ಅಲ್‌ಖೈದಾಗೆ ಶಸ್ತ್ರಾಸ್ತ್ರ ಪೂರೈಸುವ ಟರ್ಕಿ ಉಗ್ರರೊಂದಿಗೂ ಪಿಎಫ್‌ಐ ನಂಟು: ಇಬ್ಬರು ನಾಯಕರಿಗೆ ಅತಿಥ್ಯ

By Kannadaprabha NewsFirst Published Sep 30, 2022, 7:10 AM IST
Highlights

ಪ್ರಸ್ತುತ ದೇಶದಲ್ಲಿ ಬ್ಯಾನ್ ಆಗಿರುವ ಪಿಎಫ್ಐ ಸಂಘಟನೆ, ಜಗತ್ತಿನ ಕುಖ್ಯಾತ ಉಗ್ರ ಸಂಘಟನೆ ಅಲ್‌ಖೈದಾ ಜತೆ ಗುರುತಿಸಿಕೊಂಡಿರುವ ಜಿಹಾದಿಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಿದ ಆರೋಪ ಎದುರಿಸುತ್ತಿರುವ ಟರ್ಕಿಯ ಮೂಲಭೂತವಾದಿ ಗುಂಪೊಂದರ ಜತೆ ಪಿಎಫ್‌ಐ ನಂಟು ಹೊಂದಿದ್ದ ಸಂಗತಿ ಬೆಳಕಿಗೆ ಬಂದಿದೆ.

ದೆಹಲಿ: ಭಯೋತ್ಪಾದನೆ, ಮೂಲಭೂತವಾದ ಹಾಗೂ ಹಿಂದೂ ಕಾರ್ಯಕರ್ತರ ಹತ್ಯೆ ಆರೋಪದಡಿ ದೇಶದಲ್ಲಿ ನಿಷೇಧಕ್ಕೆ ಒಳಗಾದ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಗೆ ಸಂಬಂಧಿಸಿದ ಒಂದೊಂದೇ ಕರ್ಮಕಾಂಡಗಳು ಈಗ ಬಯಲಾಗುತ್ತಿವೆ. ಜಗತ್ತಿನ ಕುಖ್ಯಾತ ಉಗ್ರ ಸಂಘಟನೆ ಅಲ್‌ಖೈದಾ ಜತೆ ಗುರುತಿಸಿಕೊಂಡಿರುವ ಜಿಹಾದಿಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಿದ ಆರೋಪ ಎದುರಿಸುತ್ತಿರುವ ಟರ್ಕಿಯ ಮೂಲಭೂತವಾದಿ ಗುಂಪೊಂದರ ಜತೆ ಪಿಎಫ್‌ಐ ನಂಟು ಹೊಂದಿದ್ದ ಸಂಗತಿ ಬೆಳಕಿಗೆ ಬಂದಿದೆ.

ಟರ್ಕಿಯಲ್ಲಿ (Turkey) ಮಾನವ ಹಕ್ಕುಗಳು, ಸ್ವಾತಂತ್ರ್ಯ, ಮಾನವೀಯ ನೆಲೆ ಪ್ರತಿಷ್ಠಾನ ಎಂಬ ಸಂಸ್ಥೆಯಿದ್ದು, ಅದನ್ನು ಐಎಚ್‌ಎಚ್‌ ಎಂದು ಕರೆಯಲಾಗುತ್ತದೆ. ಈ ಸಂಘಟನೆ ಅಲ್‌ಖೈದಾ (Al-Qaeda militant) ನಂಟಿನ ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಸಿದ ಆರೋಪ ಹೊತ್ತಿದೆ. ಈ ಸಂಘಟನೆಗೂ ಪಿಎಫ್‌ಐಗೂ(PFI) ನಂಟು ಇದೆ. ಪಿಎಫ್‌ಐನ ರಾಷ್ಟ್ರೀಯ ಮಂಡಳಿ ಸದಸ್ಯರಾದ ಇ.ಎಂ. ಅಬ್ದುಲ್‌ ರಹಿಮಾನ್‌ (Abdul Rahiman) ಹಾಗೂ ಪ್ರೊ. ಪಿ.ಕೋಯಾ (P. Koya) ಅವರಿಗೆ ಈ ಸಂಘಟನೆ ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ಐಎಚ್‌ಎಚ್‌ ಆತಿಥ್ಯ ವಹಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PFI Twitter Accounts Taken Down: ಪಿಎಫ್‌ಐ, ಸಿಎಫ್‌ಐ ನಾಯಕರ ಖಾತೆಗೆ ಟ್ವಿಟರ್‌ ಬೇಲಿ!

