ಪ್ರಧಾನಿ ಮೋದಿ ಮತ್ತೆ ಜಗತ್ತಿನಲ್ಲೇ ನಂ. 1 ಜನಪ್ರಿಯ ನಾಯಕ

By Kannadaprabha News  |  First Published Apr 3, 2023, 7:48 AM IST

ಮಾರ್ನಿಂಗ್‌ ಕನ್ಸಲ್ಟ್‌ ಬಿಡುಗಡೆ ಮಾಡಿರುವ ವರದಿ ಅನ್ವಯ ಮೋದಿ ಭರ್ಜರಿ ಶೇ. 76ರಷ್ಟು ರೇಟಿಂಗ್‌ನೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಉಳಿದಂತೆ ಮೆಕ್ಸಿಕೋ ಅಧ್ಯಕ್ಷ ಆ್ಯಂಡ್ರೇಸ್‌ ಮ್ಯಾನ್ಯುಯಲ್‌ ಶೇ. 61ರಷ್ಟು ರೇಟಿಂಗ್‌ನೊಂದಿಗೆ 2ನೇ ಸ್ಥಾನ, ಆಸ್ಪ್ರೇಲಿಯಾದ ಪ್ರಧಾನಿ ಆ್ಯಂಟನಿ ಆಲ್ಬನೀಸ್‌ ಶೇ. 55ರಷ್ಟು ರೇಟಿಂಗ್‌ನೊಂದಿಗೆ 3ನೇ ಸ್ಥಾನ ಪಡೆದಿದ್ದಾರೆ.


ನವದೆಹಲಿ (ಏಪ್ರಿಲ್ 3, 2023): ಜಾಗತಿಕವಾಗಿ ಅತ್ಯಂತ ಜನಪ್ರಿಯ ನಾಯಕ ಎಂಬ ಹಿರಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮಲ್ಲೇ ಉಳಿಸಿಕೊಂಡಿದ್ದು, ಶೇ.76ರಷ್ಟು ರೇಟಿಂಗ್‌ನೊಂದಿಗೆ ವಿಶ್ವದಲ್ಲೇ ನಂ.1 ಅತ್ಯಂತ ಜನಪ್ರಿಯ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ವಿಶೇಷವೆಂದರೆ ವಿಶ್ವದ ಇತರೆ ಯಾವುದೇ ನಾಯಕರು ಕೂಡಾ ಜನಪ್ರಿಯತೆಯಲ್ಲಿ ಮೋದಿ ಸಮೀಪಕ್ಕೂ ಬಂದಿಲ್ಲ.

ಮಾರ್ನಿಂಗ್‌ ಕನ್ಸಲ್ಟ್‌ (Morning Consult) ಬಿಡುಗಡೆ ಮಾಡಿರುವ ವರದಿ ಅನ್ವಯ ಮೋದಿ ಭರ್ಜರಿ ಶೇ. 76ರಷ್ಟು ರೇಟಿಂಗ್‌ನೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಉಳಿದಂತೆ ಮೆಕ್ಸಿಕೋ (Mexico) ಅಧ್ಯಕ್ಷ ಆ್ಯಂಡ್ರೇಸ್‌ ಮ್ಯಾನ್ಯುಯಲ್‌ (Andrés Manuel López Obrador) ಶೇ. 61ರಷ್ಟು ರೇಟಿಂಗ್‌ನೊಂದಿಗೆ 2ನೇ ಸ್ಥಾನ, ಆಸ್ಪ್ರೇಲಿಯಾದ (Australia) ಪ್ರಧಾನಿ ಆ್ಯಂಟನಿ ಆಲ್ಬನೀಸ್‌ (Anthony Albanese) ಶೇ. 55ರಷ್ಟು ರೇಟಿಂಗ್‌ನೊಂದಿಗೆ 3ನೇ ಸ್ಥಾನ ಪಡೆದಿದ್ದಾರೆ.

Tap to resize

Latest Videos

ಇದನ್ನು ಓದಿ: ಭ್ರಷ್ಟರೆಲ್ಲ ಇಂದು ಒಂದೇ ವೇದಿಕೆಗೆ: ವಿಪಕ್ಷಗಳ ವಿರುದ್ಧ ಪ್ರಧಾನಿ ಪ್ರಹಾರ; ಕರ್ನಾಟಕದಲ್ಲಿ ಬಿಜೆಪಿ ನಂ. 1 ಎಂದ ಮೋದಿ

ಇನ್ನು ಇಟಲಿ (Italy) ಪ್ರಧಾನಿ ಜಾರ್ಜಿಯಾ ಮೆಲೋನಿ (Georgia Meloni) ಶೇ. 49ರಷ್ಟು ರೇಟಿಂಗ್‌ನೊಂದಿಗೆ 4ನೇ ಸ್ಥಾನ, ಬ್ರೆಜಿಲ್‌ (Brazil) ಅಧ್ಯಕ್ಷ ಲುಲಾ ಡಿ ಸಿಲ್ವಾ (Lula de Silva) ಶೇ. 49ರಷ್ಟು ರೇಟಿಂಗ್‌ನೊಂದಿಗೆ 5ನೇ ಸ್ಥಾನದಲ್ಲಿದ್ದಾರೆ. ಅಮೆರಿಕ (United States) ಅಧ್ಯಕ್ಷ ಜೋ ಬೈಡೆನ್‌ (Joe Biden) ಶೇ.41ರಷ್ಟು ರೇಟಿಂಗ್‌ನೊಂದಿಗೆ 6ನೇ ಸ್ಥಾನ, ಕೆನಡಾ (Canada) ಪ್ರಧಾನಿ ಜಸ್ಟಿನ್‌ ಟ್ರುಡೋ (Justin Trudeau) ಶೇ.39ರಷ್ಟು ರೇಟಿಂಗ್‌ನೊಂದಿಗೆ 7ನೇ ಸ್ಥಾನ, ಸ್ಪೇನ್‌ (Spain) ಪ್ರಧಾನಿ ಪೆಡ್ರೋ ಸ್ಯಾಂಜೆಜ್‌ (Pedro Sánchez) ಶೇ.38ರಷ್ಟು ರೇಟಿಂಗ್‌ನೊಂದಿಗೆ 8ನೇ ಸ್ಥಾನ, ಜರ್ಮನಿ (Germany) ಚಾನ್ಸಲರ್‌ ಒಲಾಫ್‌ ಸ್ಕೋಲ್ಜ್‌ (Olaf Scholz) ಶೇ.35ರಷ್ಟು ಮತದೊಂದಿಗೆ 9ನೇ ಸ್ಥಾನ ಮತ್ತು ಬ್ರಿಟನ್‌ (Britain) ಪ್ರಧಾನಿ ರಿಷಿ ಸುನಕ್‌ (Rishi Sunak) ಶೇ.34ರಷ್ಟು ರೇಟಿಂಗ್‌ನೊಂದಿಗೆ 10ನೇ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: ಕುದುರೆ ರೇಸ್‌ ಓಡಲು ಕತ್ತೆ ತಂದಿದ್ದೀರಿ: ರಾಹುಲ್‌ ಬಗ್ಗೆ ಸಚಿವ ಪುರಿ ಟೀಕೆ

click me!