ಪ್ರಧಾನಿ ನರೇಂದ್ರ ಮೋದಿ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ರಾಜ್ಯದ ನಾಯಕರಿಗೆ ಬಂಪರ್ ಖಾತೆ ನೀಡಲಾಗಿದೆ. ಹೆಚ್‌ಡಿ ಕುಮಾರಸ್ವಾಮಿಗೆ ಉಕ್ಕು ಹಾಗೂ ಬೃಹತ್ ಕೈಕಾರಿಕೆ ಖಾತೆ ನೀಡಲಾಗಿದೆ. ರಾಜ್ಯದ ನಾಯಕರಿಗೆ ನೀಡಿದ ಖಾತೆ ವಿವರ ಇಲ್ಲಿದೆ.
ನವದೆಹಲಿ(ಜೂ.10) ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ಯಶಸ್ವಿಯಾಗಿ ನಡೆದಿದೆ. ಇದೇ ವೇಳೆ ಮೋದಿ ಸಂಪುಟ ಸಚಿವರ ಖಾತೆ ಮಾಹಿತಿಯೂ ಬಹಿರಂಗವಾಗಿದೆ. ಈ ಪೈಕಿ ರಾಜ್ಯದ ಸಂಸದರಿಗೆ ಭರ್ಜರಿ ಖಾತೆ ನೀಡಲಾಗಿದೆ. ಕಳೆದ ಬಾರಿ ಮೋದಿ ಸರ್ಕಾರದಲ್ಲಿ ಕಲ್ಲಿದ್ದಲ್ಲು ಸಚಿವರಾಗಿದ್ದ ಪ್ರಹ್ಲಾದ್ ಜೋಶಿಗೆ ಪ್ರಮುಖ ಖಾತೆ ನೀಡಲಾಗಿದೆ. ಜೋಶಿಗೆ ಆಹಾರ ಮತ್ತು ಗ್ರಾಹಕ ವ್ವಹಾರ ಹಾಗೂ ನವೀಕರಿಸಬಹುದಾದ ಇಂಧನ ಖಾತೆಯನ್ನು ನೀಡಲಾಗಿದೆ.
ಬಿಜೆಪಿ ಮೈತ್ರಿ ಪಕ್ಷವಾಗಿ ಜೆಡಿಎಸ್‌ಗೆ ಪ್ರಮುಖ ಖಾತೆ ನೀಡಲಾಗಿದೆ. ಹೆಚ್‌ಡಿ ಕುಮಾರಸ್ವಾಮಿಗೆ ಉಕ್ಕು ಹಾಗೂ ಬೃಹತ್ ಕೈಗಾರಿಗೆ ಖಾತೆ ನೀಡಲಾಗಿದೆ. ಇನ್ನು ಶೋಭಕರಂದ್ಲಾಜೆಗೆ ಸಣ್ಣ ಮತ್ತು ಅತೀ ಸೂಕ್ಷ್ಮ ಕೈಗಾರಿಕೆ ರಾಜ್ಯ ಖಾತೆ ಹಂಚಿಕೆ ಮಾಡಲಾಗಿದೆ. ಇನ್ನು ವಿ ಸೋಮಣ್ಣಗೆ ಜಲ ಶಕ್ತಿ ರಾಜ್ಯ ಖಾತೆ ನೀಡಲಾಗಿದೆ.
undefined
ಗೃಹ ಉಳಿಸಿಕೊಂಡ ಶಾ, ಮೋದಿ 3.0 ಸಂಪುಟದ ಸಚವರಿಗೆ ಖಾತೆ ಹಂಚಿಕೆ; ಯಾರು ಯಾವ ಮಂತ್ರಿ!
