ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿಗೆ ಭಾರೀ ಡಿಮ್ಯಾಂಡ್, ಆರಂಭಕ್ಕೂ ಮೊದಲೇ ಟಿಕೆಟ್‌ಗಳು ವೇಟಿಂಗ್ ಲಿಸ್ಟ್‌ಗೆ!

Published : Nov 01, 2026, 01:14 PM ISTUpdated : Nov 01, 2026, 01:20 PM IST
Bengaluru to Mumbai Vande Bharat sleeper train

ಸಾರಾಂಶ

ದಕ್ಷಿಣ ಭಾರತದ ಮೊದಲ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ನವೆಂಬರ್ 1ರಂದು ಸಂಚಾರ ಆರಂಭಿಸುತ್ತಿದೆ. ಈ ರೈಲಿಗೆ ಪ್ರಯಾಣಿಕರಿಂದ ಭಾರಿ ಬೇಡಿಕೆ ಬಂದಿದ್ದು, ಆರಂಭಿಕ ದಿನಗಳ ಟಿಕೆಟ್‌ಗಳು ಈಗಾಗಲೇ ವೇಟಿಂಗ್ ಲಿಸ್ಟ್ ಸೇರಿವೆ. ಫಸ್ಟ್, ಸೆಕೆಂಡ್, ಥರ್ಡ್ ಏಸಿ ಟಿಕೆಟ್ ದರ ಎಷ್ಟಿದೆ?

ಇಂದು (ನವೆಂಬರ್ 1) ಕನ್ನಡ ರಾಜ್ಯೋತ್ಸವದಂದು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು(Vande bharat Sleeper train) ಬೆಂಗಳೂರು ಮತ್ತು ಮುಂಬೈ(Bengaluru-mumbai) ನಡುವೆ ಸಂಚಾರ ಆರಂಭಿಸಲಿದೆ. ವಂದೇ ಭಾರತ್ ಸ್ಲೀಪರ್ ರೈಲು ಆರಂಭಕ್ಕೂ ಮುನ್ನವೇ ಪ್ರಯಾಣಿಕರಿಂದ ಭಾರಿ ಡಿಮ್ಯಾಂಡ್ ಬಂದಿದೆ. ಈ ಸೆಮಿ ಹೈಸ್ಪೀಡ್ ರೈಲಿಗೆ ಇಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಚಾಲನೆ ನೀಡಲಿದ್ದಾರೆ. ಈ ರೈಲಿನ ಕಾರ್ಯಾಚರಣೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ನೈಋತ್ಯ ರೈಲ್ವೆ (SWR) ವಹಿಸಿಕೊಳ್ಳಲಿದೆ.

ಬೆಂಗಳೂರು-ಮುಂಬೈ ವಂದೇ ಭಾರತ್ ರೈಲಿನ ಟಿಕೆಟ್ ವೇಟಿಂಗ್ ಲಿಸ್ಟ್‌ಗೆ!

ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿಗೆ ಯಾವ ಪರಿ ಬೇಡಿಕೆಯಿದೆ ಎಂದರೆ ಟಿಕೆಟ್ ಬುಕಿಂಗ್ ತಕ್ಷಣ ಸಿಗೋಲ್ಲ, ಅಲರೆಡಿ ಫುಲ್! ಇದರ ಟಿಕೆಟ್ ಬುಕ್ಕಿಂಗ್ ನಿನ್ನೆ (ಅಕ್ಟೋಬರ್ 31) ಬೆಳಗ್ಗೆ 8 ಗಂಟೆಯಿಂದಲೇ ಶುರುವಾಯ್ತು. ಶುರುವಾದ ಕೆಲವೇ ಗಂಟೆಗಳಲ್ಲಿ ಮುಂದಿನ ಹಲವು ದಿನಗಳ ಟಿಕೆಟ್ ಬುಕಿಂಗ್ ಆಗಿಬಿಟ್ಟಿದ್ದವು! ಇದೀಗ ನೀವು ಪ್ರಯಾಣಿಸಲು ಟಿಕೆಟ್ ಮಾಡಬೇಕೆಂದರೆ ಇಂದೇ ಸಿಗುವುದು ಅಸಾಧ್ಯ. ಏಕೆಂದರೆ ಟಿಕೆಟ್‌ಗಳು ವೇಟಿಂಗ್ ಲಿಸ್ಟ್‌ ತೋರಿಸುತ್ತಿದೆ!

