ನವದೆಹಲಿ(ಮೇ.20); ಕೊರೋನಾ ವೈರಸ್ 2ನೇ ಅಲೆ ಭಾರತದಲ್ಲಿ ಪ್ರಬಲವಾಗಿ ಬೀಸುತ್ತಿದೆ. ಫೆಬ್ರವರಿ ಅಂತ್ಯದಲ್ಲಿ ಆರಂಭಗೊಂಡ 2ನೇ ಅಲೆ ಭೀಕರತೆ ಕೇವಲ 2 ತಿಂಗಳಲ್ಲಿ ಸಂಪೂರ್ಣ ಭಾರತವನ್ನು ಆವರಿಸಿಕೊಂಡು ಅತೀ ದೊಡ್ಡ ಅನಾಹುತ ಸೃಷ್ಟಿಸಿದೆ. ಇದೀಗ ಭಾರತೀಯ ವೈದ್ಯಕೀಯ ಸಂಘ(IMA) ಕೇವಲ 2 ತಿಂಗಳಲ್ಲಿ 329 ವೈದ್ಯರು ಕೊರೋನಾಗೆ ಬಲಿಯಾಗಿದ್ದಾರೆ ಅನ್ನೋ ದಾಖಲೆ ಬಿಡುಗಡೆ ಮಾಡಿದೆ.
ಗರ್ಭಿಣಿ ವೈದ್ಯೆ ಸೋಲಿಸಿದ ಕೊರೋನಾ, ಗಂಡ ಹಂಚಿಕೊಂಡ ಕೊನೆ ವಿಡಿಯೋ..
undefined
2ನೇ ಕೊರೋನಾ ವೈರಸ್ ಅಲೆಗೆ ಬಿಹಾರದಲ್ಲಿ 80 ವೈದ್ಯರನ್ನು ಬಲಿಪಡೆದುಕೊಂಡಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ 2ನೇ ಅಲೆಗೆ ಬಿಹಾರದಲ್ಲೇ ಗರಿಷ್ಠ ವೈದ್ಯರು ಬಲಿಯಾಗಿದ್ದಾರೆ. ದೆಹಲಿಯಲ್ಲಿ 73 ವೈದ್ಯರು ಬಲಿಯಾಗಿದ್ದರೆ, ಉತ್ತರ ಪ್ರದೇಶದಲ್ಲಿ 41 ವೈದ್ಯರು ಬಲಿಯಾಗಿದ್ದಾರೆ.
ಪ್ರತಿ ದಿನ 20 ವೈದ್ಯರು ಕೊರೋನಾಗೆ ಬಲಿ:
ಮತ್ತೊಂದು ಆಘಾತಕಾರಿ ಮಾಹಿಯನ್ನು ಭಾರತೀಯ ವೈದ್ಯಕೀಯ ಸಂಘಟ ಬಿಡುಗಡೆ ಮಾಡಿದೆ. ಮೇ ತಿಂಗಳ 3ನೇ ವಾರದಲ್ಲಿ ದೇಶದಲ್ಲಿ ಪ್ರತಿ ದಿನ ಸರಾಸರಿ 20 ವೈದ್ಯರು ಕೊರೋನಾಗೆ ಬಲಿಯಾಗುತ್ತಿದ್ದಾರೆ. ಇದರಲ್ಲಿ ಸರ್ಕಾರಿ ಆಸ್ಪತ್ರೆ ವೈದ್ಯರು, ಖಾಸಗಿ ಹಾಗೂ ವೈದ್ಯಕೀಯ ಕಾಲೇಜು ವೈದ್ಯರು ಸೇರಿದ್ದಾರೆ.
ಪುಟ್ಟ ಕಂದನ ನಿರೀಕ್ಷೆಯಲ್ಲಿದ್ದ 8 ತಿಂಗಳ ವೈದ್ಯೆ ಕೊರೋನಾಗೆ ಬಲಿ
2020ರಲ್ಲಿ 748 ವೈದ್ಯರು ಕೊರೋನಾಗೆ ಬಲಿ:
ಕಳೆದ ವರ್ಷ ಭಾರತಕ್ಕೆ ಕೊರೋನಾ ಅಪ್ಪಳಿಸಿದಾಗ ತೀವ್ರ ಎಚ್ಚರಿಕೆ, ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಆದರೆ 2020ರಲ್ಲಿ ಕೊರೋನಾಗೆ ಭಾರತದ 748 ವೈದ್ಯರು ಬಲಿಯಾಗಿದ್ದಾರೆ. ಕೊರೋನಾ ಮೊದಲ ಅಲೆ ಹಾಗೂ 2ನೇ ಅಲೆಗೆ ಭಾರತದ ಒಟ್ಟು 1,000 ವೈದ್ಯರು ಬಲಿಯಾಗಿದ್ದಾರೆ.
ಭಾರತೀಯ ವೈದ್ಯಕೀಯ ಸಂಘದ ಬಳಿ ಕೇವಲ 3.5 ಲಕ್ಷ ವೈದ್ಯರ ಸ್ಪಷ್ಟ ದಾಖಲೆ ಇದೆ. ಆದರೆ IMA ವ್ಯಾಪ್ತಿಯಿಂದ ಹೊರಗಿನ ವೈದ್ಯರನ್ನೂ ಸೇರಿಸಿದರೆ ಸರಿಸುಮಾರು 12 ಲಕ್ಷಕ್ಕೂ ಹೆಚ್ಚಿನ ವೈದ್ಯರು ಭಾರತದಲ್ಲಿದ್ದಾರೆ. ಹೀಗಾಗಿ ದಾಖಲೆಯಲ್ಲಿ ಹೇಳಿದ ವೈದ್ಯರ ಸಾವಿಗಿಂತ ನಿಜವಾದ ಸಾವಿನ ಸಂಖ್ಯೆ ಹೆಚ್ಚಿರಲಿದೆ ಎಂದು IMA ಹೇಳಿದೆ.