
ಬೆಂಗಳೂರು: ಡಿಜಿಟಲ್ ಪಾವತಿ! ಇವತ್ತು ಎಲ್ಲಿಗೆ ಹೋದರೂ ಆನ್‌ಲೈನ್ ಪೇಮಂಟೇ. ನಗದು ವ್ಯವಹಾರ ಕಣ್ಮರೆಯಾಗಿ ಹೋಗ್ತಿದೆ. ಟೀ ಕೂಡಿಯಲಿ, ಅಂಗಡಿಗೆ ಹೋಗಿ ತರಕಾರಿ ಕೊಂಡುಕೊಳ್ಳಲಿ. ಅಮೌಂಟ್ ಎಷ್ಟಾಯ್ತು ಎಂದು ಕೇಳ್ತೀವಿ. ಕೈಯಲ್ಲಿದ್ದ ಮೊಬೈಲ್‌ನಿಂದ UPI ಮೂಲಕ ಹಣ ಪಾವತಿ ಮಾಡ್ತೀವಿ. ಟನ್ ಅಂತಾ ಅಂಗಡಿಯವನ ಖಾತೆಗೆ ಜಮೆ ಆಗುತ್ತೆ. ಅದೇ ರೀತಿ ನಮ್ಮ ಮೊಬೈಲ್‌ಗೆ ಇಷ್ಟು ಹಣ ಕಟ್ ಆಗಿದೆ ಎಂಬ ಸಂದೇಶ ಬರುತ್ತದೆ.
ನಿಮಗೆ ಎಸ್‌ಎಂಎಸ್ ಬಂದಿದೆ ಎಂಬ ಸಂದೇಶ ಹಣ ಕಟ್ ಆಗಿದೆ ಎಂಬ ಎಚ್ಚರಿಕೆ ಆಗಿತ್ತು. ಆದರೆ ಇನ್ಮುಂದೆ ಸಣ್ಣ, ಪುಟ್ಟ ವ್ಯವಹಾರಗಳಿಗೆ ಹಣ ಕಟ್ ಆದರೆ ಎಚ್ಚರಿಕೆಯ ಸಂದೇಶ ಬರೋದಿಲ್ಲ. ಹಾಗಂತ ಇದು ಎಲ್ಲಾ ಬ್ಯಾಂಕ್ ಬಳಕೆದಾರರಿಗೂ ಅಲ್ಲ. ಹೌದು, 500 ರೂಪಾಯಿಂತ ಕಡಿಮೆ UPI ಪಾವತಿ ಮಾಡಿದರೆ SMS ಕಳುಹಿಸುವುದಿಲ್ಲ ಎಂದು HDFC ಬ್ಯಾಂಕ್ ಹೇಳಿದೆ. ಈ ಹೊಸ ರೂಲ್ಸ್ ಹೆಚ್‌ಡಿಎಫ್‌ಸಿ ಗ್ರಾಹಕರಿಗೆ ಮಾತ್ರ ಅನ್ವಯಿಸಲಿದೆ. ಬ್ಯಾಕ್‌ನ ಅಧಿಸೂಚನೆ ಪ್ರಕಾರ.. ಜನವರಿ 1, 2027 ರಿಂದ 500 ರೂ.ವರೆಗಿನ UPI ವಹಿವಾಟುಗಳಿಗೆ SMS ಎಚ್ಚರಿಕೆಗಳನ್ನು ನಿಲ್ಲಿಸಲಿದೆ. ಅಂದರೆ ನೀವು 50, 100 ರೂ, 200 ಅಥವಾ 500 ರೂ. ಪಾವತಿಸಿದರೂ ಸಹ ನೀವು ಬ್ಯಾಂಕ್‌ನಿಂದ ಯಾವುದೇ ಮೆಸೇಜ್ ಸ್ವೀಕರಿಸುವುದಿಲ್ಲ.
