ದೇಗುಲ ಸ್ವಚ್ಛತೆಗೆ ಮೋದಿ ಕರೆ: ನಾಸಿಕ್‌ ದೇಗುಲ ನೆಲ ಒರೆಸಿದ ಪ್ರಧಾನಿ ಮೋದಿ

By Kannadaprabha News  |  First Published Jan 13, 2024, 8:12 AM IST

ಶುಕ್ರವಾರ ಬೆಳಗ್ಗೆ ನಾಸಿಕ್‌ನ ಕಾಲಾರಾಮ್‌ ದೇವಸ್ಥಾನಕ್ಕೆ ಆಗಮಿಸಿದ್ದ ಮೋದಿ, ಅಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದರು. ಬಳಿಕ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಅವರು ರಾಮಾಯಣ ಶ್ಲೋಕ ಪಠಣ ಮತ್ತು ಭಜನೆಯಲ್ಲಿ ಭಾಗಿಯಾಗಿದರು.


ನಾಸಿಕ್‌ (ಜನವರಿ 13, 2024): ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಪ್ರಸಿದ್ಧ ‘ಕಲಾರಾಮ್‌’ ದೇಸವ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವತಃ ನೆಲ ಒರೆಸುವ ಮೂಲಕ ಸ್ವಚ್ಛತಾ ಕಾರ್ಯ ನೆರವೇರಿಸಿದ್ದಾರೆ. ಈ ಮೂಲಕ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇಶದ ಎಲ್ಲ ದೇವಸ್ಥಾನಗಳಲ್ಲಿ ‘ಸ್ವಚ್ಛತಾ ಅಭಿಯಾನ’ ಕೈಗೊಳ್ಳುವಂತೆ ಕರೆ ನೀಡಿದ್ದಾರೆ.

ಶುಕ್ರವಾರ ಬೆಳಗ್ಗೆ ನಾಸಿಕ್‌ನ ಕಾಲಾರಾಮ್‌ ದೇವಸ್ಥಾನಕ್ಕೆ ಆಗಮಿಸಿದ್ದ ಮೋದಿ, ಅಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದರು. ಬಳಿಕ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಅವರು ರಾಮಾಯಣ ಶ್ಲೋಕ ಪಠಣ ಮತ್ತು ಭಜನೆಯಲ್ಲಿ ಭಾಗಿಯಾಗಿದರು. ಸಂತ ಏಕ್‌ನಾಥ್‌ ಅವರು ಮರಾಠಿಯಲ್ಲಿ ಬರೆದ ‘ಭಾವಾರ್ಥ ರಾಮಾಯಣ’ವನ್ನು ಪಂಡಿತರು ಪಠಣ ಮಾಡಿದರು. ಈ ವೇಳೆ ಕೈಯಲ್ಲಿ ತಾಳ ಹಿಡಿದು ಬಾರಿಸುತ್ತ ಮೋದಿ ಕೂಡ ಭಜನೆಯಲ್ಲಿ ತೊಡಗಿದರು.

Tap to resize

Latest Videos

ಶ್ರೀರಾಮ ಮಂದಿರ ಹೋರಾಟದಲ್ಲಿ ಪ್ರಧಾನಿ ಮೋದಿಯ ಪಾತ್ರ ಏನು?

ಬಳಿಕ ನಾಸಿಕ್‌ನ ತಪೋವನ ಮೈದಾನದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಯುವ ಮಹೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ಜ.22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಸಮಾರಂಭ ನಡೆಯಲಿದ್ದು, ಇದಕ್ಕೂ ಮುನ್ನ ದೇಶದ ಎಲ್ಲ ದೇವಸ್ಥಾನಗಳಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳಿ ಎಂದು ನಾನು ದೇಶದ ಜನರಲ್ಲಿ ಮನವಿ ಮಾಡುತ್ತೇನೆ’ ಎಂದರು.

ಬೆಂಗಳೂರಿನಿಂದ ಮಂದಿರಕ್ಕೆ ‘ಸೂರ್ಯ ತಿಲಕ’ ಯಂತ್ರ 
ಅಯೋಧ್ಯೆ: ಪ್ರತಿವರ್ಷ ರಾಮನವಮಿಯ ದಿನ ರಾಮಲಲ್ಲಾನ ಮೂರ್ತಿಯ ಮೇಲೆ ಸೂರ್ಯನ ಬೆಳಕು ಬೀಳುವಂತೆ ಮಾಡುವ ‘ಸೂರ್ಯ ತಿಲಕ’ ಯಂತ್ರವನ್ನು ಬೆಂಗಳೂರಿನ ಕಂಪನಿಯೊಂದು ಕೊಡುಗೆಯಾಗಿ ನೀಡಿದೆ. ಇದು ಪೆರಿಸ್ಕೋಪ್‌ನಂತೆ ಕಾರ್ಯ ನಿರ್ವಹಿಸಲಿದ್ದು, ಸೂರ್ಯನ ಬೆಳಕನ್ನು ರಾಮ ಮೂರ್ತಿಯ ಮೇಲೆ ಪ್ರತಿಬಿಂಬಿಸಲಿದೆ.

ರಾಮ ಮಂದಿರ ಆಹ್ವಾನ ತಿರಸ್ಕರಿಸಿದ ಕಾಂಗ್ರೆಸ್, ರಾಮ ವಿರೋಧಿಗಳಿಗೆ ಜಾಗವಿಲ್ಲ ಎಂದ ಜನ!

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಆಸ್ಟ್ರೋಫಿಸಿಕ್ಸ್‌ ಮತ್ತು ಸೆಂಟ್ರಲ್‌ ಬಿಲ್ಡಿಂಗ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಸಹಯೋಗದೊಂದಿಗೆ ಬೆಂಗಳೂರಿನ ಜಿಗಣಿಯಲ್ಲಿರುವ ಆಪ್ಟಿಕ್ಸ್‌ ಅಂಡ್‌ ಅಲೈಡ್‌ ಎಂಜಿನಿಯರಿಂಗ್‌ ಪ್ರೈ.ಲಿ. ಈ ಯಂತ್ರವನ್ನು ತಯಾರಿಸಿದೆ. ಮಂದಿರದಲ್ಲಿ ಕಬ್ಬಿಣದ ಬಳಕೆ ಮಾಡಿಲ್ಲದ ಕಾರಣ ಇದನ್ನು ಟೈಟಾನಿಯಂ, ಹಿತ್ತಾಳೆ ಮತ್ತು ಕಂಚು ಬಳಸಿ ತಯಾರು ಮಾಡಲಾಗಿದೆ.

ಲಕ್ಷದ್ವೀಪಕ್ಕೆ ಹೋಗಲು ಪ್ಲ್ಯಾನ್‌ ಮಾಡ್ತಿದ್ದೀರಾ? PayTMನಲ್ಲಿ ಬುಕ್‌ ಮಾಡಿ ವಿಮಾನ ಟಿಕೆಟ್‌ಗೆ ಭರ್ಜರಿ ಡಿಸ್ಕೌಂಟ್‌ ಗಳಿಸಿ!

click me!