195 ಕಿ.ಮೀ ಪ್ರಯಾಣಕ್ಕೆ ಕೇವಲ 59 ನಿಮಿಷ, ಬುಲೆಟ್ ರೈಲು ಕಾರಿಡಾರ್‌ಗೆ ಪ್ರಧಾನಿ ಮೋದಿ ಅನುಮೋದನೆ

Published : Nov 01, 2026, 03:54 PM IST
delhi siliguri bullet train ashwini vaishnaw west bengal railway metro upgrade india news

ಸಾರಾಂಶ

195 ಕಿಲೋಮೀಟರ್ ಪ್ರಯಾಣಕ್ಕೆ ಕೇವಲ 59 ನಿಮಿಷ ಸಾಕು. ದೆಹಲಿಯಿಂದ ಪ್ರಮುಖ ನಗರಗಳ ಸಂಪರ್ಕಿಸುವು ಬುಲೆಟ್ ರೈಲು ಕಾರಿಡಾರ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅನುಮೋದನೆ ನೀಡಿದ್ದಾರೆ.

ನವದೆಹಲಿ (ನ.01) ಭಾರತದಲ್ಲಿ ಬುಲೆಟ್ ರೈಲು ಕುರಿತು ಸಾಕಷ್ಟು ಬಾರಿ ಚರ್ಚೆಯಾಗಿದೆ. ಇದೀಗ ಮಹತ್ವದ ಬೆಳವಣಿಗೆಯಾಗಿದೆ. ದೆಹಲಿಯಿಂದ ಪ್ರಮುಖ ನಗರ ಸಂಪರ್ಕಿಸುವ ಬುಲೆಟ್ ರೈಲು ಕಾರಿಡಾರ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅನುಮೋದನೆ ನೀಡಿದ್ದಾರೆ. ಈ ಕುರಿತು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಸಂತಸ ಹಂಚಿಕೊಂಡಿದ್ದಾರೆ. ಬುಲೆಟ್ ರೈಲಿನಿಂದ ದೆಹಲಿಯಿಂದ ಆಗ್ರ ಕೇವಲ 59 ನಿಮಿಷದಲ್ಲಿ ಪ್ರಯಾಣ ಮಾಡಲು ಸಾಧ್ಯ.

ಪ್ರಮುಖ ನಗರಗಳಿಗೆ ಬುಲೆಟ್ ರೈಲು

ಭಾರತದ ಸಾರಿಗೆ ಸಂಪರ್ಕದಲ್ಲಿ ಭಾರಿ ಬದಲಾವಣೆ ತರಬಲ್ಲ ಬುಲೆಟ್ ರೈಲಿಗೆ ಅನುಮೋದನೆ ಸಿಕ್ಕಿದೆ. ಬುಲೆಟ್ ರೈಲಿನಿಂದ ಪ್ರಯಾಣದ ಸಮಯದಲ್ಲಿ ಉಳಿತಾಯವಾಗಲಿದೆ. ತ್ವರಿತ ಸಾರಿಗೆ ಸಂಪರ್ಕ ಸೇತುವೆಯಾಗಿ ಬುಲೆಟ್ ರೈಲು ಕೆಲಸ ಮಾಡಲಿದೆ. ದೆಹಲಿಯಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಲೀಪರ್ ರೈಲಿಗೆ ಚಾಲನೆ ಮಾಡಿ ಮಾತನಾಡಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ದೆಹಲಿ ಹಾಗೂ ಪ್ರಮುಖ ನಗರಗಳ ಸಂಪರ್ಕಿಸುವ ಬುಲೆಟ್ ರೈಲಿಗೆ ಪ್ರಧಾನಿ ಮೋದಿ ಅನುಮೋದನೆ ನೀಡಿದ್ದಾರೆ. ಈ ರೈಲು ದೆಹಲಿ, ಆಗ್ರ, ಕಾನ್ಪುರ, ಲಖನೌ, ಆಯೋಧ್ಯೆ, ವಾರಣಸಿ, ಪ್ರಯಾಗರಾಜ್ ಹಾಗೂ ಬಿಹಾರದ ಪಾಟ್ನಾ ಸಂಪರ್ಕಿಸಲಿದೆ. ಬಳಿಕ ಇದೇ ಬುಲೆಟ್ ರೈಲನ್ನು ಪಶ್ಚಿಮ ಬಂಗಾಳದ ಸಿಲಿಗುರಿ ಅಸ್ಸಾಂ ಗುವ್ಹಾಟಿಗೆ ವಿಸ್ತರಣೆ ಮಾಡಲಾಗುತ್ತದೆ ಎಂದಿದ್ದಾರೆ.

ಅತೀ ಕಡಿಮೆ ಸಮಯ, ಆರಾಮದಾಯಕ ಪ್ರಯಾಣ

185 ರಿಂದ 195 ಕಿಲೋಮೀಟರ್ ದೂರದ ದೆಹಲಿಯಿಂದ ಆಗ್ರಾಗೆ 59 ನಿಮಿಷ ಸಾಕು. ದೆಹಲಿಯಿಂದ ಕಾನ್ಪುರ ತಲುಪಲು 1 ಗಂಟೆ 45 ನಿಮಿಷ ಸಾಕು. ದೆಹಲಿಯಿಂದ ಉತ್ತರ ಪ್ರದೇಶ ಸರಿಸುಮಾರು 2 ಗಂಟೆ 12 ನಿಮಿಷ ಸಾಕು ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಲಖನೌ ಹಾಗೂ ವಾರಣಸಿ ಪ್ರಯಾಣ ಸಮಯ ಕೇವಲ 21 ನಿಮಿಷ ಮಾತ್ರ ಸಾಕು. ಇನ್ನು ವಾರಣಸಿಯಿಂದ ಪಾಟ್ನಾ 1 ಗಂಟೆ ಎಂದು ರೈಲ್ವೇ ಸಚಿವರು ಹೇಳಿದ್ದಾರೆ. ವಾರಣಸಿ ಹಾಗೂ ಪ್ರಯಾಗರಾಜ್ ಪ್ರಯಾಣ ಸಮಯ 33 ನಿಮಿಷ ಹಾಗೂ ವಾರಣಸಿ ಹಾಗೂ ಆಗ್ರಾ ಪ್ರಯಾಣ ಅವಧಿ 2 ಗಂಟೆ 34 ನಿಮಿಷ ತೆಗೆದುಕೊಳ್ಳಲಿದೆ. ದೆಹಲಿಯಿಂದ ಗುವ್ಹಾಟಿ 8 ಗಂಟೆ ಸಮಯ ತೆಗೆದುಕೊಳ್ಳಲಿದೆ.

