
ನವದೆಹಲಿ(ಏ.26): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು ಮೇ 30ಕ್ಕೆ ಮೂರು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ, ದೊಡ್ಡ ಮಟ್ಟದಲ್ಲಿ ಜನರನ್ನು ತಲುಪುವ ಕಾರ್ಯಕ್ರಮ ರೂಪಿಸಲು ಬಿಜೆಪಿ ನಿರ್ಧರಿಸಿದೆ. ಈ ಕಾರ್ಯಕ್ರಮ ಆಯೋಜನೆಗೆ ರಚಿಸಲಾಗಿರುವ ಸಮಿತಿ ಸದಸ್ಯರು ಮಂಗಳವಾರ ಇಲ್ಲಿ ಸಭೆ ಸೇರಿ ಪ್ರಾಥಮಿಕ ಹಂತದ ಚರ್ಚೆ ನಡೆಸಿದ್ದಾರೆ.
2019ರಲ್ಲಿ ಭರ್ಜರಿ ಬಹುಮತದೊಂದಿಗೆ ಗೆದ್ದು 2ನೇ ಬಾರಿಗೆ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಸರ್ಕಾರ, ಸಂವಿಧಾನದ 370ನೇ ವಿಧಿ ರದ್ದು, ರಾಮಮಂದಿರ ನಿರ್ಮಾಣ ಮೊದಲಾದ ತನ್ನ ಸೈದ್ಧಾಂತಿಕ ಭರವಸೆಗಳನ್ನು ಈ ಅವಧಿಯಲ್ಲಿ ಈಗಾಗಲೇ ಈಡೇರಿಸಿದೆ. ಆದರೆ 2020ರಲ್ಲಿ ಕಾಣಿಸಿಕೊಂಡ ಕೋವಿಡ್ ಸಾಂಕ್ರಾಮಿಕವು, ಸರ್ಕಾರ ಮೊದಲ ಮತ್ತು 2ನೇ ವರ್ಷದ ಆಚರಣೆಗೆ ಅಡ್ಡಿ ಮಾಡಿತ್ತು.
ಜಮ್ಮು ಕಾಶ್ಮೀರಕ್ಕೆ ಪ್ರಧಾನಿ ಮೋದಿ ಭೇಟಿ, ಪಾಕಿಸ್ತಾನ ತಗಾದೆ!
ಆದರೆ ಇದೀಗ ಕೋವಿಡ್ ಹಾವಳಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ, ಕಳೆದ 3 ವರ್ಷಗಳಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಯೋಜನೆಗಳು, ಈಡೇರಿಸಿದ ಭರವಸೆಗಳ ಕುರಿತು ಜನರಿಗೆ ಮಾಹಿತಿ ನೀಡಲು ಬೃಹತ್ ಕಾರ್ಯಕ್ರಮ ಆಯೋಜನೆಗೆ ಪಕ್ಷ ನಿರ್ಧರಿಸಿದೆ. ಈ ಕುರಿತು ಕರಡು ವರದಿ ಕೂಡಾ ಸಿದ್ಧವಾಗಿದೆ ಎನ್ನಲಾಗಿದೆ.
ಈ ವರದಿಯ ಬಗ್ಗೆ ಮಂಗಳವಾರ ನಡೆದ ಸಭೆಯಲ್ಲಿ ಚರ್ಚಿಸಲಾಗಿದ್ದು, ಮುಂದಿನ ಹಂತದ ಸಭೆಗಳಲ್ಲಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ಮಂಗಳವಾರದ ಸಭೆಯಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್, ರಾಜೀವ್ ಚಂದ್ರಶೇಖರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ವಿನಯ್ ಸಹಸ್ರಬುದ್ಧೆ, ಅಪರಾಜಿತಾ ಸಾರಂಗಿ ಮೊದಲಾದವರು ಭಾಗಿಯಾಗಿದ್ದರು ಎನ್ನಲಾಗಿದೆ.
