ಬುದ್ಧಿವಂತರಿಗೆ ಸವಾಲ್: ಫೋಟೋದಲ್ಲಿ ಅಡಗಿದೆ ನಾರಿ ಹೆಸರು, ನೀವಾದ್ರೂ ಗೆಸ್ ಮಾಡ್ತೀರಾ?

Published : Mar 03, 2022, 10:57 AM IST
ಬುದ್ಧಿವಂತರಿಗೆ ಸವಾಲ್: ಫೋಟೋದಲ್ಲಿ ಅಡಗಿದೆ ನಾರಿ ಹೆಸರು, ನೀವಾದ್ರೂ ಗೆಸ್ ಮಾಡ್ತೀರಾ?

ಸಾರಾಂಶ

* ಬುದ್ಧಿವಂತರಿಗೆ ಸವಾಲ್, ಇದು ಫೋಟೋ ಒಗಟು * ಫೋಟೋದಲ್ಲಿ ಅಡಗಿದೆ ನಾರಿ ಹೆಸರು, ನೀವಾದ್ರೂ ಗೆಸ್ ಮಾಡ್ತೀರಾ? * ಹುಡುಗಿ ಹೆಸರು ಗೊತ್ತಾಗಿಲ್ವಾ? ಇಲ್ಲಿದೆ ಉತ್ತರ  

ನವದೆಹಲಿ(ಮಾ.03): ಪ್ರತಿಯೊಬ್ಬರೂ ತನ್ನನ್ನು ತಾನು ಸ್ಮಾರ್ಟ್ ಎಂದು ಪರಿಗಣಿಸುತ್ತಾರೆ, ಆದರೆ ಕೆಲವೊಮ್ಮೆ ಜನರ ಬುದ್ಧಿವಂತಿಕೆಯ ಬಗ್ಗೆ ಅನುಮಾನವೂ ಮೂಡುತ್ತದೆ. ಅನೇಕ ಬಾರಿ ಜನರು ನಮಗೆ ಒಗಟನ್ನು ಕೇಳುತ್ತಾರೆ, ಆದರೆ ಅದಕ್ಕೆ ಉತ್ತರ ಕಂಡು ಹಿಡಿಯಲು ಸಾಧ್ಯವಾಗುವುದಿಲ್ಲ. ಬಹಳ ಸರಳವಾಗಿರುವ ಉತ್ತರ ಸಿಗದೇ ಪರದಾಡುತ್ತೇವೆ. ಉತ್ತರ ಗೊತ್ತಾದ ಬಳಿಕ, ಅರೇ ಹೌದಲ್ವಾ? ಇಷ್ಟು ಸುಲಭವಾಗಿರುವ ಉತ್ತರ ನನಗೇಕೆ ಹೊಳೆಯಲಿಲ್ಲ ಎಂದು ಪರಿತಪಿಸುತ್ತೇವೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಒಂದು ವೈರಲ್ ಆಗಿದ್ದು, ಅದರಲ್ಲಿರುವ ಹುಡುಗಿ ಹೆಸರು ಗುರುತಿಸುವ ಚಾಲೆಂಜ್ ನೀಡಲಾಗಿದೆ.

ಚಿತ್ರದಲ್ಲಿ ಹುಡುಗಿಯ ಹೆಸರು ಅಡಗಿದೆ

ಫೋಟೋ ರೂಪದಲ್ಲಿರುವ ಈ ಒಗಟಿನಲ್ಲಿ ಹುಡುಗಿಯ ಹೆಸರು ಅಡಗಿದೆ. ಫೋಟೋ ರೂಪದಲ್ಲಿರುವ ಈ ಒಗಟು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ವೈರಲ್ ಆಗುತ್ತಿದೆ. ಇನ್ನು ಫೋಟೋದಲ್ಲಿರುವ ಹುಡುಗಿ ಹೆಸರು ಸಾಮಾಣ್ಯವಾದ ಹೆಸರು. ಹೀಗಾಗಿ ನೀವು ಮಾಡಬೇಕಾಗಿರುವುದು ಇಷ್ಟೇ, ಈ ಚಿತ್ರವನ್ನು ಎಚ್ಚರಿಕೆಯಿಂದ ನೋಡಿ ಮತ್ತು ಹುಡುಗಿಯ ಹೆಸರನ್ನು ಗೆಸ್ ಮಾಡಿ.

