* ಎರಡನೇ ಕೊರೋನಾ ಅಲೆ, ಆತಂಕದ ನಡುವೆ ಪಿಎಂ ಮೋದಿ ಮಹತ್ವದ ಸಭೆ
* ಕೊರೋನಾ ನಿಯಂತ್ರಿಸಲು ರಾಜ್ಯಗಳಿಂದ ಕ್ರಮ, ಮೋದಿ ಸಮೀಕ್ಷೆ
* ಕೇಂದ್ರ ಕಳುಹಿಸಿದ ಸೌಲಭ್ಯಗಳ ಬಳಕೆಯಾಘುತ್ತಿದೆಯೇ ಎಂದು ಪರಿಶೀಲಿಸಲು ಆಡಿಟ್
ನವದೆಹಲಿ(ಮೇ.15): ಕೊರೋನಾ ಎರಡನೇ ಅಲೆ ಕೇಂದ್ರದ ಜೊತೆ ರಾಜ್ಯ ಸರ್ಕಾರವವನ್ನೂ ಚಿಂತೆಗೀಡು ಮಾಡಿದೆ. ಹೀಗಿರುವಾಗ ಪಿಎಂ ಮೋದಿ ದೇಶದಲ್ಲಿ ಕೊರೋನಾದಿಂದ ಸೃಷ್ಟಿಯಾಗಿರುವ ಸಮಸ್ಯೆಗಳು ಹಾಗೂ ಲಸಿಕೆ ಅಭಿಯಾನದ ಸಮೀಕ್ಷೆ ನಡೆಸಲು ಇಂದು, ಶನಿವಾರ ಉನ್ನತ ಮಟ್ಟದ ಸಭೆ ಆರಂಭಿಸಿದ್ದಾರೆ. ಬೆಳಗ್ಗೆ 11 ಗಂಟೆಗೆ ಆರಂಭವಾದ ಈ ಸಭೆಯಲ್ಲಿ ಹಿರಿಯ ಸಚಿವರು ಹಾಗೂ ಅಧಿಕಾರಿಗಳು ಭಾಗಿಯಾಗಿದ್ದಾರೆ. ಕ್ಯಾಬಿನೆಟ್ ಕಾರ್ಯದರ್ಶಿ, ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಹಾಗೂ ಆರೋಗ್ಯ ಸಚಿವರೂ ಭಾಗಿಯಾಗಿದ್ದಾರೆ.
ಸದ್ಯ ದೆಶಾದ್ಯಂತ ಮೂರು ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ. ಇಷ್ಟೇ ಅಲ್ಲದೇ ಕೊರೋನಾ ಸೋಂಕಿತರ ಸಾವಿನ ಸಂಖ್ಯೆಯೂ ಹೆಚ್ಚುತ್ತಿರುವುದು ಮತ್ತಷ್ಟು ಚಿಂತೆಗೆ ಕಾರಣವಾಗಿದೆ. ದೇಶದ ಬಹುತೇಕ ರಾಜ್ಯಗಳು ಲಾಖ್‌ಡೌನ್, ಕಠಿಣ ಕ್ರಮ ಹೀಗೆ ನಾಣಾ ನಿಯಮಗಳನ್ನು ಜಾರಿಗೊಳಿಸಿವೆ. ಈ ಮೂಲಕ ಪ್ರಕರಣಗಳ ನಿಯಂತ್ರಿಸಲು ಹರಸಾಹಸ ನಡೆಸುತ್ತಿವೆ.
ಧೂಳು ಹಿಡಿಯುತ್ತಿವೆ ಪಿಎಂ ಕೇರ್ಸ್ ಫಂಡ್‌ನಿಂದ ಖರೀದಿಸಿದ 251 ವೆಂಟಿಲೇಟರ್ಸ್!
