ಬಿಜೆಪಿ ಪಕ್ಷ ನಿಧಿಗೆ 2,000 ರೂ ಡೋನೇಶನ್ ನೀಡಿದ ಮೋದಿ, ದೇಶ ಕಟ್ಟಲು ದೇಣಿಗೆ ಸಂದೇಶ ಸಾರಿದ ಪ್ರಧಾನಿ!

By Suvarna NewsFirst Published Mar 3, 2024, 5:26 PM IST
Highlights

ಲೋಕಸಭಾ ಚುನಾವಣೆಗೆ ಕೆಲ ತಿಂಗಳು ಮಾತ್ರ ಬಾಕಿ. ಬಿಜೆಪಿ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಇದರ ನಡುವೆ ಪ್ರಧಾನಿ ಮೋದಿ ದೇಶ ಕಟ್ಟಲು ದೇಣಿಗೆ ಅನ್ನೋ ಪಕ್ಷದ ಅಭಿಯಾನಕ್ಕೆ ವೇಗ ನೀಡಿದ್ದಾರೆ. ಖುದ್ದು 2,000 ರೂಪಾಯಿ ದೇಣಿಗೆ ನೀಡಿದ್ದಾರೆ. 
 

ನವದೆಹಲಿ(ಮಾ.03) ಲೋಕಸಭಾ ಚುನಾವಣೆಗೆ ಪಕ್ಷಗಳು ತಯಾರಿ ಮಾಡಿಕೊಳ್ಳುತ್ತಿದೆ. ಈಗಾಗಲೇ ಚುನಾವಣಾ ಬಾಂಡ್‌ಗೆ ಸುಪ್ರೀಂ ಕೋರ್ಟ್ ನಿರ್ಬಂಧ ವಿಧಿಸಿದೆ. ಇದೀಗ ಚುನಾವಣೆ ಖರ್ಚು ವೆಚ್ಚಕ್ಕೆ ಹಣ ಹೊಂದಿಸಲು ಬಿಜೆಪಿ ದೇಣಿಗೆ ಆರಂಭಿಸಿದೆ. ದೇಶ ಕಟ್ಟಲು ದೇಣಿಗೆ ಅನ್ನೋ ಸಂದೇಶದೊಂದಿಗೆ ಬಿಜೆಪಿ ಡೋನೇಶನ್ ಅಭಿಯಾನ ಆರಂಭಿಸಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಪಕ್ಷ ನಿಧಿಗೆ 2,000 ರೂಪಾಯಿ ದೇಣಿಗೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮೋದಿ, ದೇಶ ಕಟ್ಟಲು ದೇಣಿಗೆ ನೀಡಿ ಎಂದು ಮೋದಿ ಮನವಿ ಮಾಡಿದ್ದಾರೆ. 

ಮಾರ್ಚ್ 1ರಂದು ಬಿಜೆಪಿ ದೇಶ ಕಟ್ಟಲು ದೇಣಿಗೆ ಅನ್ನೋ ಅಭಿಯಾನ ಆರಂಭಿಸಿದೆ. ಈ ಮೂಲಕ ದೇಶದ ಮೂಲ ಮೂಲೆಯಿಂದ ದೇಣಿಗೆ ಸಂಗ್ರಹಿಸಿ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದೆ. ಮಾರ್ಚ್  1ರಂದು ಈ ಅಭಿಯಾನ ಆರಂಭಿಸಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ 1,000 ರೂಪಾಯಿ ದೇಣಿಗೆ ನೀಡಿದ್ದರು. ಇದೀಗ ಮೋದಿ 2,000 ರೂಪಾಯಿ ದೇಣಿಗೆ ನೀಡಿದ್ದಾರೆ.

ಬಿಜೆಪಿ ಪಟ್ಟಿಯಿಂದ ಹರ್ಷ ವರ್ಧನ್ ಔಟ್, ನಿವೃತ್ತಿ ಘೋಷಿಸಿ ಡಾಕ್ಟರ್ ವೃತ್ತಿಗೆ ಮರಳಿದ ಸಂಸದ!