ಅನೇಕ ಮಂದಿ ಈ ಫೋಟೋದಲ್ಲಿರುವ ಹುಡುಗಿ ಹೆಸರು ಏನೆಂದು ತೋಚನೆ ಸುಸ್ತಾಗಿದ್ದಾರೆ. ಶೇ 99 ರಷ್ಟು ಜನರು ಈ ಸರಳವಾದ ಉತ್ತರವನ್ನು ಮೊದಲ ಬಾರಿ ನೀಡಲು ಸಾಧ್ಯವಾಗಲಿಲ್ಲ. ಈ ಒಗಟಿಗೆ ಸರಿಯಾದ ಉತ್ತರವನ್ನು ನೀಡಲು ಕೆಲವೇ ಜನರು ಸಮರ್ಥರಾಗಿದ್ದಾರೆ. ಚಿತ್ರದಲ್ಲಿ ನೂರರ ನೋಟು ಇರುವುದನ್ನು ನೋಡಬಹುದು. ಇದಲ್ಲದೆ, ಚಿತ್ರದಲ್ಲಿ ಟ್ಯಾಪ್ ಇದೆ. ಈ ಎರಡು ವಿಷಯಗಳಿಂದ ನೀವು ಹುಡುಗಿಯ ಹೆಸರನ್ನು ಕಂಡುಹಿಡಿಯಬೇಕು.

10 ಸೆಕೆಂಡುಗಳಲ್ಲಿ ಉತ್ತರಿಸಿ

ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಚಿತ್ರವನ್ನು ಕೂಲಂಕುಷವಾಗಿ ನೋಡಿದರೂ ಹುಡುಗಿಯ ಹೆಸರು ಹೇಳಲು ಹಲವರಿಗೆ ಸಾಧ್ಯವಾಗುತ್ತಿಲ್ಲ. ನೀವೂ ಚಿತ್ರವನ್ನು ಎಚ್ಚರಿಕೆಯಿಂದ ನೋಡಿ ಮತ್ತು 10 ಸೆಕೆಂಡುಗಳಲ್ಲಿ ಹುಡುಗಿಯ ಹೆಸರು ಗೆಸ್ ಮಾಡಲು ಪ್ರಯತ್ನಿಸಿ. 

ಹುಡುಗಿ ಹೆಸರು ಗೊತ್ತಾಗಿಲ್ವಾ? ಇಲ್ಲಿದೆ ಉತ್ತರ
'
ಈ ಒಗಟು ತುಂಬಾ ಸರಳವಾಗಿದೆ. ನೂರು ರೂಪಾಯಿಯ ನೋಟಿನಿಂದ ‘ಸೋ’(ಹಿಂದಿಯಲ್ಲಿ ನೂರು ರೂಪಾಯಿಗೆ ಸೋ ಎನ್ನುತ್ತಾರೆ) ಮತ್ತು ನಲ್ಲಿಯಿಂದ ‘ನಲ್' ಎಂದಾಗುತ್ತದೆ. ಈಗ ಎರಡನ್ನೂ ಸೇರಿಸಿದ ನಂತರ (ಸೋ+ನಲ್) ಪೂರ್ಣ ಹೆಸರು ಸೋನಲ್ ಎಂದಾಯಿತು. ಈ ರೀತಿಯಾಗಿ ಈ ಸರಳ ಪ್ರಶ್ನೆಗೆ ಉತ್ತರ 'ಸೋನಲ್'. ಸೋನಾಲ್ ಎಂಬುದು ತುಂಬಾ ಸಾಮಾನ್ಯವಾದ ಹೆಸರು ಎಂದು ನಿಮಗೆ ತಿಳಿದಿದೆ. ಹಾಗಾದ್ರೆ ತಡವೇಕೆ? ಫೋಟೋ ನಿಮ್ಮ ಸ್ನೇಹಿತರಿಗೂ ಕಳುಹಿಸಿ ಬುದ್ಧಿವಂತರು ಯಾರೆಂದು ಪರೀಕ್ಷಿಸಿ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು