ದೆಹಲಿ(ಮೇ.22): ಪೂರ್ವ ಕರಾವಳಿಯನ್ನು ಅಪ್ಪಳಿಸಲಿರುವ ಸೈಕ್ಲೋನ್ ಯಾಸ್ ಕುರಿತು ಈಗಾಗಲೇ ಬಹಳಷ್ಟು ಎಚ್ಚರಿಕೆ ತೆಗೆದುಕೊಳ್ಳಲಾಗಿದೆ. ಇತ್ತೀಚೆಗಷ್ಟೇ ಸೈಕ್ಲೋನ್ ತೌಕ್ಟೆ ಬಂದಾಗಿದೆ. ಈಗ ಯಾಸ್ ಸರದಿ. ಅಷ್ಟಕ್ಕೂ ಈ ಸೈಕ್ಲೋನ್‌ಗಳಿಗೆ ಹೆಸರಿಡೋದ್ಯಾರು ? ಸೈಕ್ಲೋನ್ ಯಾಸ್ ಎಂದರೆ ಅರ್ಥವೇನು ?
ಸೈಕ್ಲೋನ್‌ಗಳಿಗೆ ಹೆಸರಿಡುವುದರ ಹಿಂದೆ ಹಲವು ಉದ್ದೇಶಗಳಿವೆ. ಪ್ರತಿಯೊಂದು ಚಂಡಮಾರುತವನ್ನು ಗುರುತಿಸಲು, ಅದರ ಬಗ್ಗೆ ಜಾಗೃತಿ ಮೂಡಿಸಲು, ಒಂದು ಪ್ರದೇಶದ ಮೇಲೆ ಉಷ್ಣವಲಯದ ಚಂಡಮಾರುತಗಳು ಏಕಕಾಲದಲ್ಲಿ ಸಂಭವಿಸಿದಲ್ಲಿ ಗೊಂದಲ ಅವಾಯ್ಡ್ ಮಾಡಲು, ಹೆಚ್ಚಿನ ಸಂಖ್ಯೆಯ ಜನರಿಗೆ ಎಚ್ಚರಿಕೆಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಪ್ರಸಾರ ಮಾಡಲು, ಉಷ್ಣವಲಯದ ಚಂಡಮಾರುತವನ್ನು ಸುಲಭವಾಗಿ ನೆನಪಿಡುವುದು ಸೇರಿ ಹಲವು ಕಾರಣಗಳಿಗೆ ಸೈಕ್ಲೋನ್‌ಗೆ ಹೆಸರನ್ನು ನೀಡಲಾಗುತ್ತದೆ.
undefined
ಸೈಕ್ಲೋನ್ ಯಾಸ್: ಒಡಿಶಾದ 14 ಜಿಲ್ಲೆಗಳಲ್ಲಿ ಹೈ ಅಲರ್ಟ್
ಮುಂದಿನ ವಾರ ಒಡಿಶಾ ಮತ್ತು ಪಶ್ಚಿಮ ಬಂಗಾಳ ತೀರವನ್ನು ಅಪ್ಪಳಿಸುವ ನಿರೀಕ್ಷಿತ ಚಂಡಮಾರುತ ಯಾಸ್ ಅನ್ನು ಒಮಾನ್ ಹೆಸರಿಸಿದೆ. ಈ ಹೆಸರು ಉತ್ತಮ ಸುಗಂಧವನ್ನು ಹೊಂದಿರುವ ಮರವನ್ನು ಸೂಚಿಸುತ್ತದೆ.
ಇಂಗ್ಲಿಷ್‌ನಲ್ಲಿ ಈ ಪದವು ಮಲ್ಲಿಗೆಯನ್ನು ಹೋಲುತ್ತದೆ. ತಾಂತ್ರಿಕ ಪದಗಳಿಗಿಂತ ನೆನಪಿಟ್ಟುಕೊಳ್ಳುವುದು ಸುಲಭವಾದ ಕಾರಣ ಎಚ್ಚರಿಕೆ ಸಂದೇಶಗಳಲ್ಲಿ ಚಂಡಮಾರುತವನ್ನು ತ್ವರಿತವಾಗಿ ಗುರುತಿಸಲು ಚಂಡಮಾರುತವನ್ನು ಈ ರೀತಿ ಹೆಸರಿಸಲಾಗಿದೆ ಎಂದು ವಿಶ್ವ ಹವಾಮಾನ ಸಂಸ್ಥೆ ಹೇಳಿದೆ.
ಚಂಡಮಾರುತಕ್ಕೆ ಹೆಸರಿಡೋದ್ಯಾರು ?
ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಹೆಸರುಗಳ ಪಟ್ಟಿಗಳನ್ನು ನಿರ್ವಹಿಸುತ್ತದೆ. ಇದು ಪ್ರತಿ ಉಷ್ಣವಲಯದ ಚಂಡಮಾರುತದ ಜಲಾನಯನ ಪ್ರದೇಶಕ್ಕೆ ಸೂಕ್ತವಾಗಿದೆ. ಚಂಡಮಾರುತವು ವಿಶೇಷವಾಗಿ ಮಾರಕ ಅಥವಾ ಅಪಾಯಕಾರಿಯಾಗಿದ್ದರೆ ಅದರ ಹೆಸರನ್ನು ಇನ್ನೊಂದರಿಂದ ಬದಲಾಯಿಸಲಾಗುತ್ತದೆ.
As the low-pressure area formed over east central Bay of Bengal as Cyclonic Storm, ‘Yaas’ during the next 24 hours, Indian Naval Ships and Aircraft Standby for Rescue and Relief Ops. pic.twitter.com/3tOroieypM
— Anish Singh (@anishsingh21)ಸಾಮಾನ್ಯವಾಗಿ, ಹೆಸರಿನ ಪಟ್ಟಿಯನ್ನು ನಿರ್ದಿಷ್ಟ ಪ್ರದೇಶದ ಡಬ್ಲ್ಯುಎಂಒ ಸದಸ್ಯರ ರಾಷ್ಟ್ರೀಯ ಹವಾಮಾನ ಮತ್ತು ಜಲವಿಜ್ಞಾನ ಸೇವೆಗಳು (ಎನ್‌ಎಂಎಚ್‌ಎಸ್) ಪ್ರಸ್ತಾಪಿಸುತ್ತವೆ. ಆಯಾ ಉಷ್ಣವಲಯದ ಚಂಡಮಾರುತದ ಪ್ರಾದೇಶಿಕ ಸಂಸ್ಥೆಗಳು ತಮ್ಮ ವಾರ್ಷಿಕ ಅಥವಾ ದ್ವೈವಾರ್ಷಿಕ ಅಧಿವೇಶನಗಳಲ್ಲಿ ಇವುಗಳನ್ನು ಅನುಮೋದಿಸುತ್ತವೆ.
ವಿಶ್ವಾದ್ಯಂತ ಆರು ಪ್ರಾದೇಶಿಕ ವಿಶೇಷ ಹವಾಮಾನ ಕೇಂದ್ರಗಳು (ಆರ್‌ಎಸ್‌ಎಂಸಿ) ಸಲಹೆಗಳನ್ನು ನೀಡಲು ಮತ್ತು ಉಷ್ಣವಲಯದ ಚಂಡಮಾರುತಗಳನ್ನು ಹೆಸರಿಸಬೇಕಾಗುತ್ತದೆ.