ಸಿಲಿಗುರಿಯಿಂದ ಬುಲೆಟ್ ರೈಲನ್ನು ಗುವ್ಹಾಟಿಗೆ ಸಂಪರ್ಕಿಸುವ ನಿರ್ಧಾರಕ್ಕೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸಂತಸ ವ್ಯಕ್ತಪಡಿಸಿದ್ದಾರೆ. ಈಶಾನ್ಯ ರಾಜ್ಯಗಳಿಗೆ ಅತೀ ವೇಗದ ಬುಲೆಟ್ ರೈಲು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ತೆಗೆದುಕೊಂಡಿರುವ ಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಿಮಂತ ಬಿಸ್ವ ಶರ್ಮಾಗೆ ಧನ್ಯವಾದ ತಿಳಿಸಿದ್ದಾರೆ.

ಬೆಂಗಳೂರು ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಲೀಪರ್ ರೈಲಿಗೆ ಚಾಲನೆ

ಇಂದು ಬೆಂಗಳೂರುನಿಂದ ಮುಂಬೈಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಲೀಪರ್ ರೈಲಿಗೆ ಹಸಿರು ನಿಶಾನೆ ನೀಡಲಾಗಿದೆ. ಕೇಂದ್ರ ಸಚಿವ ಅಶ್ವನಿ ವೈಷ್ಣವ್ ಚಾಲನೆ ನೀಡಿದ್ದಾರೆ. ಕೇಂದ್ರ ಸಚಿವ ವಿ ಸೋಮಣ್ಣ, ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಸಚಿವ ಕೃಷ್ಣಬೈರೇಗೌಡ, ಸಂಸದ ಪಿಸಿ ಮೋಹನ್, ತೇಜಸ್ವಿ ಸೂರ್ಯ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಕನ್ನಡಿಗರಿಗೆ ರಾಜ್ಯೋತ್ಸವ ಶುಭಾಶಯ ತಿಳಿಸಿದ ಅಶ್ವಿನಿ ವೈಷ್ಣವ್, ವಂದೇ ಭಾರತ್, ನಮೋ ಭಾರತ್ ಉಪಯೋಗ ಎಲ್ಲರಿಗೂ ತಲುಪುತ್ತಿದೆ. ಇದೀಗ ಐಟಿ ನಗರ ಬೆಂಗಳೂರು ಹಾಗೂ ವಾಣಿಜ್ಯ ನಗರ ಮುಂಬೈ ಸಂಪರ್ಕಿಸುವ ಸ್ಲೀಪರ್ ರೈಲಿಗೆ ಚಾಲನೆ ನೀಡಲಾಗಿದೆ. ವಂದೇ ಭಾರತ್ ಸ್ಲೀಪರ್ ರೈಲು ಕರ್ನಾಟಕಕ್ಕೆ ಸಿಗಲಿದೆ. ಬೆಂಗಳೂರು - ಹುಬ್ಬಳ್ಳಿ ಮೂಲಕ ಪೂಣೆ, ಮುಂಬೈಗೆ ತೆರಳಲಿದೆ. ಪ್ರಹ್ಲಾದ್ ಜೋಷಿಯವ್ರ ಬೇಡಿಕೆ ಈಡೇರಿದೆ ಎಂದು ವೈಷ್ಣವ್ ಹೇಳಿದ್ದಾರೆ. ಮತ್ತೊಂದು ಬುಲೆಟ್ ರೈಲು ಯೋಜನೆ ಮುಗಿದಿದೆ. ಬೆಂಗಳೂರು- ಚೆನ್ನೈಗೆ ಈ ಹೈ ಸ್ಪೀಡ್ ರೈಲು ಓಡಾಡಲಿದೆ. 73 ನಿಮಿಷದಲ್ಲಿ ಚೆನ್ನೈಗೆ ತಲುಪಲಿದೆ. 2 ಗಂಟೆ 10 ನಿಮಿಷದಲ್ಲಿ ಹೈದ್ರಾಬಾದ್ ಗೆ ಈ ರೈಲು ತಲುಪಲಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನಿಂದ ಮುಂಬೈ, ಚೆನ್ನೈ, ಹೈದರಾಬಾದ್ ನಗರಗಳಿಗೆ ಬುಲೆಟ್ ಟ್ರೈನ್: 4000 ಕಿಮೀ ಯೋಜನೆಗೆ ಮೋದಿ ಅಂಕಿತ!
ವಿದೇಶ ಪ್ರಯಾಣಿಕರಿಗೂ ‘ಡಿಜಿ ಯಾತ್ರಾ’ ಸೌಲಭ್ಯ: ಬೆಂಗಳೂರು ಸೇರಿ 7 ಏರ್‌ಪೋರ್ಟ್‌ಗಳಲ್ಲಿ ಪ್ರಾಯೋಗಿಕ ಜಾರಿ