RBI ಮಾರ್ಗಸೂಚಿ ಪ್ರಕಾರ ಜನವರಿ 1, 2027 ರಿಂದ 500 ರೂ.ಗಿಂತ ಹೆಚ್ಚಿನ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವಹಿವಾಟುಗಳಿಗೆ ಬ್ಯಾಂಕುಗಳು ತ್ವರಿತ SMS ಎಚ್ಚರಿಕೆ ಕಳುಹಿಸುವುದು ಕಡ್ಡಾಯ. 500 ರೂ. ಅಥವಾ ಅದಕ್ಕಿಂತ ಕಡಿಮೆ ಮೌಲ್ಯದ ವಹಿವಾಟುಗಳಿಗೆ SMS ಕಳುಹಿಸಬೇಕೆ ಅಥವಾ ಬೇಡವೇ ಅನ್ನೋದು ಬ್ಯಾಂಕುಗಳ ಆಂತರಿಕ ನೀತಿಗಳನ್ನು ಅವಲಂಬಿಸಿರುತ್ತದೆ. ಕಳುಹಿಸಿದರೆ ಗ್ರಾಹಕರ ಮೇಲೆ ಯಾವುದೇ ಶುಲ್ಕ ವಿಧಿಸಂಗಿಲ್ಲ. ಈ ನಿಯಮಗಳು UPI ಗೆ ಮಾತ್ರವಲ್ಲ. ಇತರ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವಹಿವಾಟುಗಳಿಗೂ ಅನ್ವಯ ಎಂದು ಆರ್‌ಬಿಐ ಹೇಳಿದೆ.
SMS ಸೇವೆಗಳಲ್ಲಿ ಬದಲಾವಣೆಗಳಿದ್ದರೂ ಗ್ರಾಹಕರು ಚಿಂತಿಸಬೇಕಾಗಿಲ್ಲ.HDFC ಬ್ಯಾಂಕ್ ಎಲ್ಲಾ UPI ವಹಿವಾಟುಗಳಿಗೆ ಇಮೇಲ್ ಎಚ್ಚರಿಕೆ ಒದಗಿಸುವುದನ್ನು ಮುಂದುವರಿಸುತ್ತದೆ. ನೀವು ಸಣ್ಣ ಪಾವತಿಗಳನ್ನು ಮಾಡಿದರೂ ಸಹ, ನಿಮ್ಮ ನೋಂದಾಯಿತ ಇಮೇಲ್‌ನಲ್ಲಿ ವಹಿವಾಟು ಬಗ್ಗೆ ಮಾಹಿತಿ ಸ್ವೀಕರಿಸುತ್ತೀರಿ ಎಂದು ಬ್ಯಾಂಕ್ ಹೇಳಿದೆ. ಆರ್‌ಬಿಐ ರೂಲ್ಸ್ ಪ್ರಕಾರ ಮೇಲ್ ಮೂಲಕ ಸಂದೇಶ ಕಳುಹಿಸೋದು ಕೂಡ ಕಡ್ಡಾಯವಾಗಿದೆ.
ಹೀಗಾಗಿ HDFC ಗ್ರಾಹಕರು ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸ ಸರಿ ಇದೆಯಾ ಎಂದು ಪರಿಶೀಲಿಸಬೇಕು. ವಹಿವಾಟು ಅಧಿಸೂಚನೆಗಳನ್ನು ಸ್ವೀಕರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಬ್ಯಾಂಕಿನ ಮೊಬೈಲ್ ಅಪ್ಲಿಕೇಶನ್‌ನಲ್ಲಿನ ಸೆಟ್ಟಿಂಗ್‌ಗಳನ್ನು ಪರಿಶೀಲಿಸಿ. ರೂ. 500 ಕ್ಕಿಂತ ಕಡಿಮೆ ವಹಿವಾಟುಗಳಿಗೆ ನೀವು SMS ಸ್ವೀಕರಿಸದಿದ್ದರೂ ಸಹ UPI ಪಾವತಿಗಳು ನಿಲ್ಲುವುದಿಲ್ಲ. ಬದಲಾಗುವ ಏಕೈಕ ವಿಷಯವೆಂದರೆ ವಹಿವಾಟು ಮಾಹಿತಿಯನ್ನು ಒದಗಿಸುವ ವಿಧಾನ ಅಷ್ಟೇ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