ಬಡವರಿಗೆ ಉಚಿತ ಪಡಿತರ
ದೇಶದಲ್ಲಿ ಕೋವಿಡ್ ಅಬ್ಬರ ಬಹುತೇಕ ಕಡಿಮೆಯಾಗಿದ್ದರೂ, ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ)’ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿನ ವರ್ಗ(ಬಿಪಿಎಲ್)ದ ದೇಶದ 80 ಕೋಟಿ ಜನರಿಗೆ ಇನ್ನೂ 6 ತಿಂಗಳ ಕಾಲ ಉಚಿತ ಆಹಾರ ಧಾನ್ಯ ವಿತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಶನಿವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.020ರ ಮಾಚ್‌ರ್‍ನಲ್ಲಿ ಈ ಯೋಜನೆಯನ್ನು 3 ತಿಂಗಳಿಗೆಂದು ಘೋಷಿಸಲಾಗಿತ್ತು. ಎರಡನೇ ಹಂತದಲ್ಲಿ 2020ರ ಜುಲೈ-ನವೆಂಬರ್‌ಗೆ, 3ನೇ ಹಂತದಲ್ಲಿ 2021-ರ ಮೇ- ಜೂನ್‌ಗೆ, 4ನೇ ಹಂತದಲ್ಲಿ 2021ರ ಜುಲೈ-ನವೆಂಬರ್, 5ನೇ ಹಂತದಲ್ಲಿ 2021ರ ಡಿಸೆಂಬರ್‌ನಿಂದ 2022ರ ಮಾಚ್‌ರ್‍ಗೆ ವಿಸ್ತರಣೆ ಮಾಡಲಾಗಿತ್ತು. ಇದೀಗ 6ನೇ ಹಂತದಲ್ಲಿ 2022ರ ಮಾಚ್‌ರ್‍ನಿಂದ -ಸೆಪ್ಟೆಂಬರ್‌ಗೆ ಯೋಜನೆ ವಿಸ್ತರಣೆ ಮಾಡಲಾಗಿದೆ.
ಲತಾ ದೀನಾನಾಥ್ ಮಂಗೇಶ್ಕರ್ ಪ್ರಶಸ್ತಿ' ಸ್ವೀಕರಿಸಿ ದೇಶವಾಸಿಗಳಿಗೆ ಅರ್ಪಿಸಿದ ಪ್ರಧಾನಿ ಮೋದಿ
ಪಾಕ್‌ಗೆ ತಿರುಗೇಟು; ಹಿಂದಿನ ಸರ್ಕಾರಕ್ಕಿಂತ ಮೋದಿ ಸ್ಟ್ರಾಂಗ್
ಒಂದು ವೇಳೆ ಪಾಕಿಸ್ತಾನ ಯಾವುದೇ ಪ್ರಚೋದನೆ ಮಾಡಿದರೆ, ಅದಕ್ಕೆ ಈಗಿನ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಭಾರೀ ತಿರುಗೇಟು ನೀಡುವ ಸಾಧ್ಯತೆ ಅತ್ಯಧಿಕವಾಗಿದೆ. ಜೊತೆಗೆ ಇಂಥ ಸಾಧ್ಯತೆ ಈ ಹಿಂದಿನ ಯಾವುದೇ ಸರ್ಕಾರಗಳಿಗಿಂತ ಹೆಚ್ಚು ಎಂದು ಅಮೆರಿಕದ ಗುಪ್ತಚರ ವರದಿಯೊಂದು ಹೇಳಿದೆ.ರಾಷ್ಟ್ರೀಯ ಗುಪ್ತಚರ ನಿರ್ದೇಶಕರ ಕಚೇರಿಯು ಅಮೆರಿಕ ಕಾಂಗ್ರೆಸ್‌ನಲ್ಲಿ ಮೌಲ್ಯಮಾಪನದ ವರದಿಯನ್ನು ಬಿಡುಗಡೆ ಮಾಡಿದ್ದು, ಭಾರತ ವಿರೋಧಿ ಉಗ್ರರನ್ನು ಪಾಕಿಸ್ತಾನ ಮೊದಲಿನಿಂದಲೂ ಆಶ್ರಯ ನೀಡುತ್ತಿದೆ. ಮೊದಲಿನ ಸರ್ಕಾರಗಳಿಗಿಂತ ಪ್ರಸ್ತುತ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಪಾಕಿಸ್ತಾನಕ್ಕೆ ಸೇನಾಬಲ ಬಳಸಿ ತಿರುಗೇಟು ನೀಡುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಸೇನಾ ಜಟಾಪಟಿಯಲ್ಲಿ ಕಾಶ್ಮೀರದಲ್ಲಿ ಹಿಂಸಾತ್ಮಕ ಅಶಾಂತಿ ಉಂಟಾಗುವ ಸಾಧ್ಯತೆಯಿದೆ ಎಂದು ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