ಭಾರತದಲ್ಲಿ ಒಂದೇ ದಿನ 3,824 ಕೋವಿಡ್ ಪ್ರಕರಣ ದಾಖಲು, ಕಳೆದ 6 ತಿಂಗಳಲ್ಲಿ ಇದೇ ಗರಿಷ್ಠ!

Published : Apr 02, 2023, 04:55 PM IST
ಭಾರತದಲ್ಲಿ ಒಂದೇ ದಿನ 3,824 ಕೋವಿಡ್ ಪ್ರಕರಣ ದಾಖಲು, ಕಳೆದ 6 ತಿಂಗಳಲ್ಲಿ ಇದೇ ಗರಿಷ್ಠ!

ಸಾರಾಂಶ

ಭಾರತದಲ್ಲಿ ಕೋವಿಡ್ ಆತಂಕ ಹೆಚ್ಚಾಗುತ್ತಿದೆ. ಪ್ರತಿ ದಿನ ಪ್ರಕರಣ ಸಂಖ್ಯೆ ಏರಿಕೆಯಾಗುತ್ತಿದೆ. ಇದೀಗ ಕಳೆದ 6 ತಿಂಗಳಲ್ಲೇ ಅತ್ಯಂತ ಗರಿಷ್ಠ ಪ್ರಕರಣ ದಾಖಲಾಗಿದೆ. 

ನವದೆಹಲಿ(ಏ.02); ಭಾರತದಲ್ಲಿ ಕೋವಿಡ್ ಪ್ರಕರಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಪ್ರತಿ ದಿನ ಗರಿಷ್ಟ ಪ್ರಕರಣಗಳು ದಾಖಲಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 3,824 ಕೋವಿಡ್ ಪ್ರಕರಣ ದಾಖಲಾಗಿದೆ.ಇದು ಕಳೆದ 6 ತಿಂಗಳಲ್ಲಿ ದಾಖಲಾದ ಗರಿಷ್ಠ ಕೋವಿಡ್ ಪ್ರಕರಣ ಇದಾಗಿದೆ. ಗಣನೀಯ ಏರಿಕೆಯಿಂದ ಭಾರತದಲ್ಲಿ ಸದ್ಯ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 18,389ಕ್ಕೆ ಏರಿಕೆಯಾಗಿದೆ. ಸದ್ಯ ಭಾರತದಲ್ಲಿ ಕೋವಿಡ್ ಪ್ರಕರಣಗಳು ಸಂಪೂರ್ಣ ನಿಯಂತ್ರಣದಲ್ಲಿದೆ. ಇಷ್ಟೇ ಅಲ್ಲ ಕೋವಿಡ್ ಕುರಿತು ಮುನ್ನಚ್ಚೆರಿಕೆ ವಹಿಸಲು ತಜ್ಞ ವೈದ್ಯರು ಸೂಚಿಸಿದ್ದಾರೆ.ಆದರೆ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.

ಸದ್ಯ ಭಾರತದಲ್ಲಿ ಪ್ರತಿದಿನದ ಕೋವಿಡ್ ಪಾಸಿಟಿವಿಟಿ ರೇಟ್ ಶೇಕಡಾ   2.87. ಇನ್ನೂ ವಾರದ ಪಾಸಿಟಿವಿಟಿ ರೇಟ್ ಶೇಕಡಾ 2.24. ಕಳೆದೆರಡು ತಿಂಗಳಿನಿಂದ ಭಾರತದಲ್ಲಿ ಕೋವಿಡ್ ಪ್ರಕರಣ ಏರಿಕೆಯಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಇದರ ಪರಿಣಾಮ ಸದ್ಯ ಭಾರತದ ಒಟ್ಟು ಕೋವಿಡ್ ಪ್ರಕರಣ ಸಂಖ್ಯೆ 4,47,22,605. ಇನ್ನು ಕೋವಿಡ್‌ಗೆ ಬಲಿಯಾದವರ ಸಂಖ್ಯೆ 5,30,881.

