ಉಪವಾಸ ಅಂತ್ಯಗೊಳಿಸಲು ಏನಾದರು ಕೊಡುವುದಿದ್ದರೆ..,ಮೋದಿ ಮನವಿಗೆ ಭಾವುಕರಾದ ಸ್ವಾಮೀಜಿ!

By Suvarna News  |  First Published Jan 23, 2024, 3:52 PM IST

ಸ್ವಾಮಿ ಗೋವಿಂದ್ ದೇವ್ ಗಿರಿ ಮಹಾರಾಜ್ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರ ಪ್ರಾಣಪ್ರತಿಷ್ಠೆಗಾಗಿ ಕೈಗೊಂಡ ಉಪವಾಸ ವೃತ್ಯ ಅಂತ್ಯಗೊಳಿಸಿದ್ದರು. ಜೇನು ಹಾಗೂ ನಿಂಬೆ ರಸ ಮಿಶ್ರಿತ ನೀರು ನೀಡಿ ಮೋದಿ ಉಪವಾಸ ಅಂತ್ಯಗೊಳಿಸಲು ಸ್ವಾಮೀಜಿ ನಿರ್ಧರಿಸಿದ್ದರು. ಆದರೆ ಮೋದಿಯ ಮನವಿ ನನ್ನ ಅಂತಃಕರಣದಲ್ಲಿ ಮಾತೃತ್ವ ಭಾವ ಮೂಡಿಸಿತ್ತು. ನನ್ನ ಮಗನ ಉಪವಾಸ ಅಂತ್ಯಗೊಳಿಸುತ್ತಿರುವ ಅನುಭವವಾಯಿತು ಎಂದಿದ್ದಾರೆ. ಅಷ್ಟಕ್ಕೂ ಮೋದಿ ಉಪವಾಸ ಅಂತ್ಯಗೊಳಿಸಲು ಸ್ವಾಮೀಜಿ ನೀಡಿದ್ದೇನು?


ಆಯೋಧ್ಯೆ(ಜ.23) ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಯಾಗಿ ಇದೀಗ ಸಾರ್ವಜನಿಕರ ದರ್ಶನಕ್ಕೂ ಮುಕ್ತವಾಗಿದೆ. ಶತ ಶತಮಾನಗಳ ಹೋರಾಟದ ಫಲವಾಗಿ ಭವ್ಯ ರಾಮ ಮಂದಿರದಲ್ಲಿ ಮತ್ತೆ ಪ್ರಭು ಶ್ರೀರಾಮ ವಿರಾಜಮಾನನಾಗಿದ್ದಾನೆ. ರಾಮ ಮಂದಿರ ಬಾಲರಾಮನ ಪ್ರಾಣಪ್ರತಿಷ್ಠೆಗೆ ಪ್ರಧಾನಿ ನರೇಂದ್ರ ಮೋದಿ 11 ದಿನಗಳ ಕಠಿಣ ಉಪವಾಸ ವೃತ ಕೈಗೊಂಡಿದ್ದರು. ಪ್ರಾಣಪ್ರತಿಷ್ಠೆ ಬಳಿಕ ಸ್ವಾಮಿ ಗೋವಿಂದ್ ದೇವ್ ಗಿರಿ ಮಹಾರಾಜ್ ಸಮ್ಮುಖದಲ್ಲಿ ಪ್ರಧಾನಿ ಮೋದಿ ಉಪವಾಸ ಅಂತ್ಯಗೊಳಿಸಿದರು. ಗೋವಿಂದ್ ದೇವ್ ಗಿರಿ ಮಹಾರಾಜ್ ಹಾಗೂ ಇತರ ಹಿರಿಯ ಸ್ವಾಮೀಜಿಗಳು ಪ್ರಧಾನಿ ಮೋದಿಗೆ ಜೇನು ಹಾಗೂ ನಿಂಬೆ ರಸ ಮಿಶ್ರಿತ ನೀರು ನೀಡಲು ನಿರ್ಧರಿಸಿದ್ದರು. ಆದರೆ ಸ್ವಾಮಿ ಸ್ವಾಮಿ ಗೋವಿಂದ್ ದೇವ್ ಗಿರಿ ಮಹಾರಾಜ್‌ಗೆ ಮೋದಿ ವಿಶೇಷ ಮನವಿ ಮಾಡಿದ್ದರು. ನೀವು ನನ್ನ ಉಪವಾಸ ಅಂತ್ಯಗೊಳಿಸಲು ಏನಾದರು ನೀಡುತ್ತಿದ್ದರೆ ಅದು ರಾಮಲಲ್ಲಾನ ಚರಣಾಮೃತ ನೀಡಿ ಎಂದು ಮನವಿ ಮಾಡಿದರು. ಶ್ರೀರಾಮಲಲ್ಲಾ ಚರಣಗಳಿಗೆ ಮಾಡಿದ ಅಭಿಷೇಕ ಸ್ವೀಕರಿಸಿ ಮೋದಿಗೆ  ತಮ್ಮ ಉಪವಾಸ ಅಂತ್ಯಗೊಳಿಸಿದರು ಎಂದು ಸ್ವಾಮಿ ಗೋವಿಂದ್ ದೇವ್ ಗಿರಿ ಮಹಾರಾಜ್‌ ಹೇಳಿದ್ದಾರೆ.

