ಐಐಟಿ ಖರಗ್ಪುರ್‌ನ 66ನೇ ಘಟಿಕೋತ್ಸವ ಸಮಾರಂಭವನ್ನುದ್ದೇಶಿಸಿ ಮೋದಿ ಮಾತು| IIT ವಿದ್ಯಾರ್ಥಿಗಳಿಗೆ 'ಸೆಲ್ಫ್ ತ್ರೀ' ಫಾರ್ಮುಲಾ ಕೊಟ್ಟ ಪಿಎಂ ಮೋದಿ| ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ನೀಡುವಂತೆ ಮೋದಿ ಮನವಿ
ನವದೆಹಲಿ(ಫೆ.23): ಪಿಎಂ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಐಐಟಿ ಖರಗ್ಪುರ್‌ನ 66ನೇ ಘಟಿಕೋತ್ಸವ ಸಮಾರಂಭವನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಇಂದು ಪದವಿ ಸ್ವೀಕರಿಸುತ್ತಿರುವವರಿಗಷ್ಟೇ ಮಹತ್ವದ ದಿನವಲ್ಲ, ಬದಲಾಗಿ ನವ ಭಾರತ ನಿರ್ಮಾಣ ನಿಟ್ಟಿನಲ್ಲೂ ಬಹಳ ಪ್ರಮುಖ ದಿನ' ಎಂದಿದ್ದಾರೆ.
'ಸೆಲ್ಫ್ ತ್ರೀ' ಫಾರ್ಮುಲಾ ಮೂಲಕ ಮುನ್ನಡೆಯಿರಿ
ನೀವು ಸಾಗಲಿರುವ ಜೀವನದ ಹಾದಿಯಲ್ಲಿ ಅನೇಕ ಸವಾಲುಗಳೆದುರಾಗುತ್ತವೆ ಎಂಬುವುದರಲ್ಲಿ ಅಅನುಮಾನವಿಲ್ಲ. ಹೀಗಿರುವಾಗ ನಾವು ಆರಿಸುವ ಹಾದಿ ಸರಿಯಾ? ತಪ್ಪಾ ಅಥವಾ ಈ ಹಾದಿಯಲ್ಲಿ ಮುನ್ನಡೆದರೆ ಸಮಯ ವ್ಯರ್ಥವಾಗಬಹುದಾ? ಇಂತಹ ಅನೇಕ ಸವಾಲುಗಳೆದುರಾಗಬಹುದು. ಹೀಗಿರುವಾಗ 'ಸೆಲ್ಫ್ ತ್ರೀ' ಫಾರ್ಮುಲಾ ನಿಮ್ಮ ಈ ಗೊಂದಲ ದೂರ ಮಾಡಬಹುದು. 'ಸೆಲ್ಫ್ ತ್ರೀ' ಅಂದರೆ, ಸ್ವಯಂ ಅರಿವು, ಆತ್ಮವಿಶ್ವಾಸ ಮತ್ತು ನಿಸ್ವಾರ್ಥತೆಯಿಂದ ಮುಂದೆ ಸಾಗಿ ಎಂದು ಮೋದಿ ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ.
Speaking at the Convocation of . Watch. https://t.co/4Uth49qcLw
— Narendra Modi (@narendramodi)ಜಗತ್ತು ಹವಾಮಾನ ಬದಲಾವಣೆ ಸವಾಲುಗಳನ್ನು ಎದುರಿಸುತ್ತಿರುವ ಸಮಯದಲ್ಲಿ, ಭಾರತ ಅಂತಾರಾಷ್ಟ್ರೀಯ ಸೌರ ಒಕ್ಕೂಟದ (ಐಎಸ್ಎ) ಕಲ್ಪನೆಯನ್ನು ಜಗತ್ತಿನೆದುರಿಟ್ಟು, ಅದನ್ನು ಸಾಕಾರಗೊಳಿಸಿತು. ಇಂದು ಭಾರತ ಪ್ರಾರಂಭಿಸಿದ ಈ ಅಭಿಯಾನಕ್ಕೆ ವಿಶ್ವದ ಹಲವು ದೇಶಗಳು ಸೇರ್ಪಡೆಗೊಂಡಿವೆ ಎಂದೂ ಮೋದಿ ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.
ಐಐಟಿ ಆರೋಗ್ಯದ ಬಗ್ಗೆ ಕೆಲಸ ಆರಂಭಿಸಬೇಕು
ವಸ್ತುಗಳ ಇಂಟರ್ನೆಟ್ ಅಥವಾ ಆಧುನಿಕ ನಿರ್ಮಾಣ ತಂತ್ರಜ್ಞಾನವಾಗಿರಲಿ ಐಐಟಿ ಖರಗ್ಪುರ್ ಕಾರ್ಯ ವೈಖರಿ ಪ್ರಶಂಸನೀಯ. ಕೊರೋನಾ ವಿರುದ್ಧದ ಸಮರದಲ್ಲೂ ಇಲ್ಲಿನ ಸಾಫ್ಟ್‌ವೇರ್‌ಗಳು ಬಹಳ ಪ್ರಮುಖ ಪಾತ್ರ ವಹಿಸಿವೆ. ಇನ್ನು ನೀವು ಆರೋಗ್ಯ ಕ್ಷೇತ್ರ ಅಭಿವೃದ್ಧಿಗೊಳಿಸವ ನಿಟ್ಟಿನಲ್ಲಿ ಕಾರ್ಯ ವಹಿಸಬೇಕು ಎಂದೂ ಮನವಿ ಮಾಡಿದ್ದಾರೆ ಮೋದಿ.