Indian Railways: ಹೀಗಿರುತ್ತೆ ನೋಡಿ ನವದೆಹಲಿ ನವೀಕೃತ ರೈಲು ನಿಲ್ದಾಣ..

By Kannadaprabha News  |  First Published Sep 4, 2022, 8:33 AM IST

ನವದೆಹಲಿ ನವೀಕೃತ ರೈಲು ನಿಲ್ದಾಣ ಹೀಗಿರುತ್ತೆ ಎಂದು ರೈಲ್ವೆ ಸಚಿವಾಲಯ ಕಾಲ್ಪನಿಕ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಈ ಚತ್ರವನ್ನು ಹಲವರು ಟ್ವಿಟ್ಟರ್‌ನಲ್ಲಿ ಮೆಚ್ಚಿಕೊಂಡಿದ್ದಾರೆ. ಆದರೂ,ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 


ನವದೆಹಲಿ: ‘ನ್ಯೂ ಡೆಲ್ಲಿ ನವೀಕೃತ ರೈಲು ನಿಲ್ದಾಣ (New Delhi Proposed Railway Station) ಹೇಗಿರಲಿದೆ?’ ಎಂಬುದನ್ನು ತೋರಿಸುವಂತಹ ಕಾಲ್ಪನಿಕ ಚಿತ್ರಗಳನ್ನು ಭಾರತೀಯ ರೈಲ್ವೆ (Indian Railways) ಶನಿವಾರ ಬಿಡುಗಡೆ ಮಾಡಿದೆ. ಈ ಚಿತ್ರದಲ್ಲಿ ನವೀನ ಮಾದರಿಯ 2 ಬೃಹತ್‌ ಡೋಮ್‌ (ಗುಮ್ಮಟ) (Dome) ರಚನೆಗಳಿವೆ. ವಿಸ್ತಾರವಾಗಿ ಗಾಜನ್ನು (Glass) ಬಳಕೆ ಮಾಡಿರುವುದನ್ನು ಚಿತ್ರದಲ್ಲಿ ಕಾಣಬಹುದಾಗಿದೆ. ನಿಲ್ದಾಣಕ್ಕೆ ಸುಲಭವಾಗಿ ತಲುಪುವುದಕ್ಕಾಗಿ ಹಲವು ಮೇಲ್ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ. ಪಾದಚಾರಿಗಳು ಪ್ಲಾಟ್‌ಫಾರ್ಮ್‌ಗಳಿಗೆ ತಲುಪಲು ಪಾದಚಾರಿ ಮೇಲ್ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ.  ನೋಡಲು ಚಿತ್ರ ನಯನ ಮನೋಹರವಾಗಿದೆ. ‘ಹೊಸ ಯುಗವನ್ನು ಗುರುತಿಸಲಾಗುತ್ತಿದೆ. ನವೀಕರಿಸಲ್ಪಡುವ ನವದೆಹಲಿ ರೈಲು ನಿಲ್ದಾಣದ ಚಿತ್ರ’ ಎಂದು ಕೆಲವು ಚಿತ್ರಗಳನ್ನು ರೈಲ್ವೆ ಸಚಿವಾಲಯ (Ministry of Railways) ಹಂಚಿಕೊಂಡಿದೆ. ಈ ಅತ್ಯಾಧುನಿಕ ಮಾದರಿಯ ಚಿತ್ರಗಳನ್ನು ಶೇರ್‌ ಮಾಡಿಕೊಂಡ ಬಳಿಕ ಈವರೆಗೆ 39 ಸಾವಿರ ಲೈಕ್‌ಗಳನ್ನು ಚಿತ್ರಗಳು ಪಡೆದುಕೊಂಡಿದೆ.

ಭಾರತದ ಅತ್ಯಂತ ಹಳೆಯ, ಅತ್ಯಂತ ಜನನಿಬಿಡ ಮತ್ತು ಅತ್ಯಂತ ಸಾಂಪ್ರದಾಯಿಕ ರೈಲು ನಿಲ್ದಾಣಗಳಲ್ಲಿ ಒಂದಾದ - ಭಾರತದ ರಾಜಧಾನಿಯ ಹೃದಯಭಾಗದಲ್ಲಿರುವ ಹೊಸ ದೆಹಲಿ ರೈಲು ನಿಲ್ದಾಣಗಳ ಪರಿಸ್ಥಿತಿಯು ಶೀಘ್ರದಲ್ಲೇ ಪ್ರಯಾಣಿಕರ ಅನುಕೂಲಕ್ಕಾಗಿ ವಿಶ್ವದರ್ಜೆಯ ಸ್ಥಾಪನೆಯಾಗಿ ಮರು ಅಭಿವೃದ್ಧಿಗೊಳ್ಳಲಿದೆ. ರೈಲ್ವೆ ಸಚಿವಾಲಯವು ತನ್ನ ಟ್ವಿಟ್ಟರ್‌ (Twitter) ಹ್ಯಾಂಡಲ್‌ನಲ್ಲಿ ಪುನರಾಭಿವೃದ್ಧಿ ಮಾಡಲಿರುವ ನವದೆಹಲಿ ರೈಲು ನಿಲ್ದಾಣದ ಪ್ರಸ್ತಾವಿತ ವಿನ್ಯಾಸವನ್ನು ಹಂಚಿಕೊಂಡಿದೆ ಮತ್ತು ಇದನ್ನು ನೋಡಿದರೆ ಯಾವುದೋ ಲೋಕದಲ್ಲಿದ್ದಂತೆ ಭಾಸವಾಗುತ್ತದೆ. ಹಾಲಿವುಡ್‌ ಚಿತ್ರಗಳ ಫೀಲ್‌ ಅನ್ನೂ ಒಡಬಹುದು. ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಉನ್ನತ ಪ್ರಯಾಣದ ಅನುಭವವನ್ನು ನೀಡಲು 'ವಿಶ್ವ ದರ್ಜೆಯ' (World Class) ಸೌಕರ್ಯಗಳೊಂದಿಗೆ ಭಾರತದಾದ್ಯಂತ ಪ್ರಮುಖ ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡುತ್ತಿದೆ.

Tap to resize

Latest Videos

ನೀವು ಆನ್ಲೈನ್‌ ಆರ್ಡರ್ ಮಾಡ್ತೀರಾ: ರೈಲಿನಲ್ಲಿ ಬಂದ ಪಾರ್ಸೆಲ್ ಹೆಂಗೆ ಬಿಸಾಕ್ತಾರೆ ನೋಡಿ

Marking a New Era: Proposed design of the to-be redeveloped New Delhi Railway Station (NDLS). pic.twitter.com/i2Fll1WG59

— Ministry of Railways (@RailMinIndia)

ಪ್ರಸ್ತಾವಿತ ವಿನ್ಯಾಸದ ಕುರಿತು ಭಾರತೀಯ ರೈಲ್ವೆ ಇನ್ನೂ ಇತರ ವಿವರಗಳನ್ನು ಹಂಚಿಕೊಂಡಿಲ್ಲ, ಆದರೆ ಅದರ ನೋಟದಿಂದ, ಒಮ್ಮೆ ಪೂರ್ಣಗೊಂಡ ನಂತರ, ಹೊಸ ದೆಹಲಿ ರೈಲು ನಿಲ್ದಾಣವು ರೈಲು ಪ್ರಯಾಣಿಕರಿಗೆ ಭಾರತದ ಅತಿದೊಡ್ಡ ಮತ್ತು ಆಧುನಿಕ ನಿಲ್ದಾಣವಾಗಲಿದೆ. ಇದಕ್ಕೂ ಮೊದಲು, ರೈಲ್ ಲ್ಯಾಂಡ್ ಡೆವಲಪ್‌ಮೆಂಟ್ ಅಥಾರಿಟಿ (Rail Land Development Authority) (ಆರ್‌ಎಲ್‌ಡಿಎ) ದೆಹಲಿ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದ ಪುನರಾಭಿವೃದ್ಧಿಗೆ ಪ್ರಸ್ತಾವನೆಗಾಗಿ (Request for Proposal) (ಆರ್‌ಎಫ್‌ಪಿ) ವಿನಂತಿಯನ್ನು ಆಹ್ವಾನಿಸಿತ್ತು, ಅದರ ವಿನ್ಯಾಸವನ್ನು ರೈಲ್ವೆ ಸಚಿವಾಲಯದ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಹಂಚಿಕೊಳ್ಳಲಾಗಿದೆ.