Covid Case ಹೆಚ್ಚಳ, ಮತ್ತೊಮ್ಮೆ ಬೂಸ್ಟರ್‌ ಡೋಸ್‌ ನೀಡಲು ಡಬ್ಲ್ಯುಎಚ್‌ಒ ಸಲಹೆ

ಕಳೆದ 24 ಗಂಟೆಯಲ್ಲಿ ದೆಹಲಿ, ಹರ್ಯಾಣ, ಕೇರಳ ಹಾಗೂ ರಾಜಸ್ಥಾನದಲ್ಲಿ ಕೋವಿಡ್‌ಗೆ ತಲಾ ಒಂದೊಂದು ಬಲಿಯಾಗಿದೆ. ಭಾರತದ ರಾಜ್ಯಗಳ ಪೈಕಿ ಕೇರಳ ಹಾಗೂ ಮಹಾರಾಷ್ಟ್ರ ಗರಿಷ್ಟ ಕೋವಿಡ್ ಕೇಸ್ ದಾಖಲಾಗಿದೆ. ಕೇರಳ ಸಕ್ರಿಯ ಪ್ರಕರಣ ಸಂಖ್ಯೆ 4,953, ಇನ್ನು ಮಹಾರಾಷ್ಟ್ರದ ಸಕ್ರಿಯ ಕೋವಿಡ್ ಪ್ರಕರಣ ಸಂಖ್ಯೆ 3,324 . ದೆಹಲಿ ನಗರದಲ್ಲೂ ಕೋವಿಡ್ ಪ್ರಕರಣ ಏರಿಕೆಯಾಗಿದೆ. ಹೀಗಾಗಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಹಲವು ನಗರಗಳಲ್ಲಿ ಕೋವಿಡ್ ಏರಿಕೆಯಾಗುತ್ತಿದೆ.

2ನೇ ದಿನವೂ 100+ಕೊರೋನಾ ಪ್ರಕರಣ
ಬೆಂಗಳೂರಿನಲ್ಲಿ ಶನಿವಾರ ನೂರಕ್ಕೂ ಹೆಚ್ಚು ಕೊರೋನಾ ಸೋಂಕಿತ ಪ್ರಕರಣಗಳು ದಾಖಲಾಗಿದ್ದು, ಕಳೆದ 24 ಗಂಟೆಗಳಲ್ಲಿ 146 ಜನರಲ್ಲಿ ಸೋಂಕು ದೃಢಪಟ್ಟಿದೆ. ಪಾಸಿಟಿವಿಟಿ ದರ ಶೇ.3.54 ದಾಖಲಾಗಿದೆ. ಸೋಂಕಿನಿಂದ 60 ಮಂದಿ ಗುಣಮುಖರಾಗಿದ್ದು, ಮೃತಪಟ್ಟವರದಿಯಾಗಿಲ್ಲ. ಸದ್ಯ ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 637ಕ್ಕೆ ಏರಿಕೆಯಾಗಿದೆ. ಈ ಪೈಕಿ 41 ಮಂದಿ ಆಸ್ಪತ್ರೆಯಲ್ಲಿದ್ದು, 2 ಐಸಿಯು ವೆಂಟಿಲೇಟರ್‌, 6 ಮಂದಿ ಐಸಿಯು ಮತ್ತು ಓರ್ವ ಎಚ್‌ಡಿಯು ಮತ್ತು 32 ಮಂದಿ ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 3456 ಮಂದಿ ಕೊರೋನಾ ಪರೀಕ್ಷೆಗೆ ಒಳಗಾಗಿದ್ದು 1,472 ರಾರ‍ಯಂಟಿಜನ್‌ ಮತ್ತು 1,984 ಆರ್‌ಟಿಪಿಸಿಆರ್‌ ಪರೀಕ್ಷೆಗಳು ನಡೆದಿವೆ.

COVID-19 : ಆಪ್ತರನ್ನು ಗುರುತಿಸೋದೂ ಕಷ್ಟ! ಕೊರೊನಾದಿಂದ ಕಾಡ್ತಿದೆ ಮತ್ತೊಂದು ಸಮಸ್ಯೆ

ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡ 68 ಮಂದಿಯ ಪೈಕಿ 15 ಮಂದಿ ಮೊದಲ ಡೋಸ್‌, 11 ಮಂದಿ ಎರಡನೇ ಡೋಸ್‌ ಮತ್ತು 42 ಮಂದಿ ಬೂಸ್ಟರ್‌ ಡೋಸ್‌ ಲಸಿಕೆ ಪಡೆದಿದ್ದಾರೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ. ಶುಕ್ರವಾರ ದಾಖಲಾಗಿದ್ದ 170 ಸೋಂಕಿತ ಪ್ರಕರಣ ಪ್ರಸಕ್ತ ವರ್ಷದಲ್ಲೇ ಅತಿ ಹೆಚ್ಚಿನ ಸಂಖ್ಯೆಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