
ದೆಹಲಿ(ಮೇ.22): ಡಿಂಪಲ್ ಅರೋರಾ ಎಂಬ ದಂತವೈದ್ಯೆ ತನ್ನ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ ಅಷ್ಟಾಗುವಾಗ ಕೊರೋನಾ ಮುಷ್ಠಿಯಲ್ಲಿ ಸಿಕ್ಕಿಬಿದ್ದರು ಈಕೆ. 7ನೇ ತಿಂಗಳಲ್ಲಿ ಇನ್ನೂ ಹುಟ್ಟದ ಕಂದನ ಕಳೆದುಕೊಂಡ ಈಕೆ ಮರುದಿನ ತಾವೂ ಇಹಲೋಕ ತ್ಯಜಿಸಿದರು. ಮೂರು ವರ್ಷದ ಮಗುವನ್ನು ತಬ್ಬಲಿಯಾಗಿ ಮಾಡಿ ಹೋದರು. ಆಕೆ ಸಾಯುವ ಮುನ್ನ ನೀಡಿದ ಲಾಸ್ಟ್ ಮೆಸೇಜ್ ಈಗ ವೈರಲ್ ಆಗಿದೆ.
ಕೊರೋನಾವನ್ನು ದಯವಿಟ್ಟು ಲೈಟ್ ಆಗಿ ತಗೊಳ್ಬೇಡಿ. ಇದು ಅತ್ಯಂತ ಕೆಟ್ಟ ರೋಗ, ಇದರ ಲಕ್ಷಣಗಳು ಇನ್ನಷ್ಟು ಕೆಟ್ಟದ್ದು. ನನಗೆ ಮಾತನಾಡಲಾಗುತ್ತಿಲ್ಲ, ಆದರೆ ನನಗೆ ನನ್ನ ಮೆಸೇಜ್ ಎಲ್ಲರಿಗೂ ಕೊಡಬೇಕು. ಮುಖ್ಯವಾಗಿ ನನ್ನ ಗರ್ಭಾವಸ್ಥೆಯಲ್ಲಿ ನನಗಿದು ಬೇಡ ಎಂದು ಗದ್ಗತಿರಾಗಿ ಹೇಳುತ್ತಾರೆ ಆಕೆ.
ಕರ್ನಾಟಕದಲ್ಲಿ ಮೊದಲ ವೈಟ್ ಫಂಗಸ್ ಪತ್ತೆ..!
34 ವರ್ಷದ ಈಕೆ ಬದುಕನ್ನು ಬಗಹಳಷ್ಟು ಎಂಜಾಯ್ ಮಾಡಿದ್ದರು. ಪ್ರತಿ ನಿಮಿಷವನ್ನು ಖುಷಿ ಖುಷಿಯಾಗಿ ಅನುಭವಿಸಿದ್ದರು ಆಕೆ. ಆದರೆ ಕೊರೋನಾ ಜೊತೆ ಎಷ್ಟೇ ಹೋರಾಡಿದರೂ ಬದುಕಿಗೆ ಮರಳಲು ಆಕೆಗೆ ಸಾಧ್ಯವಾಗಲಿಲ್ಲ.
ಭಾರತದಲ್ಲಿ ರೂಪಾಂತರಿ ಕೊರೋನಾ ಅಪಾಯ ಹೆಚ್ಚಾಗಿದ್ದು, ಬಹಳಷ್ಟು ಜನ ಈ ಮಹಾಮಾರಿಯಿಂದ ಸಾವನ್ನಪ್ಪಿದ್ದಾರೆ. ಕೇರಳ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ಮುಂದುವರಿಸಲಾಗಿದ್ದು, ಕೊರೋನಾದ ಅಪಾಯ ಇನ್ನೂ ಕಮ್ಮಿಯಾಗಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