ಮಿಶ್ರ ಪ್ರತಿಕ್ರಿಯೆ:
ಆದರೆ ಈ ಚಿತ್ರಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಬೇಸಿಗೆ ಹೆಚ್ಚಿರುವ ದಿಲ್ಲಿಯಲ್ಲಿ ಗಾಜಿನ ಹೊದಿಕೆಯ ನಿಲ್ದಾಣ ಏಕೆ?’ ಎಂದು ಕೆಲವರು ಪ್ರಶ್ನಿಸಿದ್ದಾರೆ.
‘ಇದನ್ನು ನೋಡಿದರೆ ಈಗ ಕಾಮಗಾರಿ ಮುಗಿಯಲ್ಲ, 2025ಕ್ಕೆ ಪೂರ್ಣ ಆದೀತು’ ಎಂದು ಒಬ್ಬರು ಹಾಗೂ ‘ಇಷ್ಟು ನಿಲ್ದಾಣ ಕಟ್ಟಲು ಎಷ್ಟು ಭೂಸ್ವಾಧೀನ ಮಾಡಬೇಕು’ ಎಂದು ಇನ್ನೊಬ್ಬರು ಕಾಲೆಳೆದಿದ್ದಾರೆ.

ಕೆಲವು ಬಳಕೆದಾರರು’ ಗ್ರಾಮೀಣ ಪ್ರದೇಶಗಳು ಮತ್ತು ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿನ ನಿಲ್ದಾಣಗಳನ್ನು ನಿರ್ಲಕ್ಷಿಸುತ್ತಿದ್ದಾರೆ’ ಎಂದೂ ರೈಲ್ವೆ ಸಚಿವಾಲಯದ ವಿರುದ್ಧ ಆರೋಪಿಸಿದರು.

‘ಅಪರಾಧ ನಡೆದಾಗಲೆಲ್ಲಾ ಬಿಜೆಪಿ ನಾಯಕರ ಮನೆ ಪರಿಶೀಲಿಸಿ’ ಎಂದ ಸಮಾಜವಾದಿ ಪಕ್ಷ

‘ಅಪಘಾತಗಳು ಮತ್ತು ವಿಳಂಬವನ್ನು ತಪ್ಪಿಸುವತ್ತ ಗಮನ ಹರಿಸುವ ಬದಲು ಭಾರತೀಯ ರೈಲ್ವೆ ತೋರ್ಪಡಿಕೆಯಲ್ಲೇ ನಿರತವಾಗಿದೆ’ ಎಂದು ಹಲವರು ಟ್ವೀಟ್‌ ಮಾಡಿದ್ದಾರೆ.
ನವದೆಹಲಿ ರೈಲು ನಿಲ್ದಾಣವು ರಾಷ್ಟ್ರ ರಾಜಧಾನಿಯ ಅತ್ಯಂತ ಜನನಿಬಿಡ ನಿಲ್ದಾಣವಾಗಿದೆ. 16 ಪ್ಲಾಟ್‌ಫಾರ್ಮ್‌ಗಳೊಂದಿಗೆ, ಇದು ಪ್ರತಿದಿನ 2 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ಚಲನೆಗೆ ಸಾಕ್ಷಿಯಾಗಿದೆ.

click me!