ಮಹಿಳಾ ಸೈನಿಕರಿಗೆ ದೀಪಾವಳಿ ಹಬ್ಬದ ಬಂಪರ್ ಗಿಫ್ಟ್ ಘೋಷಿಸಿದ ಮೋದಿ ಸರ್ಕಾರ!

By Suvarna NewsFirst Published Nov 5, 2023, 3:31 PM IST
Highlights

ದೀಪಾವಳಿ ಹಬ್ಬಕ್ಕೆ ಕೇಂದ್ರ ಸರ್ಕಾರ ಮಹಿಳಾ ಸೈನಿಕರಿಗೆ ಬಂಪರ್ ಗಿಫ್ಟ್ ಘೋಷಿಸಿದೆ. ಈ ಬಾರಿಯ ಬೆಳಕಿನ ಹಬ್ಬಕ್ಕೆ ಕೇಂದ್ರ ಸರ್ಕಾರ ಘೋಷಿಸಿದ ಉಡುಗೊರೆ ಏನು?
 

ನವದೆಹಲಿ(ನ.05) ಕೇಂದ್ರ ಬಿಜೆಪಿ ಸರ್ಕಾರ ಕಳೆದ ಒಂಭತೂವರೆ ವರ್ಷದಲ್ಲಿ ಭಾರತದ ರಕ್ಷಣಾ ಪಡೆಗಳ ಸ್ವರೂಪ ಬದಲಿಸಿದ್ದಾರೆ. ಅತ್ಯಾಧುನಿಕ ಶಸ್ತ್ರಾಸ್ತ್ರ ಪೂರೈಕೆ, ಗಡಿಯಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ, ಅಗ್ನೀವರ್, ಶಸ್ತ್ರಾಸ್ತ್ರಗಳ ಉತ್ಪಾದನೆ ಸೇರಿದಂತೆ ಹಂತ ಹಂತವಾಗಿ ಭಾರತ ಮಹತ್ತರ ಬದಲಾವಣೆಗ ಮುನ್ನುಡಿ ಬರೆದಿದೆ. ಇದೀಗ ಈ ಬಾರಿಯ ದೀಪಾವಳಿ ಹಬ್ಬಕ್ಕೆ ಮೋದಿ ಸರ್ಕಾರ ಮಹಿಳಾ ಯೋಧರಿಗೆ ಬಂಪರ್ ಕೊಡುಗೆ ಘೋಷಿಸಿದೆ. ಭಾರತೀಯ ಸೇನೆ, ನೌಕಾಪಡೆ ಹಾಗೂ ವಾಯುಸೇನೆಯ ಎಲ್ಲಾ ಮಹಿಳಾ ಯೋಧರು, ಅಧಿಕಾರಿಗಳು, ಯಾವುದೇ ರ್ಯಾಂಕ್‌ನಲ್ಲಿರುವ ಮಹಿಳೆಯರಿಗೆ ಒಂದೇ ರೀತಿಯ ರಜಾ ಸೌಲಭ್ಯ ಘೋಷಿಸಿದೆ. ಮೆಟರ್ನಿಟಿ ರಜೆ, ಮಕ್ಕಳ ಪಾಲನೆ ರಜನೆ, ಮಕ್ಕಳ ದತ್ತು ಪಾಲನೆ ರಜೆ ಸೇರಿದಂತೆ ಎಲ್ಲಾ ರಜಾ ಸೌಲಭ್ಯಗಳು ಮಹಿಳೆಯರಿಗೆ ಸಮಾನವಾಗಿ ಸಿಗಲಿದೆ.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಹಿಳಾ ಯೋಧರ ರಜೆ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದಾರೆ. ಭದ್ರತಾ ಪಡೆಯಲ್ಲಿರುವ ಎಲ್ಲಾ ಮಹಿಳಾ ಯೋಧರು, ಅಧಿಕಾರಿಗಳು ಸೇರಿದಂತೆ ಎಲ್ಲಾ ಶ್ರೇಣಿಯಲ್ಲಿರುವ ಮಹಿಳಾ ಅಧಿಕಾರಿಗಳಿಗೆ ಸಮಾನ ರಜಾ ಸೌಲಭ್ಯ ನೀಡಲಾಗಿದೆ. ಈ ಕುರಿತು ರಾಜನಾಥ್ ಸಿಂಗ್ ಘೋಷಣೆ ಮಾಡಿದ್ದಾರೆ.

