ಪ್ರಜಾಪ್ರಭುತ್ವ ನಮ್ಮ ಹೆಮ್ಮೆ, ಆದರೆ ಸದ್ದಡಗಿಸುವ ಪಯತ್ನ ನಡೆದಿತ್ತು, ಜರ್ಮನಿಯಲ್ಲಿ ಮೋದಿ ಭಾಷಣ

Published : Jun 26, 2022, 07:17 PM ISTUpdated : Jun 26, 2022, 08:14 PM IST
ಪ್ರಜಾಪ್ರಭುತ್ವ ನಮ್ಮ ಹೆಮ್ಮೆ, ಆದರೆ ಸದ್ದಡಗಿಸುವ ಪಯತ್ನ ನಡೆದಿತ್ತು, ಜರ್ಮನಿಯಲ್ಲಿ ಮೋದಿ ಭಾಷಣ

ಸಾರಾಂಶ

ಜರ್ಮನಿಯಲ್ಲಿ ಭಾರತೀಯ ಸಮುದಾಯ ಉದ್ದೇಶಿಸಿ ಭಾಷಣ ಮ್ಯೂನಿಚ್‌ನಲ್ಲಿ ಆಯೋಜಿಸಿರುವ ಅತೀ ದೊಡ್ಡ ಕಾರ್ಯಕ್ರಮ ಪ್ರಜಾಪ್ರಭುತ್ವ, ಭಾರತದಲ್ಲಿನ ಬದಲಾವಣೆ ಕುರಿತು ಮೋದಿ ಮಾತು

ಮ್ಯೂನಿಚ್(ಜೂ.26):  ಪ್ರಜಾಪ್ರಭುತ್ವ ಭಾರತದ ಹೆಮ್ಮೆ, ಪ್ರಜಾಪ್ರಭುತ್ವಕ್ಕೆ ಭಾರತವೇ ತಾಯಿ. ಆದರೆ 46 ವರ್ಷಗಳ ಹಿಂದೆ ಇದೇ ಪ್ರಜಾಪ್ರಭುತ್ವವನ್ನೇ ಬಂಧಿಸಿಡುವ ಪ್ರಯತ್ನ ನಡೆದಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಜರ್ಮನಿ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಮ್ಯೂನಿಚ್‌ನಲ್ಲಿ ಭಾರತೀಯ ಸಮುದಾಯವನ್ನುದ್ದೇಶಿ ಮಾತನಾಡಿದ್ದಾರೆ.

ನಿಮ್ಮಲ್ಲಿ ಹಲವರು ಅತೀ ದೂರದಿಂದ ಇಲ್ಲಿಗೆ ಆಗಮಿಸಿದ್ದೀರಿ ಎಂದು ನನಗೆ ಹೇಳಿದ್ದಾರೆ. ನಿಮಗೆಲ್ಲಾ ಭಾರತೀಯ ಸಂಸ್ಕೃತಿಯ ದರ್ಶನವಾಗಿದೆ ಎಂದು ಭಾವಿಸುತ್ತೇನೆ. ನಿಮ್ಮ ಪ್ರೀತಿ, ನಿಮ್ಮ ಆತಿಥ್ಯಕ್ಕೆ ನಮನಗಳು. ಭಾಷಣದ ಆರಂಭದಲ್ಲೇ ಮೋದಿ ಇಂದಿನ ದಿನದ ಇತಿಹಾಸ ಹಾಗೂ ಕಾಂಗ್ರೆಸ್ ಹೇರಿದ ತುರ್ತು ಪರಿಸ್ಥಿತಿಯ ಕುರಿತು ಮಾತು ಆರಂಭಿಸಿದರು. ಪ್ರಜಾಪ್ರಭುತ್ವ ಭಾರತದ ಅಸ್ಮಿತೆ ಆಗಿದೆ. ಆದರೆ ಈ ಪ್ರಜಾಪ್ರಭುತ್ವವನ್ನು ಅಣಕಿಸಿ, ಪ್ರಜಾಪ್ರಭುತ್ವವನ್ನೇ ಬಂಧಿಸಿಡಲಾಗಿತ್ತು ಎಂದು ಕಾಂಗ್ರೆಸ್ ವಿರುದ್ಧ ಪರೋಕ್ಷ ಆರೋಪ ಮಾಡಿದರು.

