ಜರ್ಮನಿಯಲ್ಲಿನ ಮೋದಿ ಕಾರ್ಯಕ್ರಮದಲ್ಲಿ ಮೊಳಗಿತು ಕನ್ನಡ ಹಾಡು!

By Suvarna News  |  First Published Jun 26, 2022, 7:52 PM IST
  • ಭಾರತೀಯ ಸಮುದಾಯವನ್ನುದ್ದೇಶಿ ಮೋದಿ ಮಾತು
  • ವಿಶೇಷ ಕಾರ್ಯಕ್ರಮ ಆಯೋಜಿಸಿದ ಭಾರತೀಯ ಸಮುದಾಯ
  • ಕಾರ್ಯಕ್ರಮದಲ್ಲಿ ಮೊಳಗಿತು ಆಡಿಸಿದಳು ಯಶೋಧೆ ಹಾಡು

ಮ್ಯೂನಿಚ್(ಜೂ.26): ಜಿ7 ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಜರ್ಮನಿ ಪ್ರವಾಸ ಕೈಗೊಂಡಿದ್ದಾರೆ. ಮ್ಯೂನಿಚ್‌ಗೆ ಆಗಮಿಸಿದ ಪ್ರಧಾನಿ ಮೋದಿಗಾಗಿ ಭಾರತೀಯ ಸಮುದಾಯ ವಿಶೇಷ ಕಾರ್ಯಕ್ರಮ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಭಾರತೀಯ ನೃತ್ಯ ಪ್ರಕಾರಗಳು, ಸಂಸ್ಕೃತಿ, ಹಾಡುಗಳು ಮೇಳೈಸಿತು. ವಿಶೇಷ ಅಂದರೆ ಈ ಕಾರ್ಯಕ್ರಮದಲ್ಲಿ ಕನ್ನಡ ಹಾಡು ಕೂಡ ಮೊಳಗಿತ್ತು.

ಆಡಿಸಿದಳು ಯಶೋದೆ ಹಾಡು ಮ್ಯೂನಿಚ್‌ ಕಾರ್ಯಕ್ರಮದಲ್ಲಿ ನೆರೆದಿದ್ದವರನ್ನು ರಂಜಿಸಿತು. ಸಂಗೀತ ಕಾರ್ಯಕ್ರಮದಲ್ಲಿನ ಈ ಹಾಡು ಕನ್ನಡಿಗರನ್ನು ಪುಳಕಿತಗೊಳಿಸಿತು. ಪ್ರತಿಷ್ಠಿತ ಪ್ರಧಾನಿ ಕಾರ್ಯಕ್ರಮದಲ್ಲಿ ಕನ್ನಡದ ಹಾಡು ಮೊಳಗುವ ಮೂಲಕ ಜರ್ಮನಿಯಲ್ಲಿ ಕನ್ನಡದ ಕಂಪು ಮತ್ತಷ್ಟು ಹೆಚ್ಚಿತು.

Tap to resize

Latest Videos

ಪ್ರಜಾಪ್ರಭುತ್ವ ನಮ್ಮ ಹೆಮ್ಮೆ, ಆದರೆ ಸದ್ದಡಗಿಸುವ ಪಯತ್ನ ನಡೆದಿತ್ತು, ಜರ್ಮನಿಯಲ್ಲಿ ಮೋದಿ ಭಾಷಣ

ಮೋದಿ ಭಾಷಣಕ್ಕೂ ಮೊದಲು ಈ ವಿಶೇಷ ಕಾರ್ಯಕ್ರಮ ಎಲ್ಲರ ಗಮನಸೆಳೆಯಿತು. ಭಾರತದ ಹಲವು ನೃತ್ಯ ಪ್ರಕಾರಗಳು ಅತ್ಯುತ್ತಮವಾಗಿ ಮೂಡಿ ಬಂತು. ಈ ಕುರಿತು ಮೋದಿ ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಭಾರತದ ಸಾಂಸ್ಕೃತಿ ವೈವಿಧ್ಯತೆಯ ಸಂಗಮ ಎಂದು ಮೋದಿ ಬಣ್ಣಿಸಿದ್ದರು.

 

All set for the community programme in Munich.

Currently a cultural programme is underway showcasing India’s cultural diversity and vibrancy. pic.twitter.com/Da2wiyOmVC

— PMO India (@PMOIndia)

 

ಸಾಂಸ್ಕೃತಿ ಕಾರ್ಯಕ್ರಮಗಳ ಬಳಿಕ ಪ್ರಧಾನಿ ಮೋದಿ, ವೇದಿಕೆಗೆ ಆಗಮಿಸಿದರು. ಇಡೀ ಸಭಾಂಗಣದಲ್ಲಿ ಭಾರತೀಯ ಸಮುದಾಯ ಕಿಕ್ಕಿರಿದು ತುಂಬಿತ್ತು. ಮೋದಿ ಆಗಮಿಸುತ್ತಿದ್ದಂತೆ ಎಲ್ಲರೂ ಎದ್ದು ನಿಂತು ಚಪ್ಪಾಳೆ ಮೂಲಕ ಸ್ವಾಗತಿಸಿದರು. 

