
ನವದೆಹಲಿ(ಜು.08): ಪ್ರಧಾನಿ ನರೇಂದ್ರ ಮೋದಿ ಇಂದು ಸತತ ಸಭೆ ನಡೆಸಿದ್ದಾರೆ. ನೂತನ ಸಚಿವರು, ಪರಿಷ್ಕೃತ ಕ್ಯಾಬಿನೆಟ್ ಜೊತೆ ಮೋದಿ ವರ್ಚುವಲ್ ಸಭೆ ನಡೆಸಿದ್ದಾರೆ. ಈ ಸಭೆ ಬಳಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಭರ್ಜರಿ ಪ್ಯಾಕೇಜ್ ಘೋಷಿಸಿದ್ದಾರೆ. ಕೃಷಿ ಕ್ಷೇತ್ರಕ್ಕೆ 1 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದ್ದಾರೆ.
ನೂತನ ಸಚಿವರ ಕ್ಯಾಬಿನೆಟ್ ಸಭೆ; ಕೋವಿಡ್ ನಿಯಂತ್ರಣಕ್ಕೆ 23,123 ಕೋಟಿ ರೂ ಘೋಷಣೆ!.
ಕೃಷಿ ಉತ್ಪಾದನೆ ಮತ್ತು ಜಾನುವಾರು ಮಾರುಕಟ್ಟೆ ಸೇರಿದಂತೆ ಕೃಷಿ ಕ್ಷೇತ್ರಕ್ಕೆ APMC ಮೂಲಕ 1 ಲಕ್ಷ ಕೋಟಿ ರೂಪಾಯಿ ಘೋಷಣೆ ಮಾಡಲಾಗಿದೆ. ಎಪಿಎಂಸಿಗಳಿಗೆ ಹೆಚ್ಚಿನ ಸಂಪನ್ಮೂಲಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು. ರೈತರ ಮೂಲಸೌಕರ್ಯ ನಿಧಿಗೆ ಆತ್ಮನಿರ್ಭಾರ ಭಾರತ್ ಅಡಿಯಲ್ಲಿ ನಿಗದಿಪಡಿಸಿದ 1 ಲಕ್ಷ ಕೋಟಿ ರೂ.ಗಳನ್ನು ಎಪಿಎಂಸಿಗಳು ಬಳಸಬಹುದು ಎಂದು ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ತೆಂಗಿನಕಾಯಿ ಕೃಷಿಯನ್ನು ಹೆಚ್ಚಿಸಲು ನಾವು ತೆಂಗಿನಕಾಯಿ ಕಾಯ್ದೆಗೆ ತಿದ್ದುಪಡಿ ಮಾಡುತ್ತಿದ್ದೇವೆ. ತೆಂಗಿನಕಾಯಿ ಮಂಡಳಿಯ ಅಧ್ಯಕ್ಷರು ಅಧಿಕಾರೇತರ ವ್ಯಕ್ತಿಯಾಗಲಿದ್ದಾರೆ. ಈ ಮೂಲಕ ತೆಂಗಿನಕಾಯಿ ಕೃಷಿ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು ಎಂದರು.
ಆಗಸ್ಟ್ 15ರ ವರೆಗೆ ದೆಹಲಿಯಲ್ಲೇ ಇರಬೇಕು ; ನೂತನ ಸಚಿವರಿಗೆ ಬಂತು ಮಹತ್ವದ ಸೂಚನೆ!.
ಕೇಂದ್ರ ಸರ್ಕಾರ ರೈತರ ಹಕ್ಕುಗಳನ್ನು ಗೌರವಿಸಲಿದೆ. ರೈತರು ಹೊಸ ಕಾಯ್ದೆ ಹಿಂತೆಗೆದುಕೊಳ್ಳಬೇಕು ಅನ್ನೋ ಒಂದೇ ಆಗ್ರಹ ಬಿಟ್ಟು, ಕಾಯ್ದೆಯಲ್ಲಿರುವ ಯಾವುದೇ ಅಂಶದ ತಿದ್ದುಪಡಿಗೆ, ಚರ್ಚೆಗೆ ಕೇಂದ್ರ ಸಿದ್ಧ ಎಂದು ನರೇಂದ್ರ ಸಿಂಗ್ ತೋಮರ್ ಪುನರುಚ್ಚರಿಸಿದ್ದಾರೆ.
ಎಪಿಎಂಸಿಗಳನ್ನು ತೆಗೆದುಹಾಕಲಾಗುವುದಿಲ್ಲ. ಕೃಷಿ ಕಾನೂನು ಅನುಷ್ಠಾನದ ಬಳಿಕ ಎಪಿಎಂಸಿಗಳು ಕೇಂದ್ರದಿಂದ ಮೂಲ ಸೌಕರ್ಯ ನಿಧಿಯಿಂದ ಕೋಟ್ಯಾಂಟರ ರೂಪಾಯಿಗಳನ್ನು ಪಡೆಯುತ್ತಿದೆ. ಇದರಿಂದ ರೈತರಿಕೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ತೋಮರ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