ಪವನ್ ಕಲ್ಯಾಣ ಭಾಷಣದ ನಡುವೆ ಟವರ್ ಏರಿದವರನ್ನು ಕೆಳಕ್ಕಿಳಿಯಲು ಸೂಚಿಸಿದ ಮೋದಿ!

By Suvarna NewsFirst Published Mar 17, 2024, 7:06 PM IST
Highlights

ಪ್ರಧಾನಿ ನರೇಂದ್ರ ಮೋದಿ ಆಂಧ್ರ ಪ್ರದೇಶದಲ್ಲಿ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ಮೋದಿ ಭಾಷಣಕ್ಕೆ ಕಿಕ್ಕಿರಿದ ಜನ ಸೇರಿದ್ದರು.  ಈ ವೇಳೆ ಜನರು ಭಾಷಣ ಕೇಳಲು ಟವರ್ ಏರಿದ್ದಾರೆ.ಈ ವೇಳೆ ಮೋದಿ, ಟವರ್ ಹತ್ತಿದವರು ಕೆಳಕ್ಕೆ ಇಳಿಯಲು ಮನವಿ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
 

ಆಂಧ್ರ ಪ್ರದೇಶ(ಮಾ.17) ಲೋಕಸಭಾ ಚುನಾವಣೆ ಘೋಷಣೆಯಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಆಂಧ್ರ ಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ಬೃಹತ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಎನ್‌ಡಿಗೆ ಮೈತ್ರಿಗೆ ಆಗಮಿಸಿದ ಚಂದ್ರಬಾಬು ನಾಯ್ಡು, ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಸೇರಿದಂತೆ ಪ್ರಮುಖರು ಮೋದಿ ಜೊತೆ ವೇದಿಕೆ ಹಂಚಿಕೊಂಡಿದ್ದರು. ಪವನ್ ಕಲ್ಯಾಣ್ ಚುನಾವಣಾ ಪ್ರಚಾರ ಭಾಷಣ ಆರಂಭಿಸಿದ ಕೆಲ ಹೊತ್ತಲ್ಲೇ ಮೋದಿ ಮಧ್ಯಪ್ರವೇಶಿಸಿದ್ದಾರೆ. ಪವನ್ ಕಲ್ಯಾಣ್ ಭಾಷಣ ನಿಲ್ಲಿಸಿ, ಮೈಕ್ ಮೂಲಕ, ಟವರ್ ಹತ್ತಿದ ಎಲ್ಲರೂ ಕೆಳಕ್ಕೆ ಇಳಿಯುವಂತೆ ಸೂಚಿಸಿದ್ದಾರೆ.  ವಿದ್ಯುತ್ ತಂತಿಗಳು ಹಾದು ಹೋಗುತ್ತಿದೆ. ಹೀಗಾಗಿ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಪೊಲೀಸರು ಈ ರೀತಿ ಟವರ್ ಏರಲು ಅವಕಾಶ ನೀಡಬಾರದು ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಮೈದಾನ ಕಾರ್ಯಕರ್ತರು, ಬೆಂಬಲಿಗರಿಂದ ತುಂಬಿ ತುಳುಕುತ್ತಿತ್ತು. ಪ್ರಧಾನಿ ನರೇಂದ್ರ ಮೋದಿ, ನಾಯಕ ಪವನ್ ಕಲ್ಯಾಣ್ ಭಾಷಣ ಕೇಳಲು ಜನರು ಮೈದಾನದಲ್ಲಿನ ಟವರ್ ಏರಿದ್ದಾರೆ. ಮೈದಾನದಲ್ಲಿ ಬೆಳಕಿನ ವ್ಯವಸ್ಥೆಗಾಗಿ ಟವರ್ ಹಾಕಲಾಗಿತ್ತು. ಈ ಟವರ್ ಹತ್ತಿದ್ದಾರೆ. ವಿದ್ಯುತ್ ವೈಯರ್‌ಗಳಿರುವ ಈ ಟವರ್ ಹತ್ತಿ ಮೋದಿ, ಪವನ್ ಕಲ್ಯಾಣ್, ಬಿಜೆಪಿಗೆ ಜೈಕಾರ ಹಾಕಿದ್ದಾರೆ. 

Lok sabha election 2024: ಬಿಸಲುನಾಡು ಕಲಬುರಗಿ ಆಯ್ತು, ನಾಳೆ ಮಲೆನಾಡಿಗೆ ಪ್ರಧಾನಿ ಮೋದಿ!

