ಗೋಡೆಗೆ ಮೂತ್ರ ಹೊಯ್ಯುವ ವೇಳೆ ವಕೀಲನ ಮರ್ಮಾಂಗವನ್ನೇ ಪಿಟ್‌ಬುಲ್ ನಾಯಿ ಕಚ್ಚಿ ಹರಿದುಹಾಕಿರುವ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ. ಲಕ್ನೋ ಮೆಡಿಕಲ್ ಕಾಲೇಜಿನಲ್ಲಿ ವಕೀಲನನ್ನು ದಾಖಲು ಮಾಡಲಾಗಿದೆ.
ನವದೆಹಲಿ (ಜು.24): ಕೇಂದ್ರ ಸರ್ಕಾರ ಕೆಲ ತಿಂಗಳ ಹಿಂದೆ ದೇಶದಲ್ಲಿ ಆಕ್ರಮಣಕಾರಿ ಶ್ವಾನಗಳನ್ನುಸಾಕುವುದಕ್ಕೆ ನಿಷೇಧ ವಿಧಿಸಿತ್ತು. ಅದರಲ್ಲಿ ಮೊದಲ ಸಾಲಿನಲ್ಲಿ ಇದ್ದಿದ್ದು ಪಿಟ್‌ಬುಲ್ ಶ್ವಾನ. ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಯಾವ ಸ್ಥಿತಿ ನಿರ್ಮಾಣವಾಗಿದೆಯೆಂದರೆ, ಪೊಲೀಸರು ಹಾಗೂ ವಕೀಲರು ಇಂಥ ಆಕ್ರಮಣಕಾರಿ ಶ್ವಾನಗಳಿಂದ ತಪ್ಪಿಸಿಕೊಂಡು ಓಡಾಟ ಮಾಡುತ್ತಿದ್ದಾರೆ. ಬಾರಾಬಂಕಿಯ ದರಿಯಾಬಾದ್ ಕ್ಲಾಬ್ ಪ್ರಮುಖನ ಪಿಟ್‌ಬುಲ್ ಶ್ವಾನ, ವಕೀಲನೊಬ್ಬನ ಮರ್ಮಾಂಗವನ್ನೇ ಕಚ್ಚಿ ಹರಿದಿರುವ ಘಟನೆ ಇತ್ತೀಚೆಗೆ ನಡೆದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿರುವ ವಕೀಲ ಲಕ್ನೋ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದೇ ವೇಳೆ ಬೀದಿನಾಯಿಗಳ ಹಿಂಡು ದಾಳಿಯಿಂದ ಪೊಲೀಸ್ ಲೈನ್‌ನಲ್ಲಿರುವ ಪೊಲೀಸರು ಮತ್ತು ಅವರ ಕುಟುಂಬಗಳು ಪ್ರತಿದಿನ ಸಂಕಷ್ಟಕ್ಕೆ ಒಳಗಾಗುತ್ತಿವೆ. ಈ ನಾಯಿಗಳನ್ನು ತಡೆಯಲು ನಗರಸಭೆ ಆಡಳಿತ ಯಾವುದೇ ದೃಢ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.
ಇಲ್ಲಿನ ಆವಾಸ್ ವಿಕಾಸ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಜುಲೈ 16 ರಂದು ನಡೆದ ಘಟನೆ ಇದಾಗಿದೆ. ಇಲ್ಲಿ ಕೊತ್ವಾಲಿ ಪ್ರದೇಶದ ವಕೀಲ ವಿಕಾಸ್ ಭವನ್, ಬಿಜೆಪಿ ನಾಯಕ ದಿವಂಗತ ಸುಧೀರ್ ಕುಮಾರ್ ಸಿಂಗ್ ಸಿಧು ಅವರ ತಿಥಿ ಮುಗಿಸಿಕೊಂಡು ವಾಪಾಸ್ ಮನೆಗೆ ಬರುವ ವೇಳೆ ಈ ಘಟನೆ ನಡೆದಿದೆ. ಅಲ್ಲಿಂದ ಹಿಂದಿರುಗುವಾಗ ಆವಾಸ್ ವಿಕಾಸ್ ಕಾಲೋನಿಯಲ್ಲಿರುವ ದರಿಯಾಬಾದ್ ಬ್ಲಾಕ್ ಪ್ರಮುಖ್ ಆಕಾಶ್ ಪಾಂಡೆ ಅವರ ನಿವಾಸದಲ್ಲಿ ತಂದೆ ವಿವೇಕಾನಂದ ಪಾಂಡೆ ಅವರನ್ನು ಭೇಟಿಯಾಗಲು ತೆರಳಿದ್ದರು ಎಂದು ಹೇಳಲಾಗುತ್ತಿದೆ.
