಲೇ ಕೇಂದ್ರ ಸರ್ಕಾರ ಭಾರತೀಯರ ನೆರವಿಗೆ ದಾವಿಸಿತ್ತು. 

 

Launching to facilitate the return from Israel of our citizens who wish to return.

Special charter flights and other arrangements being put in place.

Fully committed to the safety and well-being of our nationals abroad.

— Dr. S. Jaishankar (@DrSJaishankar)

 

ಸಹಾಯವಾಣಿ ಆರಂಭಿಸಿತ್ತು. ಇತ್ತ ರಾಯಭಾರ ಕಚೇರಿ ವೆಬ್‌ಸೈಟ್ ಹಾಗೂ ಇಮೇಲ್ ಮೂಲಕ ಭಾರತಕ್ಕೆ ಮರಳಲು ಇಚ್ಚಿಸುವ, ನೆರವು ಅಗತ್ಯವಿರುವ ನಾಗರೀಕರು ಸಂಪರ್ಕಿಸಲು ಕೋರಲಾಗಿತ್ತು. ಇಸ್ರೇಲ್‌ನಲ್ಲಿನ ಬಹುತೇಕ ಭಾರತೀಯರು ರಾಯಭಾರ ಕಚೇರಿ ಜೊತೆ ಸಂಪರ್ಕ ಸಾಧಿಸಿದ್ದಾರೆ. ಇದೀಗ ಆಪರೇಶನ್ ಅಜಯ್ ಮೂಲಕ ಭಾರತ ವಿದೇಶಾಂಗ ಸಚಿವಾಲಯ ಭಾರತೀಯರನ್ನು ತಾಯ್ನಾಡಿಗೆ ಕರೆತರುವ ಮತ್ತೊಂದು ಮಹತ್ ಕಾರ್ಯಕ್ಕೆ ಕೈಹಾಕಿದೆ.

'ಏಳು ತಿಂಗಳ ಯುದ್ಧ..' ಇಸ್ರೇಲ್‌-ಹಮಾಸ್‌ ಯುದ್ಧದ ಬಗ್ಗೆ ನಿಜವಾದ ನಾಸ್ಟ್ರಾಡಾಮಸ್‌ ಭವಿಷ್ಯ!

ರಷ್ಯಾ ಉಕ್ರೇನ್ ಯುದ್ಧದ ವೇಳೆ ಉಕ್ರೇನ್‌ನಲ್ಲಿ ಸಿಲುಕಿದ್ದ ಬರೋಬ್ಬರಿ 20,000 ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿತ್ತು. ಆಪರೇಶನ್ ಗಂಗಾ ಕಾರ್ಯಾಚರಣೆ ಮೂಲಕ ಭಾರತ ಯಶಸ್ವಿಯಾಗಿ ಭಾರತೀಯರನ್ನು ಕರೆತಂದಿತ್ತು. ಭಾರತದ ಆಪರೇಶನ್ ಗಂಗಾ ಕಾರ್ಯಾಚರಣೆ ವೇಳೆ ರಷ್ಯಾ ಯುದ್ಧವನ್ನೇ ಸ್ಥಗಿತಗೊಳಿಸಿತ್ತು.

click me!