ಇದನ್ನೂ ಓದಿ: Bengaluru-Mumbai Vande bharat sleeper: ಕೇಂದ್ರದಿಂದ ಕನ್ನಡಿಗರಿಗೆ ರಾಜ್ಯೋತ್ಸವಕ್ಕೆ ಭರ್ಜರಿ ಗಿಫ್ಟ್!

IRCTC ಟಿಕೆಟ್ ಬುಕಿಂಗ್ ವೆಬ್‌ಸೈಟ್ ನಲ್ಲಿ ತೋರಿಸಿದ ಮಾಹಿತಿ ಪ್ರಕಾರ, ರೈಲು ಸಂಖ್ಯೆ 27652 (SMVT Bengaluru-CSMT Mumbai Vande bharat Express) ಮೊದಲ ದಿನವೇ ಪ್ರಯಾಣಕ್ಕೆ ಸೆಕೆಂಡ್ ಎಸಿ, ಫಸ್ಟ್ ಎಸಿ ಟಿಕೆಟ್‌ಗಳು ಪೂರ್ತಿ ಬುಕ್ ಆಗಿಬಿಟ್ಟಿವೆ. ನಿನ್ನೆ ಮಧ್ಯಾಹ್ನದ ವೇಳೆಗಾಗಲೇ ಸೆಕೆಂಡ್ ಎಸಿಯಲ್ಲಿ 2, ಫಸ್ಟ್ ಎಸಿಯಲ್ಲಿ 3 ಟಿಕೆಟ್‌ಗಳು ವೇಟಿಂಗ್‌ ಲಿಸ್ಟ್‌ನಲ್ಲಿದ್ದರು. ಇನ್ನು ನವೆಂಬರ್ 4ರ ಪ್ರಯಾಣಕ್ಕೆ ಸೆಕೆಂಡ್ ಎಸಿಯಲ್ಲಿ 5, ಫಸ್ಟ್ ಎಸಿಯಲ್ಲಿ 6 ಟಿಕೆಟ್‌ಗಳು ವೇಟಿಂಗ್ ಲಿಸ್ಟ್‌ನಲ್ಲಿವೆ. ನವೆಂಬರ್ 5ಕ್ಕೆ ಪ್ರಯಾಣಿಸಲು ರೈಲಿನ ಎಲ್ಲಾ ಟಿಕೆಟ್‌ಗಳು ಭರ್ತಿಯಾಗಿವೆ! ಥರ್ಡ್ ಎಸಿಯಲ್ಲಿ 52, ಸೆಕೆಂಡ್ ಎಸಿಯಲ್ಲಿ 37 ಪ್ರಯಾಣಿಕರು ವೇಟಿಂಗ್ ಲಿಸ್ಟ್‌ನಲ್ಲಿದ್ದಾರೆ, ಫಸ್ಟ್ ಎಸಿಯಲ್ಲಂತೂ ಟಿಕೆಟ್ ಕೇಳಲೇಬೇಡಿ, ಎಲ್ಲ ಫುಲ್ (REGRET).

ನವೆಂಬರ್ 6ರ ಪ್ರಯಾಣಕ್ಕೆ ಥರ್ಡ್ ಎಸಿಯಲ್ಲಿ 101, ಸೆಕೆಂಡ್ ಎಸಿಯಲ್ಲಿ 60 ಪ್ರಯಾಣಿಕರು ವೇಟಿಂಗ್ ಲಿಸ್ಟ್‌ನಲ್ಲಿದ್ದಾರೆ. ಫಸ್ಟ್ ಎಸಿಯಲ್ಲಿ ಟಿಕೆಟ್ ಕೇಳಲೇಬೇಡಿ (REGRET).

