ಪ್ರಧಾನಿ ಮೋದಿಯ ಧುರಂಧರ್ ಎಂಟ್ರಿಗೆ ಜನ ಫಿದಾ, ವೇದಿಕೆಗೆ ಬರುತ್ತಿದ್ದಂತೆ ಆರಿ..ಆರಿ ಸಾಂಗ್ ಪ್ಲೇ

Published : Sep 08, 2026, 03:44 PM IST
narendra modi dhurandhar

ಸಾರಾಂಶ

ಪ್ರಧಾನಿ ನರೇಂದ್ರ ಮೋದಿಗೆ ವಡೋದರದಲ್ಲಿ ಧುರಂಧರ್ ರೀತಿಯ ಸ್ವಾಗತ ಸಿಕ್ಕಿದೆ. ಜನಸಾಗರದ ನಡುವೆ ಮೋದಿ ವೇದಿಕೆ ಮೇಲೆ ಆಗಮಿಸುತ್ತಿದ್ದಂತೆ ಧುರಂಧರ್ 2 ಸಿನಿಮಾದ ಆರಿ..ಆರಿ ಸಾಂಗ್ ಪ್ಲೇ ಮಾಡಲಾಗಿದೆ. ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.

ವಡೋದರ (ಸೆ.08) ಹಲವು ಕಾರ್ಯಕ್ರಮಗಳ ನಿಮಿತ್ತ ಗುಜರಾತ್‌ನ ವಡೋದರಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಗೆ ಧುರಂಧರ್ ಸ್ವಾಗತ ನೀಡಲಾಗಿದೆ. ವಡೋದರದ ಕಾರ್ಯಕ್ರಮದ ವೇದಿಕೆಯತ್ತ ಆಗಮಿಸುತ್ತಿದ್ದಂತೆ ರಣವೀರ್ ಸಿಂಗ್ ಅಭಿನಯದ ಧುರಂಧರ್ 2 ಸಿನಿಮಾದ ಆರಿ...ಆರಿ ಸಾಂಗ್ ಹಾಕಲಾಗಿದೆ. ಮೋದಿ ಜನರತ್ತ ಕೈಬೀಸುತ್ತಾ ವೇದಿಕೆ ಮೇಲೆ ಆಗಮಿಸುತ್ತಿದ್ದಂತೆ ಸಾಂಗ್ ಕೂಡ ಪ್ಲೇ ಮಾಡಲಾಗಿದೆ. ಈ ಮೂಲಕ ಮೋದಿ ಧುರಂಧರ್ ರೀತಿಯ ಎಂಟ್ರಿ ಪಡೆದುಕೊಂಡಿದ್ದಾರೆ. ಇದೀಗ ಈ ವಿಡಿಯೋ ಭಾರಿ ವೈರಲ್ ಆಗಿದೆ.

ರ್ಯಾಂಪ್ ಮೇಲೆ ವಾಕ್ ವೇಳೆ ಆರಿ..ಆರಿ ಸಾಂಗ್

ಹಲವು ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ, ಉದ್ಘಾಟನೆ ಸೇರಿದಂತೆ ಹಲವು ಕಾರ್ಯಕ್ರಮಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ವಡೋದರಕ್ಕೆ ಆಗಮಿಸಿದ್ದರು. ಬರೋಬ್ಬರಿ 35 ಸಾವಿರ ಕೋಟಿ ರೂಪಾಯಿ ಮೊತ್ತದ ಅಭವೃದ್ಧಿ ಯೋಜನೆಗಳ ಚಾಲನೆಗೆ ಆಗಮಿಸುತ್ತಿದ್ದ ಮೋದಿ ವೇದಿಕೆ ಮೇಲೆ ಬರುತ್ತಿದ್ದಂತೆ ಆರಿ..ಆರಿ...ಸಾಂಗ್ ಪ್ಲೇ ಮಾಡಲಾಗಿದೆ. ವೇದಿಕೆ ಮುಂಭಾಗದಲ್ಲಿ ರ್ಯಾಂಪ್ ಹಾಕಲಾಗಿತ್ತು. ಮೋದಿ ನೆರೆದಿದ್ದ ಜನರತ್ತ ಕೈಬೀಸುತ್ತಾ ರ್ಯಾಂಪ್ ಮೂಲಕ ಸಾಗಿದ್ದಾರೆ. ಈ ಎಲ್ಲಾ ಸಂದರ್ಭದಲ್ಲಿ ಹಾಡು ಪ್ಲೇ ಮಾಡಲಾಗಿದೆ. ಇದೇ ವೇಳೆ ಹಲವರು ಮೋದಿ ಫೋಟೋ, ಪೋಸ್ಟರ್ ಹಿಡಿದು ಜೈಘೋಷ ಹಾಕಿದ್ದಾರೆ. ಇತ್ತ ಹಲವರು ಪೈಂಟಿಂಗ್ ಮೂಲಕ ಆಗಮಿಸಿದ್ದರು. ಅಭಿಮಾನಿಗಳು, ಬೆಂಬಲಿಗರ ತಂದ ಪೈಂಟಿಂಗ್ ಹಿಡಿದು ಫೋಟೋಗೋ ಫೋಸ್ ನೀಡಿದ ಮೋದಿ ಮುಂದೆ ಸಾಗಿದರು.