ಮ್ಯೂನಿಚ್‌ನಲ್ಲಿ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ

ಇಂದು ಪ್ರತಿ ಹಳ್ಳಿಗೆ ನೀರು ತಲುಪುತ್ತಿದೆ. ಇಂದು ಹಳ್ಳಿಗೆ ಗ್ಯಾಸ್ ಸಂಪರ್ಕ ಸಿಕ್ಕಿದೆ. ಕೊರೋನಾ ಸಮಯದಲ್ಲಿ ಬಡವರಿಗೆ ಪಡಿತರವನ್ನು ಉಚಿತವಾಗಿ ನೀಡಲಾಗಿದೆ. ಇದೀಗ ಭಾರತ ಸ್ಟಾರ್ಟ್ ಅಪ್ ಹಬ್ ಆಗಿ ಬದಲಾಗಿದೆ. ಇಂದು ಭಾರತದಲ್ಲಿ ರೈಲ್ವೇ ಕೋಚ್ ನಿರ್ಮಾಣ ಮಾಡಲಾಗುತ್ತಿದೆ. ಅತೀ ವೇಗದಲ್ಲಿ ಎಲ್ಲಾ ಮನೆಗೆ ನಳ್ಳಿ ನೀರು ತಲುಪಿಸು ಕಾರ್ಯ ನಡೆಯುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಭಾರತ ಇಂದು ಎಲ್ಲಾ ಕ್ಷೇತ್ರದಲ್ಲೂ ಶಕ್ತವಾಗಿದೆ. ಡಿಜಿಟಲ್ ಪಾವತಿಯಲ್ಲಿ ವಿಶ್ವದ ಶೇಕಡಾ 40 ರಷ್ಟು ಭಾರತದಲ್ಲಿ ನಡೆಯುತ್ತಿದೆ. ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಇಂಟರ್ನೆಟ್ ಡೇಟಾ ಅಗ್ಗವಾಗಿದೆ. ಕೊರೋನಾ ಲಸಿಕಾ ಪ್ರಮಾಣ ಪತ್ರ ಪಡೆಯಲು 110 ಕೋಟಿ ಮಂದಿ ರಿಜಿಸ್ಟ್ರೇಶನ್ ಮಾಡಿದ್ದಾರೆ. ಆರೋಗ್ಯಸೇತು ಸೇರಿದಂತೆ ಸರ್ಕಾರಿ ಸೌಲಭ್ಯಗಳು ಹಾಗೂ ಮಾಹಿತಿ ಪಡೆಯಲು ಭಾರತೀಯರು ಇದೀಗ ಡಿಜಿಟಲ್ ಮಾಧ್ಯಮದ ಮೂಲಕ ನಡೆಯುತ್ತಿದೆ.

 

 

ರೈಲ್ವೇ ಟಿಕೆಟ್‌ನಲ್ಲಿ ಬಹುಪಾಲು ಆನ್‌ಲೈನ್ ಮೂಲಕ ನಡೆಯುತ್ತಿದೆ. ದೇಶದಲ್ಲಿ ಎಥೆನಾಲ್ ಇಂಧನ ಕುರಿತು ಅತ್ಯಂತ ವೇಗವಾಗಿ ಯಶಸ್ಸು ಸಾಧಿಸುತ್ತಿದ್ದೇವೆ. ಲಸಿಕೆಯಲ್ಲಿ ಭಾರತ ಶೇಕಡಾ 95 ಶೇಕಡಾ ಮಂದಿಗೆ ಕನಿಷ್ಠ ಒಂದು ಡೋಸ್ ನೀಡಲಾಗಿದೆ. ಆದರೆ ಹಲವರು ಹೇಳಿದರು ಎಲ್ಲರಿಗೆ ಲಸಿಕೆ ಹಾಕಲು 10 ರಿದ 15 ವರ್ಷ ಬೇಕು ಎಂದು. ಆದರೆ ಈಗ ಸಂಖ್ಯೆ 1.96 ಬಿಲಿಯನ್ ಡೋಸ್ ನೀಡುವ ಮೂಲಕ ಹೊಸ ದಾಖಲೆ ಬರೆಯಲಾಗಿದೆ. ಭಾರತದಲ್ಲಿ ತಯಾರಿಸಿದ ಅತ್ಯುತ್ತಮ ವ್ಯಾಕ್ಸಿನ್ ನೀಡಲಾಗಿದೆ ಎಂದು ಮೋದಿ ಹೇಳಿದ್ದಾರೆ.