ಪವನ್ ಕಲ್ಯಾಣ್ ಭಾಷಣ ಆರಂಭಿಸಿದ ಬೆನ್ನಲ್ಲೇ ಟವರ್ ಹತ್ತಿರುವುದನ್ನು ಗಮನಿಸಿದ ಮೋದಿ, ನೇರವಾಗಿ ಪವನ್ ಬಳಿ ಭಾಷಣ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಬಳಿಕ ಮೈಕ್ ಪಡೆದುಕೊಂಡು, ಟವರ್ ಹತ್ತಿದ ಎಲ್ಲರೂ ಕೆಳಕ್ಕಿಳಿಯಲು ಸೂಚಿಸಿದ್ದಾರೆ. ತಕ್ಷಣವೆ ಪೊಲೀಸರು ಟವರ್ ಹತ್ತಿದ ಎಲ್ಲರನ್ನೂ ಕೆಳಕ್ಕಳಿಸಲು ಸೂಚಿಸಿದ್ದಾರೆ.

 

| Andhra Pradesh: In between the speech of Jana Sena Party president Pawan Kalyan, Prime Minister Narendra Modi urges people to get down from the light tower, in Palnadu. pic.twitter.com/yvJJKgvh1A

— ANI (@ANI)

 

ಇತ್ತ ಚಂದ್ರಬಾಬು ನಾಯ್ಡು ಕೈಮುಗಿದ ಟವರ್ ಇಳಿಯುವಂತೆ ಸನ್ನೆ ಮಾಡಿದ್ದಾರೆ. ಟವರ್ ಮೇಲೆ ವಿದ್ಯುತ್ ವಯರ್‌ಗಳಿವೆ.ನೀವು ಟವರ್ ಹತ್ತಿದರೆ ಹೇಗೆ? ನಿಮ್ಮ ಪ್ರತಿಯೊಂದು ಜೀವ ನಮಗೆ ಮುಖ್ಯ ಎಂದು ಮೋದಿ ಹೇಳಿದ್ದಾರೆ. ಬಹುತೇಕರು ಕೆಳಕ್ಕಿಳಿದರೆ, ಕೆಲವರು ಮಾತ್ರ ಜೈಕಾರ ಹಾಕುತ್ತಲೇ ಟವರ್ ಮೇಲಿದ್ದರು. ಮಾಧ್ಯಮಗಳು ನಿಮ್ಮ ಫೋಟೋ ತೆಗೆದಿದ್ದಾರೆ. ಇದೀಗ ನೀವು ಕೆಳಕ್ಕಿಳಿಯಿರಿ ಎಂದು ಮೋದಿ ಮನವಿ ಮಾಡಿದ್ದಾರೆ. ಪೊಲೀಸರೇ ಈ ಟವರ್ ಹತ್ತಲು ಬಿಡಬೇಡಿ. ಅನಾಹುತಗಳು ಸಂಭವಸಿದರೆ ಅದರ ನೋವು ತಡೆದುಕೊಳ್ಳಲು ಸಾಧ್ಯವಾಗಲ್ಲ ಎಂದು ಮೋದಿ ಮನವಿ ಮಾಡಿದ್ದಾರೆ.

Narendra Modi: ನಾಳೆ ಶಿವಮೊಗ್ಗಕ್ಕೆ ಪ್ರಧಾನಿ ಮೋದಿ ಭೇಟಿ: 2 ಲಕ್ಷಕ್ಕೂ ಹೆಚ್ಚು ಜನರು ಭಾಗಿಯಾಗುವ ನಿರೀಕ್ಷೆ !

ಟವರ್ ಮೇಲಿನಿಂದ ಕೆಳಗಿಳಿದ ಬಳಿಕ ಪವನ್ ಕಲ್ಯಾಣ್ ಭಾಷಣ ಮುಂದುವರಿಸಿದ್ದಾರೆ. ಆಂಧ್ರ ಪ್ರದೇಶದಲ್ಲಿ ಮೋದಿ ಅಬ್ಬರದ ಚುನಾವಣಾ ಪ್ರಚಾರ ನಡೆಸಿದ್ದಾರೆ. ಆಂಧ್ರ ಪ್ರದೇಶದಲ್ಲಿ ಬಿಜೆಪಿ 6 ಲೋಕಸಭಾ ಕ್ಷೇತ್ರ ಹಾಗೂ 10 ವಿಧಾನಸಬಾ ಸ್ಥಾನದಲ್ಲಿ ಸ್ಪರ್ಧಿಸುತ್ತಿದೆ. ಎನ್‌ಡಿಎ ಮೈತ್ರಿ ಪಕ್ಷ ಟಿಡಿಪಿ 17 ಲೋಕಸಭಾ ಕ್ಷೇತ್ರ ಹಾಗೂ 144 ವಿಧಾನಸಭಾ ಸ್ಥಾನದಲ್ಲಿ ಸ್ಪರ್ಧಿಸುತ್ತಿದೆ. ಇನ್ನು ಪವನ್ ಕಲ್ಯಾಣ ಜನಸೇನಾ ಪಕ್ಷ 2 ಲೋಕಸಭಾ ಸ್ಥಾನ ಹಾಗೂ 21 ವಿಧಾನಸಭಾ ಕ್ಷೇತ್ರಗಳಿಗೆ ಸ್ಪರ್ಧಿಸುತ್ತಿದೆ.

click me!