ಚುನಾವಣೆ ಸಮೀಪ ಕಾಂಗ್ರೆಸ್‌ಗೆ ಹಿನ್ನಡೆ, ಪಕ್ಷ ತೊರೆದ ಮಾಜಿ ಸಚಿವ ಹರಾಕ್ ಸಿಂಗ್ ರಾವತ್ ಸೊಸೆ!

By Suvarna NewsFirst Published Mar 17, 2024, 5:33 PM IST
Highlights

ಲೋಕಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕ, ಮಾಜಿ ಸಚಿವರ ಸೊಸೆ ಪಕ್ಷ ತೊರೆದಿದ್ದಾರೆ. ವೈಯುಕ್ತಿಕ ಕಾರಣ ನೀಡಿ ಪಕ್ಷ ತೊರೆದಿರುವ ಅನುಕೃತಿ ನಿರ್ಧಾರ ಇದೀಗ ರಾಜಕೀಯ ಕೆಸರೆರೆಟಾಟಕ್ಕೆ ಕಾರಣವಾಗಿದೆ.
 

ಉತ್ತರಖಂಡ(ಮಾ.17) ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಎಪ್ರಿಲ್ 19 ರಿಂದ ಮತದಾನ ಆರಂಭಗೊಳ್ಳುತ್ತಿದೆ. ಜೂನ್ 4 ರಂದು ಫಲಿತಾಂಶ ಹೊರಬೀಳಲಿದೆ. ಇದರ ನಡುವೆ ಟಿಕೆಟ್‌ಗಾಗಿ ಪಕ್ಷಾಂತರಗಳು ನಡೆಯುತ್ತಿದೆ. ಇದೀಗ ಉತ್ತರಖಂಡ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಹರಾಕ್ ಸಿಂಗ್ ರಾವತ್ ಸೊಸೆ ಅನುಕೃತಿ ಗುಸೈನ್ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಅನುಕೃತಿ, ವೈಯುಕ್ತಿಕ ಕಾರಣಗಳನ್ನು ನೀಡಿದ್ದಾರೆ. ಆದರೆ ಅನುಕೃತಿ ನಿರ್ಧಾರ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ತೊರೆದಿರುವ ಅನುಕೃತಿ ಯಾವ ಪಕ್ಷಕ್ಕೆ ಸೇರಿಕೊಳ್ಳುತ್ತಾರೆ ಅನ್ನೋ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ. ಆದರೆ ಬಿಜೆಪಿ ಸೇರಿಕೊಳ್ಳುವ ಸಾಧ್ಯತೆ ಇದೆ ಅನ್ನೋ ಮಾತುಗಳು ಕೇಳಿಬಂದಿದೆ. ಅನುಕೃತಿ ರಾಜೀನಾಮೆಯನ್ನು ಮಂದಿಟ್ಟುಕೊಂಡು ಕಾಂಗ್ರೆಸ್ ವಾಕ್ಸಮರ ಆರಂಭಿಸಿದೆ. ಬಿಜೆಪಿಯ ಬೆದರಿಕೆಗೆ ಅನುಕೃತಿ ರಾಜೀನಾಮೆ ನೀಡಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ರಾಷ್ಟ್ರ ರಾಜಕಾರಣಕ್ಕೆ ಹೋಗಲು ಯೋಗಿಶ್ವರ್‌ಗೆ ಧಮ್ ಬೇಕು: ಶಾಸಕ ಬಾಲಕೃಷ್ಣ 

ಫೆಬ್ರವರಿ ತಿಂಗಳಲ್ಲಿ ಹರಾಕ್ ಸಿಂಗ್ ರಾವತ್‌ಗೆ ಇಡಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದಾರೆ. ಇದರ ಬೆನ್ನಲ್ಲೇ ಅನುಕೃತಿಗೂ ವಿಚಾರಣೆ ಹಾಜರಾಗಲು ಸಮನ್ಸ್ ನೀಡಲಾಗಿತ್ತು. ಅರಣ್ಯ ಹಗರಣ ಸಂಬಂಧ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದರು. ಈ ನೋಟಿಸ್ ಪಡೆದ ಒಂದು ತಿಂಗಳಲ್ಲಿ ಸೊಸೆ ಅನುಕೃತಿ ರಾಜೀನಾಮೆ ನೀಡಿದ್ದಾರೆ. ಇದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

ಫೆಬ್ರವರಿ 7 ರಂದು ಇಡಿ ಅಧಿಕಾರಿಗಳು ದೇಶದ 17 ಕಡೆಗಳಲ್ಲಿ ದಾಳಿ ನಡೆಸಿದ್ದರು. ಈ ದಾಳಿ ಬಳಿಕ ಅರಣ್ಯ ಹಗರಣ ಸಂಬಂಧ ಹರಾಕ್ ಸಿಂಗ್ ರಾವತ್‌ಗೆ ನೋಟಿಸ್ ನೀಡಲಾಗಿತ್ತು. ಬಿಜಪಿ ಕೇಂದ್ರ ತನಿಖಾ ಸಂಸ್ಥೆಗಳನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಅನ್ನೋ ಆರೋಪ ಇದೀಗ ಜೋರಾಗಿದೆ. ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಹರಾಕ್ ಸಿಂಗ್ ರಾವತ್ ಬಳಿಕ ಕಾಂಗ್ರೆಸ್ ಸೇರಿಕೊಂಡಿದ್ದರು.

2019ರಲ್ಲಿ ಹುಲಿ ಸಂರಕ್ಷಿತ ಅರಣ್ಯ ವಲಯದಲ್ಲಿ ಕಟ್ಟಡ ನಿರ್ಮಾಣ, ಮರಗಳನ್ನು ಕತ್ತರಿಸಿ ರೆಸಾರ್ಟ್ ಸೇರಿದಂತೆ ಇತರ ಕಟ್ಟಡ ನಿರ್ಮಾಣ ಮಾಡಲಾಗಿದೆ. ಈ ಪ್ರಕರಣ ಸಂಬಂಧ ವಿಚಾರಣೆ ಎದುರಿಸುತ್ತಿದ್ದಾರೆ. 

ಕಲಬುರಗಿಗೆ ಮೋದಿ ಕೊಡುಗೆ ಏನಿದೆ? ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ

ಲೋಕಸಭಾ ಚುನಾವಣೆ ದಿನಾಂಕವ ಮಾರ್ಚ್ 16ರಂದು ಘೋಷಣೆಯಾಗಿದೆ. ಒಟ್ಟು 7 ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಎಪ್ರಿಲ್ 19 ರಿಂದ ಜೂನ್ 1ರ ವರೆಗೆ ಚುನಾವಣೆ ನಡೆಯಲಿದ್ದು, ಜೂನ್ 4 ರಂದು ಫಲಿತಾಂಶ ಹೊರಬೀಳಲಿದೆ. ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಎಪ್ರಿಲ್ 26 ಹಾಗೂ ಮೇ.7 ರಂದು ಕರ್ನಾಟಕದಲ್ಲಿ ಮತದಾನ ನಡೆಯಲಿದೆ.
 

click me!