ಕೊರೋನಾ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ಕೈಬಿಟ್ಟ ಸರ್ಕಾರ!

By Kannadaprabha News  |  First Published May 18, 2021, 9:16 AM IST

* ಕೋವಿಡ್‌ ನಿರ್ವಹಣೆ ಮಾರ್ಗಸೂಚಿಯಿಂದ ಪ್ಲಾಸ್ಮಾ ಥೆರಪಿ ಔಟ್‌

* ಸೋಂಕಿತರ ಮೇಲೆ ಯಾವುದೇ ಪರಿಣಾಮ ಕಂಡುಬರದ ಹಿನ್ನೆಲೆ

* ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ


ನವದೆಹಲಿ(ಮೇ.18): ಕೋವಿಡ್‌ ನಿರ್ವಹಣೆ ಕುರಿತು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ, ಅದರಲ್ಲಿ ಪ್ಲಾಸ್ಮಾ ಥೆರಪಿಯನ್ನು ಕೈಬಿಟ್ಟಿದೆ. ಸೋಂಕಿತರಿಗೆ ನೀಡುವ ಪ್ಲಾಸ್ಮಾಕ್ಕೆ ದೇಶಾದ್ಯಂತ ಭಾರೀ ಬೇಡಿಕೆ ಇರುವ ಹೊತ್ತಿನಲ್ಲೇ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಈ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಕೋವಿಡ್‌ ವೈದ್ಯಕೀಯ ಮಾರ್ಗಸೂಚಿಯಿಂದ ಪ್ಲಾಸ್ಮಾ ಥೆರಪಿ ಔಟ್‌!

Latest Videos

undefined

ಗಂಭೀರ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ನೀಡಿದ ಹೊರತಾಗಿಯೂ ಅವರು ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಅಥವಾ ಸಾವಿನಿಂದ ಪಾರಾಗುತ್ತಿರುವ ಯಾವುದೇ ದಾಖಲೆಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಸರ್ಕಾರ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಿದೆ.

"

ಪ್ರಸಕ್ತ ಮಾರ್ಗಸೂಚಿಗಳ ಅನ್ವಯ, ಮದ್ಯಮ ಸ್ವರೂಪದ ಸೋಂಕಿತರಿಗೆ ಆರಂಭದ ಹಂತದಲ್ಲೇ ಅಂದರೆ ಲಕ್ಷಣ ಕಾಣಿಸಿಕೊಂಡ 7 ದಿನಗಳ ಒಳಗಾಗಿ ಪ್ಲಾಸ್ಮಾ ತೆರಪಿ ನೀಡಬಹುದಾಗಿತ್ತು. ಆದರೆ ದೇಶಾದ್ಯಂತ ಯಾವುದೇ ಮಾನದಂಡ ಬಳಸದೇ ಪ್ಲಾಸ್ಮಾ ಚಿಕಿತ್ಸೆ ನೀಡುತ್ತಿರುವ ಕುರಿತು ಭಾರೀ ಪ್ರಮಾಣದ ದೂರುಗಳು ಸಲ್ಲಿಕೆಯಾಗಿದ್ದವು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!