2022-23ರ ಸಾಲಿನಲ್ಲಿ ಬಿಜೆಪಿ 719 ಕೋಟಿ ರೂಪಾಯಿಗಳನ್ನು ದೇಣಿಗೆ ಮೂಲಕ ಸಂಗ್ರಹಿಸಿದೆ. ಇದು  2021-22ರ ಸಾಲಿಗೆ ಹೋಲಿಸಿದರೆ ಶೇಕಡಾ 17 ರಷ್ಟು ಏರಿಕೆಯಾಗಿದೆ. 2021-22ರ ಸಾಲಿನಲ್ಲಿ 614 ಕೋಟಿ ರೂಪಾಯಿಯನ್ನು ಬಿಜೆಪಿ ದೇಣಿಗೆ ಮೂಲಕ ಸಂಗ್ರಹಿಸಿತ್ತು. ಚುನಾವಣಾ ಬಾಂಡ್ ಯೋಜನೆ ರದ್ದುಗೊಂಡ ಬೆನ್ನಲ್ಲೇ ಇದೀಗ ಬಿಜೆಪಿ ದೇಣಿಗೆ ಸಂಗ್ರಹ ಅಭಿಯಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಆರಂಭಿಸಿದೆ.

ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್, ಚುನಾವಣಾ ಬಾಂಡ್ ಅಸಂವಿಧಾನಿಕ ಎಂದು ತೀರ್ಪು ನೀಡಿತ್ತು.  ಈ ಚುನಾವಣಾ ಬಾಂಡ್ ಮೂಲಕ 2022-23ನೇ ಸಾಲಿನಲ್ಲಿ ರಾಜಕೀಯ ಪಕ್ಷಗಳು 3077 ಕೋಟಿ ರು. ಆದಾಯ ಪಡೆದುಕೊಂಡಿವೆ. ಇದರಲ್ಲಿ ಬಿಜೆಪಿಯ ಪಾಲು 2361 ಕೋಟಿ ರು. (ಶೇ.76.7). ಬಿಜೆಪಿ ಒಟ್ಟಾರೆ 2361 ಕೋಟಿ ರು. ಪಡೆದುಕೊಂಡಿದ್ದರೆ, ಕಾಂಗ್ರೆಸ್‌ 452.37 ಕೋಟಿ ರು.ನೊಂದಿಗೆ 2ನೇ ಸ್ಥಾನದಲ್ಲಿದೆ. ಬಿಜೆಪಿ, ಕಾಂಗ್ರೆಸ್‌, ಬಿಎಸ್‌ಪಿ, ಆಪ್‌, ಎನ್‌ಪಿಪಿ ಮತ್ತು ಸಿಪಿಎಂಗಳು ತಮ್ಮ ಆದಾಯವನ್ನು ಘೋಷಣೆ ಮಾಡಿಕೊಂಡಿವೆ. ಚುನಾವಣಾ ಬಾಂಡ್‌ಗಳಿಂದ ಬಿಜೆಪಿ 1294 ಕೋಟಿ ರು., ಕಾಂಗ್ರೆಸ್‌ 171 ಕೋಟಿ ರು., ಆಪ್‌ 45.45 ಕೋಟಿ ರು. ಗಳಿಸಿಕೊಂಡಿವೆ. 2021-22ನೇ ಸಾಲಿಗೆ ಹೋಲಿಸಿದರೆ ಬಿಜೆಪಿಯ ಆದಾಯ ಪ್ರಮಾಣ ಶೇ.23.15ರಷ್ಟು ಹೆಚ್ಚಳವಾಗಿದೆ ಎಂದು ಎಡಿಆರ್‌ ತಿಳಿಸಿದೆ. 

ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್.. ತೆರೆಯ ಹಿಂದೆ ನಡೀತಾ ಇದ್ಯಾ ಆಪರೇಷನ್ ಷಡ್ಯಂತ್ರ..?

click me!