ಇನ್ನು ಕೊರೋನಾ ಸಮರ್ಪಕವಾಗಿ ಎದುರಿಸುವ ನಿಟ್ಟಿನಲ್ಲಿ ರಾಜ್ಯಗಳಿಗೆ ಕೇಂದ್ರ ಸರ್ಕಾರ ವೆಂಟಿಲೇಟ್, ಆಕ್ಸಿಜನ್ ಹೀಗೆ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ. ಹೀಗಿದ್ದರೂ ಇವುಗಳನ್ನು ರಾಜ್ಯಗಳು ಬಳಸುತ್ತಿಲ್ಲ ಎಂಬ ಆರೋಪಗಳೂ ಕೇಳಿ ಬಂದಿದೆ. ರಾಜ್ಯಗಳು ತಾವು ಕಳುಹಿಸಿಕೊಟ್ಟ ವೈದ್ಯಕೀಯ ಸಹಾಯವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿವೆಯೋ ಎಂಬುವುದನ್ನು ಪರಿಶೀಲಿಸಲು ಈ ಸಭೆಯಲ್ಲಿ ಆಡಿಟ್ ನಡೆಸುವ ನಿರ್ಧಾರವನ್ನೂ ತೆಗೆದುಕೊಳ್ಳಲಾಗಿದೆ. ಈ ನಿರ್ಧಾರ ಕೇಂದ್ರ ಕಳುಹಿಸಿದ ಸೌಲಭ್ಯವನ್ನು ಬಳಸದ ರಾಜ್ಯಗಳಿಗೆ ನಡುಕ ಹುಟ್ಟಿಸಿದೆ. ಕೆಲ ದಿನಗಳ ಹಿಂದಷ್ಟೇ ಪಂಜಾಬ್‌ನಲ್ಲಿ ವೆಂಟಿಲೇಟರ್‌ಗಳು ಧೂಳು ಹಿಡಿಯುತ್ತಿದ್ದ ದೃಶ್ಯಗಳು ವೈರಲ್ ಆಗಿದ್ದವು.
ಸಭೆಯಲ್ಲಿ ಉಲ್ಲೇಖವಾಗ ಪ್ರಮುಖ ಅಂಶಗಳು:
* ಸ್ಥಳೀಯ ಮಟ್ಟದಲ್ಲಿ ಕಂಟೋನ್ಮೆಂಟ್ ಝೋನ್ ಮಾಡುವ ಬಗ್ಗೆ ಯೋಚಿಸಬೇಕು.
* ಪಾಸಿಟಿವಿಟಿ ರೇಟ್ ಅತೀ ಹೆಚ್ಚು ಇರುವ ಪ್ರದೇಶಗಳಲ್ಲಿ ಟೆಸ್ಟಿಂಗ್ ಸಮಖ್ಯೆಯೂ ಹೆಚ್ಚಿಸಬೇಕು.
* ಡೋರ್ ಟು ಡೋರ್ ಟೆಸ್ಟಿಂಗ್ ಬಗ್ಗೆ ಗಮನಹರಿಸಲು ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಕೇಂದ್ರಗಳನ್ನು ಹೆಚ್ಚಿಸಬೇಕು.
* ಗ್ರಾಮೀಣ ಪ್ರದೇಶಗಳಿಗೂ ಆಕ್ಸಿಜನ್ ಪೂರೈಕೆಯಾಘುವಂತೆ ನೋಡಿಕೊಳ್ಳಬೇಕು.
ಧೂಳು ಹಿಡಿಯುತ್ತಿದೆ ವೆಂಟಿಲೇಟರ್; ಮಾಧ್ಯಮ ವರದಿ ಕುರಿತು ಸ್ಪಷ್ಟನೆ ನೀಡಿದ ಕೇಂದ್ರ!
ಸರ್ಕಾರ ಈ ಎರಡನೇ ಅಲೆ ತಡೆಯುವಲ್ಲಿ ವಿಫಲಗೊಂಡಿದೆ ಎಂಬುವುದು ವಿರೋಧ ಪಕ್ಷಗಳ ಆರೋಪವಾಗಿದೆ. ಇದಕ್ಕೆ ಅನುಗುಣವಾಗಿ ಆಕ್ಸಿಜನ್, ಬೆಡ್ ಕೊರತೆಯೂ ಎದುರಾಗಿದೆ. ಹೀಗಿರರುವಾಗ ಪಿಎಂ ಮೋದಿ ಶುಕ್ರವಾರದಂದು ಮಾತನಾಡುತ್ತಾ 'ನೂರು ವರ್ಷದಲ್ಲಿ ಕಾಣಿಸಿಕೊಂಡ ಭಯಾನಕ ವೈರಸ್ ಇದು. ಎಲ್ಲೆಡೆ ಹರಡಿಕೊಂಡಿರುವ ಈ ಮಹಾಮಾರಿ ಹೆಜ್ಜೆ ಹೆಜ್ಜೆಗೂ ಅಗ್ನಿ ಪರೀಕ್ಷೆಯೊಡ್ಡುತ್ತಿದೆ. ನಾವು ಅದೃಶ್ಯ ಶತ್ರುವನ್ನು ಎದುರಿಸುತ್ತಿದ್ದೇವೆ. ಯುದ್ಧವನ್ನು ಎದುರಿಸುವಂತೆ ನಾವು ಹೋರಾಡುತ್ತಿದ್ದೇವೆ' ಎಂದಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona