
ತಿರುವನಂತಪುರಂ(ಮೇ.20): ಕೇರಳ ವಿಧಾನಸಭೆಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ ಪಿಣರಾಯಿ ವಿಜಯನ್ ಇಂದು, ಗುರುವಾರ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಎಪ್ರಿಲ್-ಮೇ ನಲ್ಲಿ ನಡೆದ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸಿಪಿಎಂ ನೇತೃತ್ವದ LDF 140 ಸ್ಥಾನಗಳಲ್ಲಿ ಬರೋಬ್ಬರಿ 99 ಸ್ಥಾನಗಳನ್ನು ಗೆದ್ದು ಎರಡನೇ ಅವಧಿಗೆ ಅಧಿಕಾರ ಪಡೆದುಕೊಂಡಿತ್ತು.
ತಿರುವನಂತಪುರಂ ಸೆಂಟ್ರಲ್ ಸ್ಟೇಡಿಯಂನಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ, ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರಮಾಣ ವಚನ ಬೋಧಿಸಿದ್ದಾರೆ. ಇನ್ನು ಇಂದು ಸಂಜೆ 5.30 ಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ಮೊದಲ ಸಂಪುಟ ಸಭೆ ನಡೆಯಲಿದೆ. ಮೊದಲ ಕ್ಯಾಬಿನೆಟ್ ಸಭೆಯಲ್ಲಿ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆ ಇದೆ.
ಕೇರಳ ಸಂಪುಟದಲ್ಲಿ ಶೈಲಜಾ ಸೇರಿ ಎಲ್ಲ ಹಳಬರಿಗೂ ಕೊಕ್!
ಇನ್ನು ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಪ್ರತಿಪಕ್ಷ ಕಾಂಗ್ರೆಸ್-ಯುಡಿಎಫ್ ನಾಯಕರು ಈ ಪ್ರಮಾಣವಚನ ಸ್ವೀಕಾರ ಸಮಾರಂಭದಿಂದ ದೂರ ಉಳಿದಿದ್ದಾರೆ.
ಸಂಪೂರ್ಣ ಹೊಸ ತಂಡ:
ಸತತ 2 ಬಾರಿ ಶಾಸಕರಾಗಿ ಆಯ್ಕೆಯಾದವರಿಗೆ ಈ ಬಾರಿ ಕೇರಳ ಎಡರಂಗ ಟಿಕೆಟ್ ನಿರಾಕರಿಸಿತ್ತು. ಇದರಿಂದ ಎಡರಂಗಕ್ಕೆ ಭಾರಿ ಹೊಡೆತ ಬೀಳಬಹುದು ಎಂಬ ಲೆಕ್ಕಾಚಾರವಿತ್ತು. ಆದರೆ ನಿರೀಕ್ಷೆಗೂ ಮೀರಿ 140 ಸ್ಥಾನಗಳ ಪೈಕಿ 99ರಲ್ಲಿ ಎಡರಂಗ ಜಯಭೇರಿ ಬಾರಿಸಿತ್ತು. ಆ ಫಲಿತಾಂಶದಿಂದ ಉತ್ತೇಜಿತವಾಗಿರುವ ಎಡರಂಗ ಈ ಬಾರಿ ಸಂಪೂರ್ಣ ಹೊಸ ತಂಡ ಕಟ್ಟಲು ಮುಂದಾಗಿದೆ. ನಾಯಕ ಎಂಬ ಕಾರಣಕ್ಕೆ ಪಿಣರಾಯಿ ಅವರಿಗೆ ವಿನಾಯ್ತಿ ನೀಡಲಾಗಿದ್ದು, ಅವರ ಹಿಂದಿನ ಸಂಪುಟದಲ್ಲಿದ್ದ ಎಲ್ಲ ಮಂತ್ರಿಗಳಿಗೂ ಕೊಕ್ ನೀಡಿದೆ.
ಪಿಣರಾಯಿ ಸಂಪುಟದ ನೂತನ ಸಚಿವರು:
* ಕೆ. ರಾಜನ್
* ರೋಶಿ ಅಗಸ್ಟೀನ್
* ಕೆ. ಕೃಷ್ಣಂಕುಟ್ಟಿ
* ಎ.ಕೆ. ಶಶೀಂದ್ರನ್
* ಅಹ್ಮದ್ ದೇವರ್ಕೋವಿಲ್
* ಆಂಟನಿ ರಾಜು
* ವಿ. ಅಬ್ದುರೆಹಮಾನ
* ಜಿ.ಆರ್. ಅನಿಲ್
* ಕೆ.ಎನ್. ಬಾಲಗೋಪಾಲ್
* ಆರ್. ಬಿಂದು
* ಜೆ. ಚಿಂಜುರಾಣಿ
* ಎಂ.ವಿ. ಗೋವಿಂದನ್
* ಪಿ.ಎ. ಮುಹಮ್ಮದ್ ರಿಯಾಜ್
* ಪಿ. ಪ್ರಸಾದ್
* ಕೆ. ರಾಧಾಕೃಷ್ಣನ್
* ಪಿ. ರಾಜೀವ್
* ಸಜಿ ಚೆರಿಯನ್
* ವಿ. ಶಿವಂಕುಟ್ಟಿ
* ವಿ.ಎನ್. ವಾಸವನ್
* ವೀಣಾ ಜಾರ್ಜ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