ಕಳೆದ ಬಾರಿ ನಾನು ಜರ್ಮನಿಗೆ ಆಗಮಿಸಿದಾಗ ಸ್ಟಾರ್ಟ್ಆಪ್ ನನ್ನ ಕಿವಿಯಲ್ಲಿ ಗುನುಗುನಿಸಿತ್ತು. ಭಾರತದಲ್ಲಿ ಸ್ಟಾರ್ಟ್ ಅಪ್ ಪದ ಹೆಚ್ಚಾಗಿ ಯಾರು ಕೇಳಿರಲಿಲ್ಲ. ಆದರೆ ಇದೀಗ ಭಾರತ ವಿಶ್ವದ 3ನೇ ಅತೀ ದೊಡ್ಡ ಸ್ಟಾರ್ಟ್ ಅಪ್ ಹಬ್ ಆಗಿದೆ. ಇಂದು ಭಾರತ ವಿಶ್ವದಲ್ಲಿ ಭಾರತ 3ನೇ ಅತೀ ದೊಡ್ಡ ಮೊಬೈಲ್ ಉತ್ಪಾದಕ ದೇಶವಾಗಿದೆ ಎಂದು ಮೋದಿ ಹೇಳಿದ್ದಾರೆ. 

ತುರ್ತುಪರಿಸ್ಥಿತಿ ಸಂದರ್ಭದಲ್ಲಿ ನಾನು ಹೋರಾಡಿದ್ದೇನೆ: ಮೋದಿ 'ಮನ್ ಕಿ ಬಾತ್'!

ಮಾತೃಭಾಷೆಯಲ್ಲಿ ಎಂಜಿನೀಯರ್ ಸೇರಿದಂತೆ ಉನ್ನತ ವಿದ್ಯಾಭ್ಯಾಸ ಭಾರತೀಯ ವಿದ್ಯಾರ್ಥಿಗಳಿಗೆ ಸಿಗುತ್ತಿದೆ. ನಿಮ್ಮ ಕೆಲಸ, ನಿಮ್ಮ ಪರಿಶ್ರಮದಿಂದ ಭಾರತಕ್ಕೂ ಕೊಡುಗೆ ನೀಡಿದೆ. ನೀವೆಲ್ಲಾ ಭಾರತದ ರಾಯಭಾರಿಗಳು ಎಂದು ಜರ್ಮನಿಯ ಭಾರತೀಯ ಸಮುದಾಯವನ್ನುದ್ದೇಶಿ ಹೇಳಿದರು. ನಿಮ್ಮಲ್ಲರನ್ನು ಭೇಟಿಯಾಗುವ ಅವಕಾಶ ಸಿಕ್ಕಿರುವುದು ಸೌಭಾಗ್ಯ ಎಂದು ಭಾವಿಸುತ್ತೇನೆ. ಇಂತಹ ಅಭೂತಪೂರ್ವ ಹಾಗೂ ಅತ್ಯುತ್ತಮ ಕಾರ್ಯಕ್ರಮ ಆಯೋಜಿಸಿದ ನಿಮ್ಮಲ್ಲರಿಗೆ ಧನ್ಯವಾದ ಎಂದು ಮೋದಿ ಹೇಳಿದರು.