ಭವ್ಯ ರಾಮ ಮಂದಿರದಲ್ಲಿ 12.20ರಿಂದ ರಾಮ ಲಲ್ಲಾನ ಪ್ರಾಣಪ್ರತಿಷ್ಠೆ ಶಾಸ್ತ್ರಗಳು ಆರಂಭಗೊಂಡಿತು. ಪ್ರಾಣಪ್ರತಿಷ್ಠೆ ಬಳಿಕ ಮೊದಲ ಮಂಗಳರಾತಿ, ಅಭಿಷೇಖ, ಪೂಜೆ ನಡೆಯಿತು. 1 ಗಂಟೆ ಹೊತ್ತಿಗೆ ಎಲ್ಲಾ ಪೂಜಾ ವಿಧಿವಿಧಾನಗಳು ಮುಗಿದಿತ್ತು. ಬಳಿಕ ಸ್ವಾಮೀಜಿಗಳೊಡನೆ ವೇದಿಕೆಗೆ ಆಗಮಿಸಿದ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಶಾಸ್ತ್ರಗಳ ಪ್ರಕಾರ ಯಜಮಾನನ ಸ್ಥಾನದಲ್ಲಿ ನಿಂತು ಪ್ರಾಣಪ್ರತಿಷ್ಠೆ ನೆರವೇರಿಸಿದ ವ್ಯಕ್ತಿಗೆ ಹಿರಿಯರು ಅಥವಾ ಸ್ವಾಮೀಜಿಗಳ ಸಮ್ಮುಖದಲ್ಲಿ ಕೈಗೊಂಡ ಉಪವಾಸ, ವೃತಗಳನ್ನು ಅಂತ್ಯಗೊಳಿಸಲು ಹಾಲು ಅಥವಾ ಇತರ ಹಣ್ಣಿನ ರಸಗಳನ್ನು ನೀಡಲಾಗುತ್ತದೆ.

Tap to resize

Latest Videos

ಶ್ರೀರಾಮ ಪ್ರಸಾದ ಸ್ವೀಕರಿಸುವ ಮೂಲಕ ಪ್ರಾಣಪ್ರತಿಷ್ಠೆಗೆ ಕೈಗೊಂಡ ಉಪವಾಸ ಪೂರ್ಣಗೊಳಿಸಿದ ಮೋದಿ!

