ಸೀರಂ ಲಸಿಕೆ ಸಂಸ್ಥೆ ಅಗ್ನಿ ಅವಘಡದಲ್ಲಿ ಐವರು ಮೃತ; ಪ್ರಧಾನಿ ಮೋದಿ ಸಂತಾಪ!

By Suvarna NewsFirst Published Jan 21, 2021, 8:16 PM IST
Highlights

ಸೀರಂ ಸಂಸ್ಥೆಯಲ್ಲಿನ ಅಗ್ನಿ ಅವಘಡದಲ್ಲಿ ಕಾರ್ಮಿಕರ ನಿಧನಕ್ಕೆ ಪ್ರಧಾನಿ  ಮೋದಿ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಮೋದಿ ಟ್ವೀಟ್ ಮಾಡಿದ್ದಾರೆ. 
 

ನವದೆಹಲಿ(ಜ.21): ಕೊವಿಡ್ ಲಸಿಕಾ ತಯಾರಿಕೆ ಘಟಕ ಸೀರಂ ಸಂಸ್ಥೆಯಲ್ಲಿ ಸಂಭವಿಸಿದ ಅಗ್ನಿ ದುರಂತ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಒಂದೇ ದಿನ ಎರಡೆರಡು ಬಾರಿ ಅಗ್ನಿ ಅವಘಡ ಸಂಭವಿಸಿದೆ.  ಮೊದಲ ಅಗ್ನಿ ದುರಂತದಲ್ಲಿ ಐವರು ಕಾರ್ಮಿಕರು ಸಾವನ್ನಪ್ಪಿದ್ದರೆ, ಕೆಲವರು ಗಾಯಗೊಂಡಿದ್ದಾರೆ. ಇನ್ನು ಎರಡನೇ ಭಾರಿ ಮತ್ತೆ ಅಗ್ನಿ ಅವಘಡ ಸಂಭವಿಸಿದೆ. ಈ ದುರಂತ ಘಟನೆಯಲ್ಲಿ ಸಾವನ್ನಪ್ಪಿದ ಕಾರ್ಮಿಕರಿಗೆ ಮೋದಿ ಸಂತಾಪ ಸೂಚಿಸಿದ್ದಾರೆ. 

ಐವರ ಬಲಿ ಪಡೆದ ಬೆನ್ನಲ್ಲೇ ಸೀರಂ ಲಸಿಕೆ ಘಟಕದಲ್ಲಿ ಮತ್ತೆ ಅಗ್ನಿ ಅವಘಢ!

ಸೀರಂ ಲಸಿಕೆ ತಯಾರಿಕೆ ಘಟಕದಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡ ನೋವು ತಂದಿದೆ. ಈ ಕೆಟ್ಟ ಘಳಿಗೆಯಲ್ಲಿ ಮೃತರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಕೊಡಲಿ,ನನ್ನ ಪ್ರಾರ್ಥನೆ ಕುಟುಂಬದ ಜೊತೆಗಿದೆ. ಇನ್ನು ಗಾಯಗೊಂಡವರು ಶೀಘ್ರದಲ್ಲೇ ಗುಣಮುಖರಾಗಲಿದೆ ಎಂದು ಪ್ರಾರ್ಥಿಸುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

 

Anguished by the loss of lives due to an unfortunate fire at the . In this sad hour, my thoughts are with the families of those who lost their lives. I pray that those injured recover at the earliest.

— Narendra Modi (@narendramodi)

ಸೀರಂ ಸಂಸ್ಥೆಯ ಗೇಟ್ ನಂಬರ್ 1ರಲ್ಲಿ ಸಂಭವಿಸಿದ ಅಗ್ನಿ ಅವಘಡದಿಂದ ಶೇಖರಿಸಿಟ್ಟ ಲಸಿಕೆಗೆ ಯಾವುದೇ ಸಮಸ್ಯೆಯಾಗಿಲ್ಲ. ಇಷ್ಟೇ ಅಲ್ಲ ಕೋವಿಶೀಲ್ಡ್ ಲಸಿಕೆ ಉತ್ಪಾದನೆಗೂ ಯಾವುದೇ ಸಮಸ್ಯೆಯಾಗಲ್ಲ ಎಂದು ಸೀರಂ ಸಂಸ್ಥೆ ಅವಘಡದ ಬಳಿಕ ಹೇಳಿಕೆ ನೀಡಿತ್ತು. ಮೊದಲ ಬೆಂಕಿ ಅವಘಡ ನಿಯಂತ್ರಣಕ್ಕೆ ಬಂದ ಬಳಿಕ ಐವರು ಕಾರ್ಮಿಕರ ಶವಗಳನ್ನು ಕಟ್ಟದಿಂದ ಹೊರತೆಗೆಯಲಾಗಿತ್ತು. ಇಷ್ಟೇ ಅಲ್ಲ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸೀರಂ ಸಂಸ್ಥೆಯಲ್ಲಿ ಅಗ್ನಿ ಅವಘಡ, ಕೊರೋನಾ ಲಸಿಕೆಗಳಿದ್ದ ಘಟಕ ಸೇಫ್!

ಈ ಘಟನೆ ಬೆನ್ನಲ್ಲೇ ಅದೆ ಕಟ್ಟದಲ್ಲಿ ಮತ್ತೆ ಎರಡನೇ ಬಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಇದೀಗ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ಬಾರಿಯ ಬೆಂಕಿ ಅವಘಡ ಇನ್ಯಾವ ಅನಾಹುತಕ್ಕೆ ಎಡೆಮಾಡಿಕೊಟ್ಟಿದೆ ಅನ್ನೋ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

click me!