
ಕಾಠ್ಮಂಡು(ಜೂ.21): ವಿಶ್ವದೆಲ್ಲೆಡೆ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗಿದೆ. 7ನೇ ಯೋಗದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ದೇಶವನ್ನುದ್ದೇಶಿ ಮಾತನಾಡಿದ್ದರು. ಭಾರತದ ಯೋಗಾಭ್ಯಾಸಕ್ಕೆ ವಿಶ್ವವೇ ಮನ್ನಣೆ ನೀಡಿದೆ. ಆದರೆ ಯೋಗ ದಿನಾಚರಣೆ ದಿನವೇ ನೇಪಾಳ ಪ್ರಧಾನಿ ಕೆಪಿ ಒಲಿ ಶರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ವಿಶ್ವಕ್ಕೆ ಯೋಗ ಕೊಡುಗೆ ನೀಡಿದ್ದು ನೇಪಾಳ ಎಂದು ಒಲಿ ಶರ್ಮಾ ಹೇಳಿದ್ದಾರೆ.
ನೇಪಾಳದಲ್ಲೂ ರಾಮಮಂದಿರ, ಶೀಘ್ರ ಭೂಮಿಪೂಜೆ!
ನೇಪಾಳ ಯೋಗಾಭ್ಯಾಸ ಮಾಡುತ್ತಿದ್ದ ವೇಳೆ ಭಾರತವೇ ಇರಲಿಲ್ಲ. ರಾಜ್ಯಗಳು, ಮಹಾರಾಜಗಳುಗಳಿದ್ದ ರಾಜ್ಯವಿತ್ತೇ ಹೊರತು, ಭಾರತ ಅಸ್ಥಿತ್ವದಲ್ಲೇ ಇರಲಿಲ್ಲ. ಅನಾದಿ ಕಾಲದಿಂದಲೂ ನೇಪಾಳದಲ್ಲಿ ಯೋಗಾಭ್ಯಾಸ ಮಾಡಲಾಗುತ್ತಿದೆ. ಯೋಗದ ಮೂಲ ನೇಪಾಳ. ಆದರೆ ನಾವು ಯೋಗವನ್ನು ನಮ್ಮ ಕೊಡುಗೆ ಎಂದು ಹೇಳಲಿಲ್ಲ. ಇದೇ ವೇಳೆ ಭಾರತ ಯೋಗ ಗುರು ಎಂದು ಹೇಳಿ ಎಲ್ಲಾ ಕ್ರೆಡಿಟ್ ಪಡೆದುಕೊಂಡಿದೆ ಎಂದು ಒಲಿ ಶರ್ಮಾ ಹೇಳಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಯೋಗವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರಸ್ತುತ ಪಡಿಸಿ ಎಲ್ಲಾ ಕ್ರೆಡಿಟ್ ಪಡೆದುಕೊಂಡರು. ನೇಪಾಳ ಯೋಗದ ಮೂಲವೇ ಹೊರತು ಭಾರತವಲ್ಲ ಎಂದು ಒಲಿ ಶರ್ಮಾ ಹೇಳಿದ್ದಾರೆ. ಇದೀಗ ಒಲಿ ಶರ್ಮಾ ಹೇಳಿಕೆ ಭಾರತೀಯರ ಮಾತ್ರವಲ್ಲ ನೇಪಾಳಿಗರ ಆಕ್ರೋಶಕ್ಕೂ ಕಾರಣವಾಗಿದೆ.
'ಶ್ರೀರಾಮ ಭಾರತೀಯನಲ್ಲ, ಭಾರತದಿಂದ ನಕಲಿ ಅಯೋಧ್ಯೆ ಸೃಷ್ಟಿ
ಅಯೋಧ್ಯೆ ವಿವಾದ ಬಗೆ ಹರಿದು ಮಂದಿರ ಕಾರ್ಯ ಆರಂಭಗೊಂಡಂತೆ ಶ್ರೀರಾಮನ ಜನ್ಮಸ್ಥಾನ ಆಯೋಧ್ಯೆ ಅಲ್ಲ. ನೇಪಾಳದಲ್ಲಿ ಎಂದು ಕೆಪಿ ಒಲಿ ಶರ್ಮಾ ಹೇಳಿದ್ದರು. ನೇಪಾಳದ ಮದಿ ವಲಯ ಅಥವಾ ಆಯೋಧಪುರಿಯಲ್ಲಿ ಶ್ರೀರಾಮನ ಜನ್ಮಸ್ಥಳ. ಆದರೆ ಭಾರತ ತನ್ನ ರಾಜಕೀಯ ಲಾಭಕ್ಕಾಗಿ ಆಯೋಧ್ಯೆ ಎಂದು ಹೇಳಿಕೊಂಡು ಪ್ರಚಾರ ಮಾಡಿತು ಎಂದು ಕೆಪಿ ಒಲಿ ಶರ್ಮಾ ಹೇಳಿದ್ದರು.
ಶ್ರೀರಾಮನ ಜನ್ಮಸ್ಥಳ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ವಿವಾದ ತಣ್ಣಗಾದ ಬೆನ್ನಲ್ಲೇ ಇದೀಗ ಯೋಗದ ಮೂಲ ನೇಪಾಳ ಎಂದು ಹೇಳೋ ಮೂಲಕ ಮತ್ತೆ ಭಾರತೀಯರನ್ನು ಕೆಣಕುವ ಪ್ರಯತ್ನ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