
ನವದೆಹಲಿ(ಮಾ.08): ಆರೋಗ್ಯ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ಕೈಗೊಂಡ ವಿವಿಧ ಸುಧಾರಣಾ ಕ್ರಮಗಳಿಂದಾಗಿ ಬಡವರ್ಗ ಮತ್ತು ಔಷಧಗಳ ಅನಿವಾರ್ಯತೆ ಇರುವವರು ವಾರ್ಷಿಕ 50 ಸಾವಿರ ಕೋಟಿ ರು. ಉಳಿತಾಯ ಮಾಡುವಂತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಾದಿಸಿದ್ದಾರೆ.
ಬಡ ಜನರಿಗೆ ಕೈಗೆಟುಕುವ ದರದಲ್ಲಿ ಔಷಧಗಳು, ವೈದ್ಯಕೀಯ ಚಿಕಿತ್ಸೆ ಹಾಗೂ ವೈದ್ಯಕೀಯ ಸಾಧನಗಳ ದರವನ್ನೂ ತಮ್ಮ ಸರ್ಕಾರ ಇಳಿಕೆ ಮಾಡಿದ್ದು, ಇದರಿಂದ ಬಡಜನರಿಗೆ ಅನುಕೂಲವಾಗಿದೆ ಎಂದು ಹೇಳಿದ್ದಾರೆ. ಶಿಲ್ಲಾಂಗ್ನಲ್ಲಿರುವ ಈಶಾನ್ಯ ಭಾರತದ ಇಂದಿರಾ ಗಾಂಧಿ ಪ್ರಾದೇಶಿಕ ಆರೋಗ್ಯ ಮತ್ತು ವೈದ್ಯಕೀಯ ಸಂಸ್ಥೆ(ಎನ್ಇಜಿಆರ್ಐಎಚ್ಎಂಎಸ್)ನಲ್ಲಿ ದೇಶದ 7500ನೇ ಜನೌಷಧಿ ಕೇಂದ್ರವನ್ನು ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಬಳಿಕ ಅವರು ಮಾತನಾಡಿದರು.
ಜನರಿಗೆ ಕೈಗೆಟುಕುವ ದರದಲ್ಲಿ ಪೂರೈಸಲಾಗುತ್ತಿರುವ ಜನೌಷಧಿ ಯೋಜನೆಯು ದೇಶದ ಉದ್ದಗಲಕ್ಕೂ ಹಬ್ಬಿಕೊಳ್ಳುತ್ತಿದೆ. ಜನೌಷಧಿ ಯೋಜನೆ ಬಗ್ಗೆ ಅರಿವು ಮೂಡಿಸಲು ಮಾ.1ರಿಂದ ಮಾ.7ರವರೆಗೆ ಜನೌಷಧಿ ವಾರವಾಗಿ ಆಚರಿಸಲಾಗಿದೆ. ಅಲ್ಲದೆ ಜನೌಷಧಿ ಕೇಂದ್ರಗಳಿಂದ ಈಶಾನ್ಯ ಭಾರತದ ಗುಡ್ಡಗಾಡು ಮತ್ತು ಬುಡಕಟ್ಟು ಜನಾಂಗದವರಿಗೆ ಭಾರೀ ಅನುಕೂಲವಾಗಿದೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