ಈ ವೇಳೆ ವಕೀಲರಿಗೆ ಮೂತ್ರಕ್ಕೆ ಹೋಗಬೇಕು ಎಂದು ಅರ್ಜೆಂಟ್ ಆಗಿದೆ. ತಕ್ಷಣವೇ ಮನೆಯಿಂದ ಹೊರಗೆ ಬಂದು, ಗೋಡೆಗೆ ಮೂತ್ರ ಹೊಯ್ಯುವ ಪ್ರಯತ್ನ ಮಾಡಿದ್ದರು. ಈ ವೇಳೆ ಬ್ಲಾಕ್ ಪ್ರಮುಖ್ ಅವರ ಮುದ್ದಿನ ಪಿಟ್‌ಬುಲ್ ಅವರ ಮೇಲೆ ದಾಳಿ ಮಾಡಿದ್ದು, ಖಾಸಗಿ ಅಂಗವನ್ನು ಕಚ್ಚಿ ಹರಿದು ಹಾಕಿದೆ. ಘಟನೆ ನಡೆದ ಬಳಿಕ ರಕ್ತದ ಮಡುವಿನಲ್ಲಿ ಬಿದ್ದಿದ್ದ ವಕೀಲನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆತನ ಪರಿಸ್ಥಿತಿ ಗಂಭೀರವಾಗಿದ್ದು, ಅವರನ್ನು ಲಕ್ನೋದ ವೈದ್ಯಕೀಯ ಕಾಲೇಜಿನ ಟ್ರಾಮಾ ಸೆಂಟರ್‌ಗೆ ಶಿಫ್ಟ್ ಮಾಡಲಾಗಿದೆ.
ಅವನು ರೀಲ್ ಹೀರೋ ರಿಯಲ್ ವಿಲನ್ ಪೊಲೀಸರಿಗೆ ಹೆದರಿ ರಾತ್ರೋ ರಾತ್ರಿ ಮದುವೆ 2 ತಿಂಗಳಿಗೆ ಮತ್ತೊಬ್ಬಳ ನಂಟು!
ಮತ್ತೊಂದೆಡೆ, ಇತ್ತೀಚಿನ ದಿನಗಳಲ್ಲಿ ಬಾರಾಬಂಕಿ ಪೊಲೀಸ್ ಲೈನ್ ಬೀದಿ ನಾಯಿಗಳ ಕಾರಣದಿಂದ ನಿತ್ಯ ಸಂಕಷ್ಟ ಎದುರಿಸಯತ್ತಿದೆ. ಪ್ರತಿನಿತ್ಯ ವಸತಿ ಸಮುಚ್ಚಯ ಹಾಗೂ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರತ ಪೊಲೀಸರ ಮೇಲೆ ನಾಯಿಗಳ ಹಿಂಡು ದಾಳಿ ನಡೆಸಿ ಗಾಯಗೊಳಿಸುತ್ತಿವೆ. ಜನವರಿಯಲ್ಲಿ ಪೊಲೀಸ್ ಲೈನ್ ಆವರಣದಲ್ಲಿ 5 ಬೀದಿನಾಯಿಗಳು ನನ್ನ 2 ವರ್ಷದ ಮಗನನ್ನು ಪೊದೆಗೆ ಎಳೆದೊಯ್ದು ದಾಳಿ ಮಾಡಿವೆ ಎಂದು ಪೊಲೀಸ್ ಲೈನ್‌ನಲ್ಲಿ ವಾಸಿಸುವ ಕಾನ್‌ಸ್ಟೆಬಲ್ ಗೌರವ್ ತಿವಾರಿ ತಿಳಿಸಿದ್ದಾರೆ.. ನನ್ನ ಮಗನ ದೇಹದ ಮೇಲೆ 40 ಕಡೆ ಆಳವಾದ ಗಾಯಗಳಾಗಿದ್ದರಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು ಎಂದಿದ್ದಾರೆ.
ಬಾಯ್‌ಫ್ರೆಂಡ್ ಜೊತೆ ಕುಚ್‌ಕುಚ್, ಲವರ್‌ಗೆ ಸುಪಾರಿ ಕೊಟ್ಟು ಗಂಡನನ್ನೇ ಸಾಯಿಸಿದ ಪತ್ನಿ!