ಪ್ರಜಾಪ್ರಭುತ್ವವನ್ನು ಕತ್ತು ಹಿಸಿಕುವ ತುರ್ತು ಪರಿಸ್ಥಿತಿಯಿಂದ ಮಾತು ಆರಂಭಿಸಿದ ಮೋದಿ, ಭಾರತದ ಇಂದು ಯಾವ ಮಟ್ಟಿಗೆ ಅಭಿವೃದ್ಧಿಯಾಗಿದೆ. ಹಾಗೂ ಮುಂಬರುವ ದಿನಗಳಲ್ಲಿ ಭಾರತದ ಗುರಿ ಕುರಿತು ಬೆಳಕು ಚೆಲ್ಲಿದರು. 46 ವರ್ಷಗಳ ಹಿಂದೆ ಪ್ರಜಪ್ರಭುತ್ವವನ್ನು ಕತ್ತು ಹಿಸುಕಿ ಸದ್ದಡಗಿಸುವ ಪ್ರಯತ್ನ ನಡೆದಿತ್ತು. ಇದು ಪ್ರಜಾಪ್ರಭುತ್ವವನ್ನೇ ಉಸಿರಾಗಿಸಿರುವ ಭಾರತ ಇತಿಹಾಸದಲ್ಲಿ ಕಪ್ಪು ಚುಕ್ಕೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು.

ಮ್ಯೂನಿಚ್‌ನಲ್ಲಿ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ

ಭಾರತದಲ್ಲಿನ ಡಿಜಿಟಲ್ ಕ್ರಾಂತಿ, ಗ್ರಾಮೀಣ ಭಾಗಗಳಲ್ಲಿ ಭಾರತ ಸಾಧಿಸಿದ ಪ್ರಗತಿ ಸೇರಿದಂತೆ ಹಲವು ವಿಚಾರಗಳ ಕುರಿತು ಮೋದಿ ಮಾತನಾಡಿದರು. ಮೋದಿಯ ಪ್ರತಿ ಮಾತಿನ ನಡುವೆ ಭಾರತೀಯ ಸಮುದಾಯ ಮೋದಿ ಮೋದಿ ಘೋಷಣೆ ಕೂಗಿದರು.  2015ರಲ್ಲಿ ಜರ್ಮನಿ ಪ್ರವಾಸ ಕೈಗೊಂಡಿದ್ದೆ. ಅಂದು ಜರ್ಮನಿಗೆ ಬಂದಾಗ ಸ್ಟಾರ್ಟ್ ಅಪ್ ಅನ್ನೋ ಪದ ಕಿವಿಗೆ ಬಿದ್ದಿತ್ತು. ಭಾರತದಲ್ಲಿ ಈ ಪದ ಅಲ್ಲೊಂದು ಇಲ್ಲೊಂದು ಕೇಳಿಬರುತ್ತಿದೆ. ಆದರೆ ಹೆಚ್ಚಿನವರಿಗೆ ಸ್ಟಾರ್ಟ್ ಅಪ್ ಕಲ್ಪನೆ ಇರಲಿಲ್ಲ. ಆದರೆ ಈ ಬಾರಿ ಜರ್ಮನಿಗೆ ಬಂದಿದ್ದೇನೆ. ಇದೀಗ ಭಾರತ ವಿಶ್ವದಲ್ಲೇ 3ನೇ ಅತೀ ದೊಡ್ಡ ಸ್ಟಾರ್ಟ್ ಅಪ್ ಹಬ್ ಆಗಿ ಗುರುತಿಸಿಕೊಂಡಿದೆ ಎಂದು ಮೋದಿ ಹೇಳಿದರು.

ಮ್ಯೂನಿಚ್ ಕಾರ್ಯಕ್ರಮದಲ್ಲಿನ ಕನ್ನಡ ಹಾಡು ಹಾಗೂ ಇತರ ಸಾಂಸ್ಕೃತಿ ಕಾರ್ಯಕ್ರಮ ಇಲ್ಲಿದೆ.

ಜರ್ಮನಿಯಲ್ಲಿ ಬಿಡುವಿಲ್ಲದ ಕಾರ್ಯಕ್ರಮದ ಬಳಿಕ, ಇತ್ತೀಚೆಗೆ ನಿಧನರಾದ ದುಬೈನ ದೊರೆ ಶೇಖ್‌ ಖಲೀಫಾ ಬಿನ್‌ ಜಾಯೇದ್‌ ಅಲ್‌ ನಹ್ಯಾನ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವಾಗಿ ಸಲುವಾಗಿ ಜೂ.28ರಂದು ಯುಎಇಗೆ ಭೇಟಿ ನೀಡಲಿದ್ದಾರೆ.

ಜಿ7 ಶೃಂಗ ಸಭೆಯಲ್ಲಿ 7 ಅಭಿವೃದ್ಧಿ ಹೊಂದಿದ ದೇಶಗಳ ಜೊತೆಗೆ ಭಾರತ, ಅರ್ಜೆಂಟೀನಾ, ಇಂಡೋನೇಷ್ಯಾ, ಸೆನೆಗಲ್‌, ದಕ್ಷಿಣ ಆಫ್ರಿಕಾ ದೇಶಗಳನ್ನೂ ಅತಿಥಿಗಳಾಗಿ ಆಹ್ವಾನಿಸಲಾಗಿದೆ. ಹೀಗಾಗಿ ಈ ದೇಶಗಳ ನಾಯಕರ ಜೊತೆ ಮೋದಿ ಮಾತುಕತೆ ನಡೆಸಲಿದ್ದಾರೆ.

 

click me!