ಮುಳ್ಳುಹಂದಿಯನ್ನು ಬಿಡಿಸಿದಂತೆ ಸಹಿ ಹಾಕಿದ ಸರ್ಕಾರಿ ಅಧಿಕಾರಿ

Published : Mar 23, 2022, 02:34 PM IST
ಮುಳ್ಳುಹಂದಿಯನ್ನು ಬಿಡಿಸಿದಂತೆ ಸಹಿ ಹಾಕಿದ ಸರ್ಕಾರಿ ಅಧಿಕಾರಿ

ಸಾರಾಂಶ

ಮುಳ್ಳುಹಂದಿಯನ್ನು ಬಿಡಿಸಿದಂತೆ ಸಹಿ ಹಾಕಿದ ಸರ್ಕಾರಿ ಅಧಿಕಾರಿ ಇದು ಗುವಾಹಟಿಯ ವೈದ್ಯಕೀಯ ಕಾಲೇಜು ಆಸ್ಪತ್ರೆ ಅಧಿಕಾರಿಯ ಸಹಿ ಸಹಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌  

ಗುವಾಹಟಿ: ಅಸ್ಸಾಂನ ಗುವಾಹಟಿ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ಅಧಿಕಾರಿಯೊಬ್ಬರ ಸಹಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಳ್ಳುಹಂದಿಯನ್ನು ಚಿತ್ರಿಸುವಂತೆ ಸಹಿ ಹಾಕಿದ್ದು, ಇದು ನೆಟ್ಟಿಗರಲ್ಲಿ ಸೋಜಿಗ ಮೂಡಿಸಿದೆ. ಮುಳ್ಳುಹಂದಿಯ ದೇಹದಲ್ಲಿರುವ ಮುಳ್ಳಿನಷ್ಟೇ ಮುಳ್ಳನ್ನು ಇವರಿಗೆ ಬಿಡಿಸಲು ಸಾಧ್ಯವಾಗಿಲ್ಲ ಎಂದು ಈ ಸಹಿಯನ್ನು ನೋಡಿ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. 

ಈ ಸಹಿಯ ಜೊತೆ ಗುವಾಹಟಿಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮೂಳೆ ಚಿಕಿತ್ಸಾ ವಿಭಾಗದ ರಿಜಿಸ್ಟ್ರಾರ್‌ನ ಮುದ್ರೆಯೂ ಇದೆ. ಅದರಂತೆ ಇದು ಮಾರ್ಚ್ 4 2022ರಂದು ಹಾಕಿದ ಸಹಿ ಆಗಿದೆ. ನಾನು ಹಲವು ಇಂತಹ ವಿಚಿತ್ರ ಸಹಿಗಳನ್ನು ನೋಡಿದ್ದೇನೆ. ಆದರೆ ಇದು ಮಾತ್ರ ಬೆಸ್ಟ್ ಎನಿಸುವ ಸಹಿ ಎಂದು ಈ ಸಹಿಯ ಫೋಟೋ ನೋಡಿದವರೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಧಿಕಾರಿ ತಮ್ಮ ಪೆನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಇಲ್ಲವೇ ಎಂಬುದನ್ನು ನೋಡುತ್ತಿದ್ದಾರೆಯೇ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ, ಇದು ಮುಳ್ಳುಹಂದಿಯಂತೆ ಕಾಣಿಸುತ್ತಿದೆ ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ದಾರೆ. 

ರೈಲ್ವೆ ಸ್ಟೇಷನ್‌ನಲ್ಲಿ ಹೊಯ್‌ ಕೈ : ಪೊಲೀಸ್‌ಗೆ ಚಪ್ಪಲಿಯಿಂದ ಥಳಿಸಿದ ಮಹಿಳೆ

ಈ ಸಹಿಯನ್ನು ಬ್ಯಾಂಕ್ ಸಿಬ್ಬಂದಿ ಹೇಗೆ ಪರಿಶೀಲಿಸುತ್ತಾರೆ. ಮುಳ್ಳುಹಂದಿ ಹೊಂದಿರುವ ಮುಳ್ಳುಗಳ ಸಂಖ್ಯೆ ಎಷ್ಟಿದೆ ಎಂದು ಅವರು ಎಣಿಸುತ್ತಾರೆಯೇ ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ. ಬಹುಶಃ ಈ ವ್ಯಕ್ತಿ ತಮ್ಮ ಸಹಿಯ ಮೂಲಕ ಏನೋ ರಹಸ್ಯವಾದ ಕೋಡ್ ಅನ್ನು ರವಾನಿಸುತ್ತಿರಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಒಟ್ಟಿನಲ್ಲಿ ಈ ಸಹಿ ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತಿದೆ. ಜೊತೆಗೆ ನೆಟ್ಟಿಗರು ತಾವು ನೋಡಿದ ಇದಕ್ಕಿಂತಲೂ ವಿಭಿನ್ನವಾದ ಸಹಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.  

ಜಾತ್ರೆಗೆ ಸನ್ನಿ ಲಿಯೋನ್ ಅಭಿಮಾನಿ ಬಳಗದಿಂದ ಸ್ವಾಗತ ಸುಸ್ವಾಗತ 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?