ನವೆಂಬರ್ 7ರಂದು ಪ್ರಯಾಣಿಸೋಣವೆಂದರೂ ಥರ್ಡ್ ಎಸಿಯಲ್ಲಿ 44, ಸೆಕೆಂಡ್ ಎಸಿಯಲ್ಲಿ 16 ಮತ್ತು ಫಸ್ಟ್ ಎಸಿಯಲ್ಲಿ 7 ಟಿಕೆಟ್‌ಗಳು ವೇಟಿಂಗ್ ಲಿಸ್ಟ್‌ನಲ್ಲಿವೆ! ಅಂದರೆ ಇನ್ನೊಂದು ಎರಡು ವಾರ ಟಿಕೆಟ್ ಸಿಗುವುದೇ ದೌಟ್. ಅಷ್ಟೊಂದು ಪ್ರಮಾಣದಲ್ಲಿ ಟಿಕೆಟ್ ಬುಕ್ ಆಗಿವೆ ಅಲ್ಲದೆ ವೇಟಿಂಗ್ ಲಿಸ್ಟ್ ಅಷ್ಟೇ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ.

ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಟಿಕೆಟ್ ಬೆಲೆ ಎಷ್ಟು?

ಬೆಂಗಳೂರು-ಮುಂಬೈ-ಬೆಂಗಳೂರು ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಒಟ್ಟು 16 ಬೋಗಿಗಳಿವೆ. ಪ್ರಯಾಣಿಕರಿಗೆ ಥರ್ಡ್ ಎಸಿ, ಸೆಕೆಂಡ್ ಎಸಿ ಮತ್ತು ಫಸ್ಟ್ ಎಸಿ ಎಂಬ ಮೂರು ದರ್ಜೆಗಳಿವೆ. ಅವುಗಳ ಪೈಕಿ ನೀವು ಯಾವ ಬೋಗಿಯಲ್ಲಿ ಪ್ರಯಾಣಿಸುತ್ತೀರಿ ಎಂಬುದರ ಮೇಲೆ ಟಿಕೆಟ್ ದರಗಳು ಬದಲಾಗುತ್ತವೆ.

ಇದನ್ನೂ ಓದಿ: Goa Mangaluru Vande Bharat Express ಬೆಂಗಳೂರು ಯಶವಂತಪುರಕ್ಕೂ ವಿಸ್ತರಣೆ! ಸಮಯ, ನಿಲುಗಡೆ ಸಂಪೂರ್ಣ ವಿವರ ಇಲ್ಲಿದೆ

ಟಿಕೆಟ್ ದರಗಳು ಹೀಗಿವೆ:

ಥರ್ಡ್ ಎಸಿ: 2,810 ರೂಪಾಯಿ

ಸೆಕೆಂಡ್ ಎಸಿ: 3,630 ರೂಪಾಯಿ

ಫಸ್ಟ್ ಎಸಿ: 4,450 ರೂಪಾಯಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟುಕ್ ಟುಕ್ ಪ್ರೇಮ! ಭಾರತದ ಆಟೋವನ್ನು ಬಿಟ್ಟಿರಲಾರದೆ ಲಂಡನ್‌ಗೇ ಹೊತ್ತೊಯ್ದ ವಿದೇಶಿ ದಂಪತಿ ಮನಮಿಡಿಯುವ ಕಥೆ
Anant Ashray: ಅನಾಥರ ಬಾಳಿಗೆ ಬೆಳಕಾದ 'ಅನಂತ ಆಶ್ರಯ; 5 ಸಾವಿರ ಬಡವರಿಗೆ ಬೃಹತ್ ಆಸರೆ ಕಲ್ಪಿಸಿದ ನೀತಾ ಅಂಬಾನಿ!