
ನವದೆಹಲಿ(ಮೇ 29) ಇಡೀ ದೇಶವೇ ಕೊರೋನಾ ಆತಂಕದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸಹ ತೀವ್ರ ಒತ್ತಡದಲ್ಲಿಯೇ ಪರಿಸ್ಥಿತಿ ನಿಭಾಯಿಸುತ್ತ ಇದ್ದಾರೆ. ಲಾಕ್ ಡೌನ್ ಮುಂದೆ ಏನು ಮಾಡಬೇಕು ಎಂಬ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸುವ ಸಂದರ್ಭ ಎದುರಾಗಿದೆ.
ಕಳೆದ 24 ಗಂಟೆಯಲ್ಲಿ 7,467 ಕೇಸುಗಳು ದಾಖಲಾಗಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಭಾರತದ ಒಟ್ಟು ಲೆಕ್ಕ ಒಂದು ಲಕ್ಷದ ಅರವತ್ತಾರು ಸಾವಿರಕ್ಕೆ ಏರಿದೆ.
ಈ ನಡುವೆ ಗೃಹ ಸಚಿವ ಅಮಿತ್ ಶಾ ರಾಜ್ಯದ ಸಿಎಂಗಳ ಜತೆ ಮೀಟಿಂಗ್ ನಡೆಸಿದ್ದಾರೆ. ಆರ್ಥಿಕ ವ್ಯವಸ್ಥೆ ಪುನಶ್ಚೇತನಗೊಳಿಸುವ ಚಟುವಟಿಕೆಗೆ ರಿಯಾಯಿತಿ ನೀಡಿ ಇನ್ನು ಒಂದು ಹಂತದ ಲಾಕ್ ಡೌನ್ ಮುಂದುವರಿಸಬೇಕು ಎಂವ ಮಾತು ಕೇಳಿಬಂದಿದೆ.
ದೇವಾಲಯಗಳ ಬಾಗಿಲು ತೆರೆಯಲು ದಿನಾಂಕ ಫಿಕ್ಸ್
ನನ್ನ ಪ್ರಕಾರ ಇನ್ನು ಹದಿನೈದು ದಿನ ಲಾಕ್ ಡೌನ್ ಮುಂದುವರಿಕೆ ಮಾಡಬಹುದು. ಸಾಮಾಜಿಕ ಅಂತರ ಕಾಯ್ದುಕೊಂಡು ರೆಸ್ಟೋರೆಂಟ್ ಗಳನ್ನು ಓಪನ್ ಮಾಡಲು ಅವಕಾಶ ಬೇಕು. ಹಲವಾರು ಜನ ಜಿಮ್ ತೆರೆಯಲು ಕೇಳಿಕೊಳ್ಳುತ್ತಿದ್ದಾರೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಅಮಿತ್ ಶಾ ಅವರಲ್ಲಿ ಕೇಳಿಕೊಂಡಿದ್ದಾರೆ.
ಕೊರೋನಾ ಹಾವಳಿ ಆರಂಭವಾದಾಗಿನಿಂದ ಪ್ರಧಾನಿ ನರೇಂದ್ರ ಮೋದಿ ಸಿಎಂಗಳ ಮೀಟಿಂಗ್ ಮಾಡುತ್ತಿದ್ದರು. ಇದೇ ಮೊದಲ ಸಾರಿ ಗೃಹ ಸಚಿವ ಅಮಿತ್ ಶಾ ಸಭೆ ನಡೆಸಿ ಅಭಿಪ್ರಾಯ ಕಲೆ ಹಾಕಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