ರೈಲಿನಲ್ಲಿ ಮಲಗೋದು ಸಾಮಾನ್ಯ ಆದಾಗ್ಯೂ ರೈಲಿನಲ್ಲಿ ವ್ಯಕ್ತಿಯೊಬ್ಬ ಆರಾಮದಾಯಕವಾಗಿ ನಿದ್ರಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ಮುಂಬೈನ ಲೋಕಲ್ ರೈಲುಗಳು ಯಾವಾಗಲೂ ಕಾಲು ಇಡಲು ಸಾಧ್ಯವಾಗದಷ್ಟು ಜನಸಂದಣಿಯಿಂದ ತಂಬಿರುತ್ತದೆ. ಇದೇ ಕಾರಣಕ್ಕೆ ಆ ರೈಲುಗಳು ಕುಖ್ಯಾತಿಯನ್ನು ಪಡೆದಿವೆ. ಈ ಲೋಕಲ್ ಟ್ರೈನ್ ಹತ್ತಲು ಜನ ಪಟ್ಟ ಪಾಡನ್ನು ಅನೇಕರು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದನ್ನು ನೀವು ನೋಡಿರಬಹುದು.ಅದನ್ನೇರಿ ಪ್ರಯಾಣಿಸುವುದೇ ಮುಂಬೈನ ಅನೇಕ ಜನರ ದೈನಂದಿನ ಸಾಹಸವಾಗಿದೆ. ಅಂತಹ ಪರಿಸ್ಥಿತಿ ಇರುವಂತಹ ರೈಲಿನಲ್ಲಿ ವ್ಯಕ್ತಿಯೊಬ್ಬ ಲಾಗೇಜ್ ಇಡುವಂತಹ ಸ್ಥಳದಲ್ಲಿ ಹಾಯಾಗಿ ಯಾವ ಚಿಂತೆಯೂ ಇಲ್ಲದೇ ನಿದ್ರಿಸುತ್ತಿರುವುದು ನೋಡುಗರನ್ನು ದಂಗು ಬಡಿಸಿದೆ.
ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಸಾಕಷ್ಟು ಸದ್ದು ಮಾಡುತ್ತಿದ್ದು, ನೂರಾರು ಕಾಮೆಂಟ್‌ಗಳನ್ನು ಜನ ಮಾಡುತ್ತಿದ್ದಾರೆ. ಫೋಟೋದಲ್ಲಿ ಕಾಣಿಸುವಂತೆ ರೈಲಿನ ಲಾಗೇಜ್ ಇಡುವಂತಹ ಸ್ಥಳದಲ್ಲಿ ಜೀನ್ಸ್ ಪ್ಯಾಂಟ್ ಹಾಗೂ ಶರ್ಟ್ ಧರಿಸಿರುವ ವ್ಯಕ್ತಿಯೊಬ್ಬ ಬಟ್ಟೆಯೊಂದರಲ್ಲಿ ತನ್ನ ಮುಖವನ್ನು ಮುಚ್ಚಿಕೊಂಡು ಯಾರಿಗೂ ಕ್ಯಾರೇ ಎನ್ನದಂತೆ ನಿದ್ರೆಗೆ ಜಾರಿದ್ದಾನೆ. ಇದನ್ನು ನೋಡಿದ ರೈಲಿನಲ್ಲಿ ಪ್ರಯಾಣಿಸುವ ಸಹ ಪ್ರಯಾಣಿಕನೋರ್ವ ಈತನ ಫೋಟೋ ತೆಗೆದು ಸಾಮಾಜಿಕ ಜಾಲತಾಣವಾದ (Social Media) ರೆಡಿಟ್‌ನಲ್ಲಿ ಹಾಕಿದ್ದಾನೆ. ಈತನನ್ನು ನೋಡಿ ಸ್ವಲ್ಪ ಅಸೂಯೆಯಾಗುತ್ತಿದೆ ಎಂದು ಆತ ಬರೆದುಕೊಂಡಿದ್ದಾನೆ.
ಫೋಟೋ ವೈರಲ್ (Photo Viral) ಆಗುತ್ತಿದ್ದಂತೆ ಜನ ಕಾಮೆಂಟ್ ಮಾಡಲು ಶುರು ಮಾಡಿದ್ದಾರೆ. ಬಳಕೆದಾರರೊಬ್ಬರು ಪ್ರಯಾಣಿಕನ ಈ ವರ್ತನೆಯನ್ನು ಸಾಹಸದ ಅಥವಾ ಡೇರ್‌ಡೆವಿಲ್ ಆಕ್ಟ್ ಎಂದು ಕರೆದಿದ್ದಾರೆ. ಕನಿಷ್ಠ 2,342 ರೈಲುಗಳು ಮುಂಬೈ ನಗರ ಜಾಲದಲ್ಲಿ ಸಂಚರಿಸುತ್ತವೆ. 390 ಕಿಲೋಮೀಟರ್ ದೂರದಲ್ಲಿ ಪ್ರತಿದಿನ ಸುಮಾರು 7.5 ಮಿಲಿಯನ್ ಪ್ರಯಾಣಿಕರನ್ನು ಸಾಗಿಸುತ್ತವೆ. ಮುಂಬೈ (Mumbai) ಸ್ಥಳೀಯ ರೈಲಿನ ದೈನಂದಿನ ಪ್ರಯಾಣಿಕರು ಭಾರತೀಯ ರೈಲ್ವೆಯ ದೈನಂದಿನ ಪ್ರಯಾಣಿಕರ ಸುಮಾರು 40 ಪ್ರತಿಶತವನ್ನು ಹೊಂದಿದ್ದಾರೆ. ಈ ಸ್ಥಳೀಯ ರೈಲುಗಳನ್ನು ಮುಂಬೈನ ಲೈಫ್‌ಲೈನ್ ಎಂದು ಕರೆಯಲಾಗುತ್ತದೆ.