ಮೋದಿ ಭಾಷಣಕ್ಕೂ ಮೊದಲು ಭಾರತೀಯ ಸಮುದಾಯ ಭರತನಾಟ್ಯ ಸೇರಿದಂತೆ ಭಾರತೀಯ ವಿವಿದ ನೃತ್ಯ ಪ್ರಕಾರ ಹಾಗೂ ಹಾಡುಗಳ ಮನರಂಜನಾ ಕಾರ್ಯಕ್ರಮ ಆಯೋಜಿಸಿತ್ತು. ಭಾರತ ಹಾಗೂ ಜರ್ಮನಿಯ ಸಂಸ್ಕೃತಿ ಇಲ್ಲಿ ಮೇಳೈಸಿತ್ತು. ವಂದೇ ಮಾತರಂ ಹಾಡಿನೊಂದಿಗೆ ಮನರಂಜನಾ ಕಾರ್ಯಕ್ರಮ ಅಂತ್ಯಗೊಂಡಿತು.

ಬಳಿಕ ಪ್ರಧಾನಿ ನರೇಂದ್ರ ಮೋದಿ ನೆರೆದಿದ್ದವರತ್ತ ಕೈಬೀಸುತ್ತಾ ವೇದಿಕೆಗೆ ಆಗಮಿಸಿದರು. ಮೋದಿ ಆಗಮಿಸುತ್ತಿದ್ದಂತೆ ಮಿಂಚಿನ ಸಂಚಲನ ಸೃಷ್ಟಿಯಾಗಿತ್ತು. ಮೋದಿ ಆಗಮದಿಂದ ಪುಳಕಿತಗೊಂಡ ಭಾರತೀಯ ಸಮುದಾಯ ಚಪ್ಪಾಳೆ ಮೂಲಕ ಮೋದಿ ಸ್ವಾಗತಿಸಿತು.

ರಾಷ್ಟ್ರಗೀತೆ ಮೂಲಕ ವಿಶೇಷ ಕಾರ್ಯಕ್ರಮ ಆರಂಭಗೊಂಡಿತು. ರಾಷ್ಟ್ರಗೀತೆ ಮುಗಿದ ಬೆನ್ನಲ್ಲೇ ಮೋದಿ ಮೋದಿ ಘೋಷಣೆ ಎಲ್ಲಡೆಗಳಿಂದ ಕೇಳಿಬಂದಿತು. 

ಕೋವಿಡ್ ಬಳಿಕ ವಿದೇಶದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿ ಮೋದಿ ಮಾತನಾಡುತ್ತಿರುವ ಅತೀ ದೊಡ್ಡ ಕಾರ್ಯಕ್ರಮ ಇದು. ಇಷ್ಟೇ ಅಲ್ಲ ಜರ್ಮನಿಯಲ್ಲಿ ಇದುವರೆಗೂ ಇಷ್ಟೊಂದು ದೊಡ್ಡ ಸಮುದಾಯವನ್ನು ಉದ್ದೇಶಿಸಿ ಯಾರೂ ಮಾತನಾಡಿಲ್ಲ. ಹೀಗಾಗಿ ಈ ಕಾರ್ಯಕ್ರಮವನ್ನು ಸ್ಮರಣೀಯಾವಗಿಸಲು ಎಲ್ಲಾ ಪ್ರಯತ್ನ ನಡೆಸಲಾಗಿದೆ.

ಜಿ7 ಶೃಂಗ ಸಭೆಯಲ್ಲಿ ಭಾಗಿಯಾಗುವುದರ ಜೊತೆಗೆ 12 ಜಾಗತಿಕ ನಾಯಕರ ಜೊತೆ ಪ್ರತ್ಯೇಕ ಮಾತುಕತೆ ನಡೆಸಲಿದ್ದಾರೆ. ಅಲ್ಲದೆ ಹಲವು ದ್ವಿಪಕ್ಷೀಯ ಮಾತುಕತೆಗಳನ್ನೂ ಆಯೋಜಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !
ಇನ್ನೂ 3 ದಿನ ತಗ್ಗುವುದಿಲ್ಲ ಇಂಡಿಗೋಳು! - ನಿನ್ನೆ ಮತ್ತೆ 650 ವಿಮಾನ ರದ್ದು