
ನವದೆಹಲಿ(ಜು.08): ಕೇಂದ್ರ ಸಂಪುಟ ಪುನಾರಚನೆ ಆಗಿ ನೂತನ ಸಚಿವರು ಅಧಿಕಾರ ಸ್ವೀಕರಿಸಿ ಆಗಿದೆ. ತಮ್ಮ ತಮ್ಮ ಕಚೇರಿಗೆ ತೆರಳಿ ಕಾರ್ಯ ಆರಂಭಿಸಿದ್ದಾರೆ. ಇದರ ನಡುವೆ ನೂತನ ಸಚಿವರಿಗೆ ಮಹತ್ವದ ನಿರ್ದೇನವೊಂದು ಬಂದಿದೆ. ಪ್ರಮಾಣ ವಚನ ಸ್ವೀಕರಿಸಿ, ಅಧಿಕಾರ ವಹಿಸಿಕೊಂಡ ನೂತನ ಸಚಿವರು ಆಗಸ್ಟ್ 15ರ ವರೆಗೆ ದೆಹಲಿಯಲ್ಲೇ ಇರಬೇಕು ಎಂದು ಸೂಚಿಸಲಾಗಿದೆ.
ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಟ್ವಿಟರ್‌ಗೆ ವಾರ್ನಿಂಗ್ ನೀಡಿದ ನೂತನ ಸಚಿವ ಅಶ್ವಿನಿ ವೈಷ್ಣವ್!.
ನಿನ್ನೆ(ಜು.08) ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇಂದು ಸಚಿವರು ಅಧಿಕಾರ ವಹಿಸಿಕೊಂಡಿದ್ದಾರೆ. ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಮೋದಿ ಭೇಟಿಗೂ ಮುನ್ನ ಈ ಸೂಚನೆ ನೀಡಲಾಗಿದೆ. ಕಚೇರಿ, ಕೆಲಸ ಕಾರ್ಯಗಳು, ತಮ್ಮ ತಮ್ಮ ಖಾತೆ ಕುರಿತು ವಿವರವಾಗಿ ತಿಳಿದುಕೊಳ್ಳಲು ಹಾಗೂ ಕ್ಷಿಪ್ರವಾಗಿ ಕಾರ್ಯ ಪ್ರತ್ತರಾಗಲು ಆಗಸ್ಟ್ 15ರ ವರೆಗೆ ದೆಹಯಲ್ಲಿರಲು ಸೂಚಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಹರ್ಷವರ್ಧನ್, ಜಾವ್ಡೇಕರ್, ರವಿಶಂಕರ್ ಪ್ರಸಾದ್ ಅಚ್ಚರಿಯ ರಾಜೀನಾಮೆ!
ನೂತನ ಸಚಿವರ ಇದರ ಜೊತೆಗೆ ಕೆಲ ಮಹತ್ವದ ಸೂಚನೆಗಳನ್ನು ನೀಡಲಾಗಿದೆ. ನೂತನ ಸಚಿವರ ಜವಾಬ್ದಾರಿಗಳನ್ನು ಅರಿಯಲು ಈ ಸಮಯವನ್ನು ಬಳಸಿಕೊಳ್ಳಿ. ಇನ್ನು ಯಾರೂ ಕೂಡ ಹಾಗೂ ಬೆಂಬಲಿಗರು ಸಂಭ್ರಮಾಚರಣೆ ನಡೆಸಬಾರದು. ಕೊರೋನಾ ಸಮಯದಲ್ಲಿ ತಪ್ಪು ಸಂದೇಶ ನೀಡದಂತೆ ಸೂಚಿಸಲಾಗಿದೆ. ಇದರ ಜೊತೆಗೆ ಭ್ರಷ್ಟಾಚಾರ ವಿಚಾರದಲ್ಲಿ ರಾಜಿ ಇಲ್ಲ. ಪಾರದರ್ಶಕ ಆಡಳಿತ ನೀಡಬೇಕು ಎಂದು ಖಡಕ್ ಸೂಚನೆ ನೀಡಲಾಗಿದೆ.
ಸಂಪುಟ ಪುನಾರಚನೆ ಬಳಿಕ ಮೋದಿ ಕ್ಯಾಬಿನೆಟ್ ಬಲ 78ಕ್ಕೆ ಏರಿಕೆಯಾಗಿದೆ. ಕೆಲವರ ಖಾತೆ ಬದಲಾವಣೆಯಾದರೆ, 25 ಹೊಸ ಮುಖಗಳು ಕೇಂದ್ರ ಸಂಪುಟ ಸೇರಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