ಮೋಡಿ ಮಾಡಿದ ಧುರಂಧರ್ ಸ್ಟೈಲ್ ಎಂಟ್ರಿ

ಉದ್ದನೆಯ ರ್ಯಾಂಪ್ ಮೇಲೆ ಮೋದಿ ಸಾಗಿದ್ದಾರೆ. ಆರಿ..ಆರಿ ಸಾಂಗ್ ಬಳಿಕ ಮೋದಿ ಕುರಿತು ಹಾಡನ್ನು ಹಾಕಿದ್ದಾರೆ. ಆರಂಭಿಕ ಕೆಲ ಹೊತ್ತು ನೆರೆದಿದ್ದ ಜನ ಹಾಡು ಹಾಗೂ ಮೋದಿ ನೋಡಿ ಕುಣಿದು ಕುಪ್ಪಳಿಸಿದ್ದಾರೆ. ಹಲವರು ಫೋನ್ ಮೂಲಕ ವಿಡಿಯೋ, ಫೋಟೋ ಕ್ಲಿಕ್ ಮಾಡಿದ್ದಾರೆ. ಮೋದಿ ಧುರಂಧರ್ ಸ್ಟೈಲ್ ಎಂಟ್ರಿ ಹಲವರನ್ನು ಮೋಡಿ ಮಾಡಿದೆ.

ನಮೋ ಫಾರ್ ವಿಕ್ಸಿತ್ ಭಾರತ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹಲವು ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ವಡೋದರ ಅಭಿವೃದ್ಧಿಗೆ ಕೈಗೊಂಡಿರುವ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಂಡರು. ಇದೇ ವೇಳೆ 2800 ಕಿಲೋಮೀಟರ್ DFC ಕಾರಿಡಾರ್ ಯೋಜನೆ ಕುರಿತು ಬೆಳಕು ಚೆಲ್ಲಿದರು. 2004ರಲ್ಲಿ ಯುಪಿಎ ಸರ್ಕಾರ ಆರಂಭಿಸಿದ ಯೋಜನೆ ಇದು. ಆದರೆ ಯುಪಿಎ ಸರ್ಕಾರ ಈ ಯೋಜನೆಗೆ ಕುರಿತು ಹೆಚ್ಚಿನ ಆಸಕ್ತಿ ತಾಳಲಿಲ್ಲ. ಯೋಜನೆ ನೆನೆಗುದಿಗೆ ಬಿದ್ದಿತ್ತು. 2014ರ ಬಳಿಕ ಈ ಯೋಜನೆ ಆರಂಭಿಸಲು ಬೇಕಾದ ಕೆಲಸ ಕಾರ್ಯಗಳು ಆರಂಭಗೊಂಡಿತು ಎಂದು ಮೋದಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೈಯಲ್ಲಿದ್ದುದ್ದು ಕೇವಲ ಅರ್ಧ ಎಕರೆ ಮಾತ್ರ! 80 ಲಕ್ಷ ಗಳಿಸುವ ಮಟ್ಟಿಗೆ ಬೆಳೆದ ಈ ರೈತ ಮಹಿಳೆಯ ರೋಚಕ ಕಥೆ!
ಸತತ 32 ವರ್ಷಗಳಿಂದ ಕಾಶ್ಮೀರದ ಸಂಗೀತ ಪರಂಪರೆ ಉಳಿಸುತ್ತಿರುವ ಮುಷ್ತಾಕ್ ಅಹ್ಮದ್ ದಾರ್ ಯಾರು?