ಹೀಗೆ ಪ್ರಧಾನಿ ಮೋದಿಯ ಕಠಿಣ ವೃತ ಅಂತ್ಯಗೊಳಿಸಲು ಸ್ವಾಮಿ ಗೋವಿಂದ್ ದೇವ್ ಗಿರಿ ಮಹಾರಾಜ್ ಹಾಗೂ ಇತರ ಸ್ವಾಮೀಜಿಗಳು ಜೇನು, ನಿಂಬೆ ರಸ ಮಿಶ್ರಿತ ನೀರು ನೀಡಲು ತಯಾರಿ ಮಾಡಿಕೊಂಡಿದ್ದರು. ಒಂದು ಲೋಟದಲ್ಲಿ ನಿಂಬೆ, ಜೇನು ಮಿಶ್ರಿತ ನೀರು ಕೂಡ ತಯಾರಿಸಲಾಗಿತ್ತು. ಈ ನೀರನ್ನು ಪ್ರಧಾನಿ ಮೋದಿ ಅಧಿಕಾರಿಗಳು, ವೈದ್ಯರ ತಂಡ ಕೂಡ ಪರಿಶೀಲನೆ ನಡೆಸಿತ್ತು. 

 

| Ayodhya, Uttar Pradesh | Swami Govind Dev Giri Maharaj says, "...We were supposed to offer him honey with a few drops of lemon juice in water...But he told me separately to offer him 'charnamrit' of Bhagwan Sri Ram. So, we made changes...I felt a motherly love at that… https://t.co/1SqbPRUtNp pic.twitter.com/dOFV3w1SqU

— ANI (@ANI)

 

ಗರ್ಭಗುಡಿಯಿಂದ ಹೊರಬರುತ್ತಿದ್ದಂತೆ ಪ್ರಧಾನಿ ಮೋದಿ ನೇರವಾಗಿ ಸ್ವಾಮಿ ಗೋವಿಂದ್ ದೇವ್ ಗಿರಿ ಮಹಾರಾಜ್ ಬಳಿ ಒಂದು ಮನವಿ ಮಾಡಿದ್ದಾರೆ. ನನ್ನ ಉಪವಾಸ ವೃತ ಅಂತ್ಯಗೊಳಿಸಲು ನೀವು ಏನಾದರು ನೀಡುವುದಿದ್ದರೆ, ಬಾಲರಾಮನಿಗೆ ಅಭಿಷೇಖ ಮಾಡಿದ ಚರಣಾಮೃತ ನೀಡಿ ಎಂದಿದ್ದಾರೆ. ಈ ಮಾತುಗಳನ್ನು ಕೇಳಿದ ಸ್ವಾಮಿ ಗೋವಿಂದ್ ದೇವ್ ಗಿರಿ ಮಹಾರಾಜ್ ಸ್ವಾಮೀಜಿ ಮತ್ತಷ್ಟು ಭಾವುಕರಾದರು. 

ಟೆಂಟ್ ಅಲ್ಲ, ಭವ್ಯ ಮಂದಿರದಲ್ಲಿ ಶ್ರೀರಾಮನ ದರ್ಶನ, ಮಂದಿರ ಲೋಕಾರ್ಪಣೆಗೊಳಿಸಿ ಮೋದಿ ಭಾಷಣ!

ಈ ಕುರಿತು ಮಾತನಾಡಿರುವ ಸ್ವಾಮಿ ಗೋವಿಂದ್ ದೇವ್ ಗಿರಿ ಮಹಾರಾಜ್, ನನ್ನ ಅಂತಃಕರಣದಲ್ಲಿ ಮಾತೃತ್ವ ಭಾವ ಮೂಡಿತ್ತು. ನನ್ನ ಮಗನ ಉಪವಾಸ ವೃತವನ್ನು ನಾನು ಅಂತ್ಯಗೊಳಿಸುವ ಭಾವನೆ ಮೂಡಿತ್ತು. ದೇವಸಂಭೂತನಾಗಿ ಅವತರಿಸಿ ಪ್ರಧಾನಿ ಎಂದು ಸ್ವಾಮಿ ಗೋವಿಂದ್ ದೇವ್ ಗಿರಿ ಮಹಾರಾಜ್ ಹೇಳಿದ್ದಾರೆ.

click me!