ಬೆಂಗಳೂರು-ಧಾರವಾಡ ವಂದೇ ಭಾರತ್‌ ರೈಲಿಗೆ ಪ್ರಧಾನಿ ಮೋದಿ ಚಾಲನೆ, ಕರ್ನಾಟಕದ 2ನೇ ಎಕ್ಸ್‌ಪ್ರೆಸ್ ರೈಲು ಹೆಗ್ಗಳಿಕೆ!

By Suvarna News  |  First Published Jun 27, 2023, 10:46 AM IST

ಕರ್ನಾಟಕದ 2ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಬೆಂಗಳೂರು-ಧಾರವಾಡ ಎಕ್ಸ್‌ಪ್ರೆಸ್ ರೈಲಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ.


ಭೋಪಾಲ್(ಜೂ.27) ಕರ್ನಾಟಕದ ರಾಜ್ಯದ 2ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ವರ್ಚುವಲ್ ಮೂಲಕ ಮೋದಿ ಚಾಲನೆ ನೀಡಿದ್ದಾರೆ. ಮಧ್ಯಪ್ರದೇಶದ ರಾಣಿ ಕಮಲಾಪತಿ ರೈಲ್ವೆ ನಿಲ್ದಾಣದಲ್ಲಿ  ಆಯೋಜಿಸಿದ ಕಾರ್ಕ್ರಮದಲ್ಲಿ ಪ್ರಧಾನಿ ಮೋದಿ ಒಟ್ಟು 5 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ್ದಾರೆ. ಇದರಲ್ಲಿ ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕೂಡ ಸೇರಿಕೊಂಡಿದೆ. ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿದರು. ಈ ಮೂಲಕ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ್ದಾರೆ. ಇತ್ತ ಧಾರವಾಡದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದಾರೆ.

ಪ್ರಧಾನಿ ಮೋದಿ ಹಸಿರು ನಿಶಾನೆ ತೋರುತ್ತಿದ್ದಂತೆ ಧಾರವಾಡ ರೈಲ ನಿಲ್ದಾಣದಲ್ಲಿ ನಿಂತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದೆ.ಇನ್ನುಳಿದ 4 ವಂದೇ ಭಾರತ್ ರೈಲು ಕೂಡ ಪ್ರಯಾಣ ಆರಂಭಿಸಿದೆ. ಈ ರೈಲು (ರೈ.ಸಂ. 20661) ಬೆಳಗ್ಗೆ 5.45ಕ್ಕೆ ಕೆಎಸ್‌ಆರ್‌ ಬೆಂಗಳೂರು ನಿಲ್ದಾಣದಿಂದ ಹೊರಟು 5.57ಕ್ಕೆ ಯಶವಂತಪುರ, 9.17ಕ್ಕೆ ದಾವಣಗೆರೆ, 11.35ಕ್ಕೆ ಹುಬ್ಬಳ್ಳಿ ಹಾಗೂ ಮಧ್ಯಾಹ್ನ 12.10ಕ್ಕೆ ಧಾರವಾಡ ತಲುಪಲಿದೆ. ಹಿಂದಿರುಗುವಾಗ (ರೈ.ಸಂ. 20662) ಮಧ್ಯಾಹ್ನ 1.15ಕ್ಕೆ ಧಾರವಾಡ ಬಿಟ್ಟು 1.40ಕ್ಕೆ ಎಸ್‌ಎಸ್‌ಎಸ್‌ ಹುಬ್ಬಳ್ಳಿ, 3.38ಕ್ಕೆ ದಾವಣಗೆರೆ, 7.13ಕ್ಕೆ ಯಶವಂತಪುರ, 7.45ಕ್ಕೆ ಕೆಎಸ್‌ಆರ್‌ ಬೆಂಗಳೂರು ತಲುಪಲಿದೆ.

Tap to resize

Latest Videos

ಭಾರತದ ರಾಷ್ಟ್ರಗೀತೆ ಹಾಡಿ, ಪಿಎಂ ಕಾಲಿಗೆರಗಿದ ಅಮೆರಿಕ ಗಾಯಕಿ, ವಿಶ್ವಗುರು ಆಗೋದು ಅಂದ್ರೆ ಇದಲ್ಲವೇ?

ವಂದೇಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳು ಗಂಟೆಗೆ ಗರಿಷ್ಠ 180 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿವೆ. ಇದಲ್ಲದೆ ಅತ್ಯುತ್ತಮ ಸೀಟುಗಳು, ಗುಣಮಟ್ಟದ ಆಹಾರ, ಶುಚಿತ್ವಕ್ಕೆ ಆದ್ಯತೆ, ಲಗೇಜ್‌ ಇಡಲು ಅನುಕೂಲಕರ ಸ್ಥಳ ಸೇರಿದಂತೆ ಗುಣಮಟ್ಟದ ಸೇವೆ ನೀಡುತ್ತದೆ. ಆದರೆ ಇತರೆ ರೈಲುಗಳಿಗೆ ಹೋಲಿಸಿದರೆ ಇವುಗಳ ಟಿಕೆಟ್‌ ದರ ಸಾಕಷ್ಟುದುಬಾರಿ ಇದೆ.

ಬೆಂಗಳೂರಿನಿಂದ ಬೆಳಗ್ಗೆ 5.45ಗಂಟೆಗೆ ಹೊರಡುವ 20661 ಸಂಖ್ಯೆಯ ವಂದೇ ಭಾರತ್‌ ರೈಲು ಬೆಂಗಳೂರಿನಿಂದ ಯಶವಂತಪುರಕ್ಕೆ ಎಸಿ ಚೇರ್‌ ಕಾರ್‌ .410, ಎಕ್ಸಕ್ಯೂಟಿವ್‌ ಕ್ಲಾಸ್‌ಗೆ .545 ದರ ನಿಗದಿಗೊಳಿಸಿದೆ. ಬೆಂಗಳೂರಿನಿಂದ ದಾವಣಗೆರೆಗೆ .915, .1740, ಬೆಂಗಳೂರಿನಿಂದ ಹುಬ್ಬಳ್ಳಿಗೆ .1135, .2180, ಬೆಂಗಳೂರಿನಿಂದ ಧಾರವಾಡಕ್ಕೆ .1165, .2010, ಯಶವಂತಪುರದಿಂದ ದಾವಣಗೆರೆಗೆ .900, .1710, ಯಶವಂತಪುರದಿಂದ ಹುಬ್ಬಳ್ಳಿಗೆ .1135, .2180, ಯಶವಂತಪುರದಿಂದ ಧಾರವಾಡಕ್ಕೆ .1165, .2245, ದಾವಣಗೆರೆಯಿಂದ ಹುಬ್ಬಳ್ಳಿಗೆ .500, .985, ದಾವಣಗೆರೆಯಿಂದ ಧಾರವಾಡಕ್ಕೆ .535, .1055, ಹುಬ್ಬಳ್ಳಿಯಿಂದ ಧಾರವಾಡಕ್ಕೆ .410, .545 ದರ ನಿಗದಿಗೊಳಿಸಲಾಗಿದೆ. ಈ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಬೆಳಗಿನ ಉಪಹಾರದ ವೆಚ್ಚ ಸೇರಿ ದರ ನಿಗದಿಗೊಳಿಸಲಾಗಿದೆ.

ಅಮೆರಿಕ ಸಂಸದರ ಹೊಗಳಿ ರಾಹುಲ್‌ ಕಾಲೆಳೆದ ಮೋದಿ: ಎಐ ಎಂದರೆ ಅಮೆರಿಕ, ಇಂಡಿಯಾ: ಪ್ರಧಾನಿ ಬಣ್ಣನೆ

ಉಳಿದ 4 ರೈಲುಗಳೆಂದರೆ ಭೋಪಾಲ್‌- ಇಂದೋರ್‌, ಭೋಪಾಲ್‌-ಜಬಲ್ಪುರ, ರಾಂಚಿ-ಪಟನಾ, ಮತ್ತು ಗೋವಾ-ಮುಂಬೈ ವಂದೇ ಭಾರತ್‌ ಎಕ್ಸ್‌ಪ್ರೆಸ್‌. ಈ ಪೈಕಿ ಗೋವಾ ಮೊದಲ ಬಾರಿಗೆ ವಂದೇ ಭಾರತ್‌ ರೈಲು ಸೇವೆ ಪಡೆಯುತ್ತಿದೆ.
 

click me!