ಕ್ಯಾಬಿನೆಟ್ ದರ್ಜೆ ಸಚಿವರು
ಹೆಚ್ ಡಿ ಕುಮಾರಸ್ವಾಮಿ: ಉಕ್ಕು ಮತ್ತು ಬೃಹತ್ ಕೈಗಾರಿಕೆ
ಪ್ರಲ್ಹಾದ ಜೋಶಿ: ಆಹಾರ ಮತ್ತು ಗ್ರಾಹಕ ವ್ಯವಹಾರ, ನವೀಕರಿಸಬಹುದಾದ ಇಂಧನ
ರಾಜ್ಯ ಖಾತೆ ಸಚಿವರು
ವಿ ಸೋಮಣ್ಣ: ರೈಲ್ವೇ ಹಾಗೂ ಜಲಶಕ್ತಿ
ಶೋಭ ಕರಂದ್ಲಾಜೆ: ಸೂಕ್ಷ್ಮ, ಮಧ್ಯಮ ಹಾಗೂ ಸಣ್ಣ ಕೈಗಾರಿಕೆ
ಪ್ರಮುಖ ಖಾತೆಗಳನ್ನು ಬಿಜೆಪಿ ತನ್ನಲ್ಲೇ ಉಳಿಸಿಕೊಂಡಿದೆ. ರಕ್ಷಣಾ ಖಾತೆ ರಾಜನಾಥ್ ಸಿಂಗ್, ಗೃಹ ಖಾತೆ ಅಮಿತ್ ಶಾ, ನಿತಿನ್ ಗಡ್ಕರಿ ರಸ್ತೆ ಮತ್ತು ಸಾರಿಗೆ, ನಿರ್ಮಲಾ ಸೀತಾರಾಮನ್ ಹಣಕಾಸು, ಜೈಶಂಕರ್ ವಿದೇಶಾಂಗ, ಪಿಯೂಷ್ ಗೋಯಲ್ ವಾಣಿಜ್ಯ, ಅಶ್ವಿನಿ ವೈಷ್ಣವ್‌ಗೆ ರೈಲ್ವೇ , ಮಾಹಿತಿ ಮತ್ತು ಪ್ರಸಾರ, ಮಹಾತಿ ಮತ್ತು ತಂತ್ರಜ್ಞಾನ ಖಾತೆಗಳನ್ನೇ ನೀಡಲಾಗಿದೆ. ಜೆಪಿ ನಡ್ಡಗೆ ಆರೋಗ್ಯ ಖಾತೆ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ನೀಡಲಾಗಿದೆ. ಶಿವರಾಜ್ ಸಿಂಗ್ ಚೌಹಾಣ್‌ಗೆ ಕೃಷಿ ಖಾತೆ, ಗ್ರಾಮೀಣ ಅಭಿವೃದ್ಧಿ ಖಾತೆ ಹಂಚಿಕೆ ಮಾಡಲಾಗಿದೆ. ಧರ್ಮೇಂದ್ರ ಪ್ರಧಾನ್‌ಗೆ ಶಿಕ್ಷಣ, ಮನೋಹರ್ ಲಾಲ್ ಕಟ್ಟರ್‌ಗೆ ಇಂಧನ ಹಾಗೂ ವಸತಿ ಖಾತೆ, ಜಿತನ್ ರಾಮ್ ಮಾಂಝಿಗೆ ಸಣ್ಣ ಮತ್ತು ಅತೀ ಸೂಕ್ಷ್ಮ ಕೈಗಾರಿಕೆ, ರಾಜೀವ್ ರಂಜನ್ ಸಿಂಗ್‌ಗೆ ಪಶುಸಂಗೋಪನೆ ಮತ್ತು ಮೀನುಗಾರಿಕೆ, ಸರ್ಬಾನಂದ ಸೋನೋವಾಲ್‌ಗೆ ಬಂದರು ಖಾತೆ ಹಂಚಿಕೆ ಮಾಡಲಾಗಿದೆ .
ಮೋದಿ ಪ್ರಧಾನಿಯಾದರೆ ತಲೆ ಬೋಳಿಸುವೆ, ಚಾಲೆಂಜ್ ಹಾಕಿದ ಆಪ್ ನಾಯಕ ಯು ಟರ್ನ್!