ಪಾಕ್‌ ದಾಳಿಯಲ್ಲಿ ಕರ್ನಾಟಕದ ಯೋಧನಿಗೆ ತೀವ್ರ ಗಾಯ: ಸತತ 7 ತಾಸು ಅಪ್ರಚೋದಿತ ದಾಳಿ ನಡೆಸಿದ ಪಾಕ್‌ ಸೇನೆ

ಸಶಸ್ತ್ರ ಪಡೆಗಳಲ್ಲಿರುವ ಎಲ್ಲಾ ಮಹಿಳೆಯರಿಗೆ ಸಮಾನರೀತಿಯ ಸೌಲಭ್ಯ ಕಲ್ಪಿಸಲಾಗಿದೆ. ರಜೆ ನಿಯಮಗಳ ವಿಸ್ತರಣೆಯಿಂದ ಮಹಿಳಾ ಯೋಧರ ಮಕ್ಕಳ ಪಾಲನೆ, ಮೆಟರ್ನಿಟಿ ರಜೆಗಳಿಗೆ ಅನೂಕೂಲವಾಗಿದೆ. ಮಹಿಳೆಯರು ಕುಟುಂಬದ ಜವಾಬ್ದಾರಿ ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಹೀಗಾಗಿ ಮಹಿಳಾ ಯೋಧರಿಗೂ ಇತರ ಶ್ರೇಣಿಯಲ್ಲಿರು ಮಹಿಳಾ ಅಧಿಕಾರಿಗಳಂತೆ ರಜೆ ಅವಶ್ಯಕತೆ ಇತ್ತು. ಈ ಪ್ರಸ್ತಾವನೆಗೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ಈ ನಿರ್ಧಾರದಿಂದ ವೃತ್ತಿಪರ ಹಾಗೂ ಕೌಟುಂಬಿಕ ಕ್ಷೇತ್ರದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ ಎಂದಿದ್ದಾರೆ. 

 

Raksha Mantri Shri has approved a proposal for extension of the rules for Maternity, Child Care and Child Adoption Leaves for women soldiers, sailors and air warriors in the Armed Forces at par with their officer counterparts. With the issuing of the rules, the…

— रक्षा मंत्री कार्यालय/ RMO India (@DefenceMinIndia)

 

2019ರಲ್ಲಿ ಭಾರತೀಯ ಸೇನೆಯ ಕಾರ್ಪ್ ಮಿಲಿಟರಿ ಯೋಧರಾಗಿ ಮಹಿಳೆಯನ್ನು ನೇಮಕ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಇದೀಗ ಮಹಿಳೆಯರಿಗೆ ಮತ್ತೊಂದು ಬಂಪರ್ ಕೊಡುಗೆಯನ್ನು ಕೇಂದ್ರ ಸರ್ಕಾರ ನೀಡಿದೆ.  2023ರ ಮಾರ್ಚ್‌ನಿಂದ ಕಾಶ್ಮೀರದ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಸಿಆರ್‌ಪಿಎಫ್‌ನ ಮಹಿಳಾ ಯೋಧರನ್ನು ನಿಯೋಜಿಸಲಾಗಿತ್ತು. 6 ತಿಂಗಳ ಕಾಲ ಪರೀಕ್ಷಾರ್ಥವಾಗಿ ಮಹಿಳಾ ಸಿಆರ್‌ಪಿಎಫ್‌ ತಂಡವನ್ನು ನಿಯೋಜಿಸಲಾಗಿತ್ತು. ಈ ವೇಳೆ ಮಹಿಳಾ ಯೋಧರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು.  

ಚೀನಾಗೆ ಠಕ್ಕರ್‌: ತವಾಂಗ್ ಗಡಿಯಲ್ಲಿ ಸೈನಿಕರ ಜತೆ ದಸರಾ ಆಚರಿಸಿದ ರಾಜನಾಥ್‌ ಸಿಂಗ್

click me!