ಚಲಿಸುತ್ತಿರುವ ರೈಲು ಹತ್ತಲು ಹೋಗಿ ಕೆಳಗೆ ಬಿದ್ದ ವ್ಯಕ್ತಿಯ ರಕ್ಷಣೆ... ರೋಚಕ ವಿಡಿಯೋ ವೈರಲ್
ಬೈಕ್ ಸವಾರನೋರ್ವ ಸಾವಿನ ದವಡೆಯಿಂದ ಕ್ಷಣದಲ್ಲಿ ಪಾರಾಗಿದ್ದಾನೆ. ಮುಂಬೈನ ರೈಲ್ವೆ ಕ್ರಾಸಿಂಗ್ ಬಳಿ ಈ ಘಟನೆ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ಈಗ ವಿಡಿಯೋ ವೈರಲ್ ಆಗಿದೆ. ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಯಾವುದೇ ತೊಂದರೆ ಇಲ್ಲದೇ ಪಾರಾಗಿದ್ದಾನೆ. ಜನರು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳದ ಕಾರಣ ರೈಲ್ವೆ ಹಳಿಗಳ ಬಳಿ ಅಪಘಾತಗಳು ಭಾರತದಲ್ಲಿ ಸಾಮಾನ್ಯ ಘಟನೆಯಾಗಿದೆ. ಅಂತಹದೇ ಘಟನೆ ಇದಾಗಿದ್ದು, ಬೈಕರ್‌ನ ನಿರ್ಲಕ್ಷ್ಯ ಇಲ್ಲಿ ಎದ್ದು ಕಾಣುತ್ತಿದೆ. ರೈಲ್ವೆ ಗೇಟ್‌ಗಳಿಲ್ಲದ ರೈಲ್ವೆ ಕ್ರಾಸಿಂಗ್ ಇದಾಗಿದ್ದು, ಮುನ್ನೆಚರಿಕೆ ಇದ್ದರೂ ಈತ ರೈಲ್ವೆ ಛೇದಕವನ್ನು ದಾಟಲು ಪ್ರಯತ್ನಿಸಿ ಸಾವಿಗೆ ಆಹ್ವಾನ ನೀಡಿದ್ದ. ಆದರೆ ಈತನ ಅದೃಷ್ಟ ಚೆನ್ನಾಗಿತ್ತೇನೋ ಬದುಕುಳಿದಿದ್ದಾನೆ.
ಬೈಕ್ ಪುಡಿಪುಡಿ... ಸಾವಿನಿಂದ ಗ್ರೇಟ್ ಎಸ್ಕೇಪ್ ಆದ ಯುವಕ... ನೋಡಿ ಭಯಾನಕ ವಿಡಿಯೋ
ವೀಡಿಯೊದಲ್ಲಿ, ಸವಾರನು ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಅವಸರ ಅವಸರವಾಗಿ ರೈಲ್ವೆ ಹಳಿ ದಾಟುತ್ತಿರುವುದನ್ನು ಕಾಣಬಹುದು. ಆದರೆ, ಬೈಕ್‌ನ ಟೈರ್ ಟ್ರ್ಯಾಕ್‌ನಲ್ಲಿ ಸಿಲುಕಿಕೊಂಡಿದೆ. ಕೂಡಲೇ ಈತ ಬೈಕ್ ಬಿಟ್ಟು ಹಿಂದೆ ಸರಿದಿದ್ದು, ಇದೇ ಕ್ಷಣಕ್ಕೆ ವೇಗವಾದ ರೈಲೊಂದು ಆ ಟ್ರ್ಯಾಕ್‌ನಲ್ಲಿ ಪಾಸಾಗಿದೆ. ಪರಿಣಾಮ ರೈಲು ನಾಲ್ಕು ಭಾಗಗಳಾಗಿ ದೂರ ಹೋಗಿ ಬಿದ್ದಿದೆ. ಜೊತೆಗೆ ಈತನ ಜೀವವೂ ಉಳಿದಿದೆ. ಈ ವಿಡಿಯೋದಲ್ಲಿರುವ ಸಮಯದ ಪ್ರಕಾರ ಇದು ಫೆಬ್ರವರಿ 12 ರಂದು ಸಂಜೆ 6:18 ರ ಸುಮಾರಿಗೆ ನಡೆದಿದೆ. ರಾಜಧಾನಿ ಎಕ್ಸ್‌ಪ್ರೆಸ್ ರೈಲು ಇದಾಗಿದ್ದು, ಈ ಭಯಾನಕ ಘಟನೆ ಮುಂಬೈನಲ್ಲಿ ನಡೆದಿದೆ. ಈ ವಿಡಿಯೋವನ್ನು 73 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