ಕೊರೋನಾ ವಿರುದ್ಧ ಹೋರಾಟ; ಲಸಿಕೆ ಪ್ರಗತಿ ಪರಿಶೀಲನೆಗೆ ಮೋದಿ ಉನ್ನತ ಮಟ್ಟದ ಸಭೆ!

By Suvarna NewsFirst Published Jun 26, 2021, 8:36 PM IST
Highlights
  • ಭಾರತದ ಲಸಿಕಾ ಅಭಿಯಾನ ಪ್ರಗತಿ ಪರಿಶೀಲಿಸಿದ ಪ್ರಧಾನಿ ಮೋದಿ
  • ಉನ್ನತ ಮಟ್ಟದ ಸಭೆಯಲ್ಲಿ ಮೋದಿ ಮಹತ್ವದ ಚರ್ಚೆ
  • ಲಸಿಕೆ ನೀಡುವಿಕೆ ವೇಗಕ್ಕೆ ಮೆಚ್ಚುಗೆ ಜೊತೆಗೆ ಕೆಲ ಸೂಚನೆ ನೀಡಿದ ಮೋದಿ

ನವದೆಹಲಿ(ಜೂ.26): ಕೊರೋನಾ ವೈರಸ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ತನ್ನ ಹೋರಾಟಕ್ಕೆ ಮತ್ತಷ್ಟು ವೇಗ ನೀಡಿದೆ. ಭಾರತದಲ್ಲಿನ ಕೊರೋನಾ ಪರಿಸ್ಥಿತಿ, ಲಸಿಕೆ ನೀಡುವಿಕೆ ಕುರಿತ ಪರಿಶೀಲನೆಗೆ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಕೊರೋನಾ ಲಸಿಕಾ ಅಭಿಯಾನದ ವೇಗ, ಭಾರತದಲ್ಲಿನ ಕೊರೋನಾ  ಪ್ರಕರಣ ಸಂಖ್ಯೆ ಕುರಿತು ಚರ್ಚೆ ನಡೆಸಿದ್ದಾರೆ.

CoWin ನಿಂದಲೇ ಪಾಸ್‌ಪೋರ್ಟ್‌ಗೆ ವ್ಯಾಕ್ಸೀನ್ ಸರ್ಟಿಫೀಕೇಟ್ ಲಿಂಕ್ ಮಾಡೋದೇಗೆ ?

ಉನ್ನತ ಮಟ್ಟದ ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಪ್ರಧಾನಿ ಮೋದಿ, ದೇಶದಲ್ಲಿ ನಡೆಯುತ್ತಿರುವ ಲಸಿಕಾ ಅಭಿಯಾನದ ವಿವರಣೆ ನೀಡಿದರು. ಮುಂದಿನ ತಿಂಗಳಿನಿಂದ ಲಸಿಕಾ ಉತ್ಪಾದನೆ ಹಾಗೂ ಪೂರೈಕೆ ಹೆಚ್ಚಿಸಲು ಮಾಡುತ್ತಿರುವ ಯತ್ನಗಳ ಕುರಿತು ಮೋದಿಗೆ ವಿವರಣೆ ನೀಡಲಾಯಿತು.

ಕಳೆದ 6 ದಿನಗಳಲ್ಲಿ 3.77 ಕೋಟಿ ಲಸಿಕೆ ಡೋಸ್ ನೀಡಲಾಗಿದೆ. ಇದು ಮಲೇಷ್ಯಾ , ಸೌದಿ ಅರೇಬಿಯಾ ಹಾಗೂ ಕೆನಾಡ ದೇಶದ ಸಂಪೂರ್ಣ ಜನಸಂಖ್ಯೆಗಿಂತ ಹೆಚ್ಚಾಗಿದೆ. ದೇಶದಲ್ಲಿನ 45 ವರ್ಷ ಮೇಲ್ಪಟ್ಟ, 18 ವರ್ಷ ಮೇಲ್ಪಟ್ಟವರಿಗೆ ನೀಡಲಾಗಿರುವ ಲಸಿಕೆ ವಿವರವನ್ನು ಮೋದಿ ಪಡೆದುಕೊಂಡರು. 

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನ: 30 ಕೋಟಿ ಗಡಿ ದಾಟಿದ ಭಾರತ!

ಲಸಿಕೆ ಮಾಹಿತಿ ಪಡೆದ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ಲಸಿಕೆ ನೀಡುವಿಕೆಯ ವೇಗವನ್ನು ಕಾಯ್ದುಕೊಳ್ಳುವಂತೆ ಸೂಚಿಸಿದರು. ಇತ್ತ ಲಸಿಕೆಯನ್ನು ಸುಲಭವಾಗಿ ಜನರಿಗೆ ತಲುಪಿಸಲು ಅಧಿಕಾರಿಗಳು ರಾಜ್ಯ ಸರ್ಕಾರ ಜೊತೆ ಸಂಪರ್ಕದಲ್ಲಿರುವಾಗಿ ಮೋದಿಗೆ ವಿವರಿಸಿದ್ದಾರೆ. 

ಕೊರೋನಾ ಸೋಂಕು ಪತ್ತೆಹಚ್ಚಲು ಪರೀಕ್ಷೆ ಅತೀ ಅಗತ್ಯವಾಗಿದೆ. ಲಸಿಕೆ ಜೊತೆಗೆ ಕೊರೋನಾ ಪರೀಕ್ಷೆ ವೇಗ ಕಡಿಮೆಯಾಗದಂತೆ ನೋಡಿಕೊಳ್ಳಲು ಪ್ರಧಾನಿ ಮೋದಿ ಸೂಚನೆ ನೀಡಿದರು.  ಜಾಗತಿಕವಾಗಿ ಕೋವಿನ್ ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚುತ್ತಿರುವ ಆಸಕ್ತಿಯ ಬಗ್ಗೆ ಅಧಿಕಾರಿಗಳು ಪ್ರಧಾನ ಮಂತ್ರಿಗೆ ಮಾಹಿತಿ ನೀಡಿದರು. 

click me!