2016ರಲ್ಲಿ ಟರ್ಕಿ ಅಧ್ಯಕ್ಷ ಎರ್ಡೋಗನ್‌ (Erdogan) ಅವರನ್ನು ಸೇನಾ ದಂಗೆ ಮೂಲಕ ಪದಚ್ಯುತಿಗೆ ಯತ್ನಿಸಲಾಗಿತ್ತು ಎಂಬ ವರದಿಗಳು ಬಂದಾಗ ಆ ಕುರಿತು ಪಿಎಫ್‌ಐ ಹೇಳಿಕೆ ಬಿಡುಗಡೆ ಮಾಡಿತ್ತು. ಇದೂ ಟರ್ಕಿ ಮತ್ತು ಪಿಎಫ್‌ಐ ನಂಟಿನ ಬಗ್ಗೆ ಮತ್ತಷ್ಟು ಬೆಳಕು ಚೆಲ್ಲುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಯಹೂದಿಗಳ ಮೇಲೆ ದಾಳಿಗೆ ಪಿಎಫ್‌ಐ ಸಂಚು

ಪಿಎಫ್‌ಐ ಸಂಘಟನೆ ವಿದೇಶಿಯರು ಅದರಲ್ಲೂ ಯಹೂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ತಮಿಳುನಾಡಿನ (Tamil Nadu)  ವಟ್ಟಕ್ಕನಲ್‌ ಬೆಟ್ಟದ (Vattakkanal Hill)ಮೇಲೆ ದಾಳಿ ನಡೆಸಲು ಸಂಚು ರೂಪಿಸಿತ್ತು ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.

ಹೈಕೋರ್ಟ್ ಜಡ್ಜ್‌, ಪೊಲೀಸ್‌ ಅಧಿಕಾರಿಗಳ ಮೇಲೂ ದಾಳಿ ಸಂಚು

ಇತ್ತೀಚಿಗೆ ಪಿಎಫ್‌ಐನ ಕಚೇರಿಗಳ ಮೇಲೆ ದಾಳಿ ನಡೆಸಿದ್ದ ರಾಷ್ಟ್ರೀಯ ತನಿಖಾ ದಳದ (NIA) ತನಿಖೆಯಿಂದ ಈ ವಿಷಯ ತಿಳಿದು ಬಂದಿದೆ. ದಕ್ಷಿಣ ರಾಜ್ಯಗಳಿಗೆ (South Indian state) ಸೇರಿದ ಸುಮಾರು 15 ಮಂದಿ ಯುವಕರ ಗುಂಪು ಹೈಕೋರ್ಟ್ ನ್ಯಾಯಾಧೀಶರ (High Court Judge)  ಮೇಲೆ, ಹಿರಿಯ ಪೊಲೀಸ್‌ ಅಧಿಕಾರಿಗಳ ಮೇಲೆ, ವಟ್ಟಕ್ಕನಲ್‌ ಬೆಟ್ಟದ ಮೇಲೆ ಹಾಗೂ ಅಹಮದೀಯ ಮುಸ್ಲಿಮರ ಮೇಲೆ ದಾಳಿ ನಡೆಸಲು ಸಂಚು ರೂಪಿಸಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

PFI Ban ವಿರುದ್ಧ ಸುಪ್ರೀಂ ಕೋರ್ಟ್‌ಗೆ: ಸಿಎಫ್‌ಐ, ತಮಿಳುನಾಡು ಪಿಎಫ್‌ಐ ಮುಖ್ಯಸ್ಥ ಘೋಷಣೆ

ಅಲ್ಲದೇ ಪಿಎಫ್‌ಐನೊಂದಿಗೆ ಸಂಪರ್ಕ ಹೊಂದಿರುವ ಅನ್ಸುರ್‌ ಉಲ್‌ ಖಲೀಫಾ ಕೇರಳ (Ansur-ul-Khalifa Kerala) ಎಂಬ ಸಂಘಟನೆಯೂ ಸಹ ಭಯೋತ್ಪಾದನಾ ಕೃತ್ಯಗಳಿಗೆ ಯುವಕರು ತೊಡಗಿಸಿಕೊಳ್ಳಲು ಸಾಮಾಜಿಕ ಜಾಲತಾಣಗಳ (social media) ಮೂಲಕ ಪ್ರಚೋದನೆ ನೀಡುತ್ತಿತ್ತು. ರಾಷ್ಟ್ರೀಯ ತನಿಖಾ ದಳದ ವಶದಲ್ಲಿರುವ ಸವಾಲಿತ್‌ ಮೊಹಮ್ಮದ್‌ ಎಂಬ ವ್ಯಕ್ತಿ ಯುಎಇಯಿಂದ ಹಣಕಾಸು ನೆರವು ಬರುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೇ ಸಾಮಾಜಿಕ ಜಾಲತಾಣಗಳ ಮೂಲಕ ತನ್ನಲ್ಲಿ ಐಎಸ್‌ಐ ಸಿದ್ಧಾಂತವನ್ನು (ISI ideology) ತುಂಬಿದ್ದಾಗಿ ಹೇಳಿದ್ದಾನೆ.
 

click me!