ಮುಂಬೈನಲ್ಲಿ ಬಕ್ರೀದ್‌ಗೆ ಬಲಿ ಕೊಡಲು ತಂದಿದ್ದ ಮೇಕೆಯ ದೇಹದ ಮೇಲೆ ರಾಮ್ ಎಂದು ಬರೆಯುವ ಮೂಲಕ ಕೋಮು ಸೌಹಾರ್ದತೆಯನ್ನು ಕೆಣಕಿರುವ ಘಟನೆ ನಡೆದಿದೆ.
ಮುಂಬೈ: ಇಂದು ಹಾಗೂ ಕೆಲವೆಡೆ ನಾಳೆ ಜಗತ್ತಿನೆಲ್ಲೆಡೆ ಮುಸ್ಲಿಂ ಸಮುದಾಯವೂ ಬಕ್ರೀದ್ ಹಬ್ಬವನ್ನು ಸಡಗರದಿಂದ ಆಚರಿಸುತ್ತಿದೆ. ಈ ಬಕ್ರೀದ್ ಹಬ್ಬದಂದು ಪ್ರಾಣಿಗಳನ್ನು ಬಲಿ ಕೊಡುವ ಸಂಪ್ರದಾಯವಿದೆ. ಕುರುಬಾನಿ ಎಂದು ಕರೆಯಲ್ಪಡುವ ಈ ಸಂಪ್ರದಾಯವನ್ನು ಬಹುತೇಕ ಮುಸ್ಲಿಂ ಸಮುದಾಯದವರು ಆಚರಿಸುತ್ತಾರೆ. ಆದರೆ ಮುಂಬೈನಲ್ಲಿ ಬಕ್ರೀದ್‌ಗೆ ಬಲಿ ಕೊಡಲು ತಂದಿದ್ದ ಮೇಕೆಯ ದೇಹದ ಮೇಲೆ ರಾಮ್ ಎಂದು ಬರೆಯುವ ಮೂಲಕ ಕೋಮು ಸೌಹಾರ್ದತೆಯನ್ನು ಕೆಣಕಿರುವ ಘಟನೆ ನಡೆದಿದೆ.
ಬಕ್ರೀದ್‌ಗೆ ಬಲಿ ನೀಡಲು ತಂದಿದ್ದ ಮೇಕೆಯ ಮೈ ಮೇಲೆ ರಾಮ್ ಎಂದು ಹಿಂದಿ ಭಾಷೆಯಲ್ಲಿ ಬರೆದಿರುವ ವಿಚಾರ ಕ್ಷಿಪ್ರವಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಿಳಿ ಬಣ್ಣದ ಮೇಕೆಯ ಮೇಲೆ ಹಳದಿ ಬಣ್ಣದಲ್ಲಿ ರಾಮ್ ಎಂದು ಬರೆಯಲಾಗಿತ್ತು. ರಾಮ ಹಿಂದೂಗಳ ಆರಾಧ್ಯ ದೈವ ಆಗಿದ್ದು, ಬಲಿಕೊಡಲು ತಂದ ಮೇಕೆಯ ಮೇಲೆ ರಾಮನ ನಾಮ ನೋಡಿದ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಈ ಮೇಕೆಯನ್ನು ಮಾರಾಟ ಮಾಡಿದ ಮಾಂಸದಂಗಡಿಯ ಮಾಲೀಕನ್ನು ಬಂಧಿಸಿದ್ದಾರೆ.
undefined
ಈ ಮಾಂಸದಂಗಡಿಯ ಮುಂದೆ ಹಿಂದೂ ಸಂಘಟನೆಗೆ ಸೇರಿದ ಅನೇಕರು ಸೇರಿದ್ದು, ಅಂಗಡಿ ಮಾಲೀಕನ ಕೃತ್ಯವನ್ನು ಪ್ರಶ್ನೆ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ನವೀ ಮುಂಬೈನ ಮೀರಾ ರೋಡ್ ಬಳಿ ಈ ಘಟನೆ ನಡೆದಿದೆ. ಬಕ್ರೀದ್ ಹಿನ್ನೆಲೆ ಮಾಂಸದಂಗಡಿ ಮಾಲೀಕ ಈ ಮೇಕೆಯನ್ನು ಮಾರಾಟಕ್ಕೆ ಇಟ್ಟಿದ್ದ.
ಮಸೀದಿ ಬಳಿ ದಲಿತ ಸಮುದಾಯ ಭವನ ನಿರ್ಮಾಣಕ್ಕೆ ಮುಸ್ಲಿಂರಿಂದ ವಿರೋಧ
ಆದರೆ ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಕ್ಷಿಪ್ರವಾಗಿ ವೈರಲ್ ಆಗಿದ್ದು, ಹಿಂದೂ ಸಮುದಾಯದ ಜನರ ಧಾರ್ಮಿಕ ಭಾವನೆಯನ್ನು ಕೆರಳಿಸಿದೆ. ಕೂಡಲೇ ಈ ಮಾಂಸದಂಗಡಿ ಮುಂದೆ ಸೇರಿದ ಜನ ಮಾಲೀಕನನ್ನು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆದರೆ ಅಷ್ಟರಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಅನೇಕರು ಮಾಂಸದಂಗಡಿ ಮಾಲೀಕನ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅನೇಕರು ಮುಂಬೈ ಹಾಗೂ ನವೀ ಮುಂಬೈ ಪೊಲೀಸರಿಗೆ ಈ ವಿಚಾರವನ್ನು ಟ್ಯಾಗ್ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅಂಗಡಿ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಬಿಡಿ ಬೇಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೊತೆಗೆ ಮಾಂಸದಂಗಡಿ ಮಾಲೀಕನನ್ನು ಕೂಡ ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೋಮು ಸೌಹಾರ್ಧತೆ ನೆಪವೊಡ್ಡಿ ಭಟ್ಕಳದ ಹಿಂದೂ ಕಾರ್ಯಕರ್ತನ ಗಡಿಪಾರು ಮಾಡಿದ ಸರ್ಕಾರ!