ಕೋವಿಡ್‌ನಿಂದ ಗುಣಮುಖರಾದವರಿಗೆ ಲಸಿಕೆ ಯಾವಾಗ? NTAGI ಮಹತ್ವದ ಸೂಚನೆ!

By Suvarna News  |  First Published May 13, 2021, 3:34 PM IST
  • ಸೋಂಕಿನಿಂದ ಗುಣಮುಖರಾದವರು ಯಾವಾಗ ಲಸಿಕೆ ಪಡೆಯಬೇಕು?
  • ಗೊಂದಲ ಹಾಗೂ ಆತಂಕಕ್ಕೆ ತೆರೆ ಎಳೆದ  NTAGI
  • ಮಹತ್ವದ ಸೂಚನೆ ನೀಡಿದ ರೋಗನಿರೋಧಕ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ

ನವದೆಹಲಿ(ಮೇ.13): ಕೊರೋನಾ ವೈರಸ್ 2ನೇ ಅಲೆ ಆತಂಕದ ಜೊತೆ ಇದೀಗ ಕೊರೋನಾ ಸಿಗುತ್ತಿಲ್ಲ ಅನ್ನೋ ಕೂಗೂ ಜೋರಾಗಿ ಕೇಳಿಬರುತ್ತಿದೆ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಇನ್ನೂ ಲಸಿಕೆ ಸಿಕ್ಕಿಲ್ಲ, ಇನ್ನು ಮೊದಲ ಡೋಸ್ ಪಡೆದವರಿಗೆ 2ನೇ ಡೋಸ್ ಸಿಗುತ್ತಿಲ್ಲ. ಹೀಗೆ ಆತಂಕ ಗೊಂದಲದ ನಡುವೆ ಕೊರೋನಾದಿಂದ ಗುಣಮುಖಗೊಂಡಿರುವವರು ಯಾವಾಗ ಲಸಿಕೆ ಪಡೆದುಕೊಳ್ಳಬೇಕು? ಗುಣಮುಖರಾದ ಬೆನ್ನಲ್ಲೇ ಲಸಿಕೆ ಪಡೆಯಬಹುದೇ? ಅನ್ನೋ ಹಲವು ಪ್ರಶ್ನೆಗಳಿಗೆ ಭಾರತದ ರೋಗನಿರೋಧಕ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ(NTAGI) ಮಹತ್ವದ ಸೂಚನೆ ನೀಡಿದೆ.

"

Tap to resize

Latest Videos

undefined

2ನೇ ಡೋಸ್ ವಿಳಂಬವಾದರೆ ಆತಂಕ ಬೇಡ; ತಜ್ಞರ ವರದಿಯಿಂದ ನಿಟ್ಟುಸಿರು ಬಿಟ್ಟ ಜನ!.

ಕೊರೋನಾದಿಂದ ಗುಣಮುಖರಾದವರು 6 ತಿಂಗಳ ಬಳಿಕ ಲಸಿಕೆ ಪಡೆಯಲು ಅರ್ಹರಾಗಿದ್ದಾರೆ ಎಂದು ಸರ್ಕಾರಿ ಸಮಿತಿ(NTAGI) ಸ್ಪಷ್ಟಪಡಿಸಿದೆ. ಈ ಮೂಲಕ ಸೋಂಕಿನಿಂದ ಗುಣಮುಖಗೊಂಡ ಹಲವರ ಗೊಂದಲಗಳಿಗೆ ತೆರೆ ಬಿದ್ದಿದೆ.

ಮೊನೊಕ್ಲೋನಲ್ ಪ್ರತಿಕಾಯ ಅಥವಾ ಚೇತರಿಸಿಕೊಳ್ಳುವ ಪ್ಲಾಸ್ಮಾವನ್ನು ನೀಡಿದ ಕೋವಿಡ್ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾದ  ಮೂರು ತಿಂಗಳವರೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮುಂದೂಡಬಹುದು ಎಂದು  ಸಮಿತಿ ಶಿಫಾರಸು ಮಾಡಿದೆ.

18 ರಾಜ್ಯಕ್ಕೆ ಲಸಿಕೆ ನೀಡಿದರೂ ಆರೋಪ, ನೋವು ತೋಡಿಕೊಂಡ ಕೋವಾಕ್ಸಿನ್ ಸಂಸ್ಥೆ!

ಇನ್ನು ಆಸ್ಪತ್ರೆಗೆ ದಾಖಲು ಅಥವಾ ಐಸಿಯುನಲ್ಲಿ ಚಿಕಿತ್ಸೆ ಪಡೆದ ರೋಗಿಗಳು, ಅಥವಾ ಗಂಭೀರ ಕಾಯಿಲೆ ಇರುವ ರೋಗಿಗಳು ಲಸಿಕೆ ಪಡೆಯುವಿಕೆಯನ್ನು ನಾಲ್ಕರಿಂದ 8 ವಾರಗಳ ವರೆಗೆ ಮುಂದೂಡುವುದು ಸೂಕ್ತ ಎಂದು ಸಮಿತಿ ಸಲಹೆ ನೀಡಿದೆ. 

ಇದರ ನಡುವೆ ಕೇಂದ್ರ ಸರ್ಕಾರ ಕೋವಿಶೀಲ್ಡ್ 2ನೇ ಡೋಸ್ ಪಡೆಯುವ ಅವದಿಯನ್ನೂ ಹೆಚ್ಚಿಸಿದೆ.  ಮೊದಲ ಡೋಸ್ ಪಡೆದ ಬಳಿಕ 4 ವಾರದಲ್ಲಿ 2ನೇ ಡೋಸ್ ಪಡೆಯಬೇಕು ಎಂದು ಈ ಮೊದಲು ಆರೋಗ್ಯ ಇಲಾಖೆ ಹೇಳಿತ್ತು. ಆದರೆ ಕೋವಿಶೀಲ್ಡ್ ಲಸಿಕೆ ಪಡೆದ ವ್ಯಕ್ತಿಗಳು 2ನೇ ಡೋಸ್ ಅವದಿಯನ್ನು 12 ರಿಂದ 16 ವಾರಕಕ್ಕೆ ಹೆಚ್ಚಿಸಲಾಗಿದೆ.

ಲಸಿಕೆ ಕೊರತೆ ನಡುವೆ ಈ ರೀತಿ ಕಾಲಾವದಿ ಹೆಚ್ಚಿಸಿರುವ ಕೇಂದ್ರದ ನಿರ್ಧಾರಕ್ಕೆ ತೀವ್ರ ವಿರೋಧಗಳು ವ್ಯಕ್ತವಾಗಿದೆ. ಲಸಿಕೆ ಕೊರತೆಯಿಂದ ಕೇಂದ್ರ ಸರ್ಕಾರ ಜನರ ಜೀವವನ್ನೇ ಪಣಕ್ಕಿಡುತ್ತಿದೆ ಎಂದು ಆರೋಪಿಸಿದೆ.

click me!