ಇನ್ನು 5 ವರ್ಷದಲ್ಲಿ ದೇಶದಲ್ಲಿ ಪೆಟ್ರೋಲ್‌ ನಿಷೇಧ: ಸಚಿವ Nitin Gadkari

By Suvarna News  |  First Published Jul 9, 2022, 7:48 AM IST
  • ಮುಂದಿನ 5 ವರ್ಷದಲ್ಲಿ ದೇಶದಲ್ಲಿ  ಪೆಟ್ರೋಲ್‌ ನಿಷೇಧ 
  • ರೈತರು ಬರಿ ಭತ್ತ, ಗೋಧಿ, ಜೋಳ ಬೆಳೆದರೆ ಸಾಲದು ಇಂಧನ ಉತ್ಪಾದಕರಾಗಬೇಕು
  • ಶೀಘ್ರದಲ್ಲೇ ಹಸಿರು ಜಲಜನಕ ಬಳಕೆ 

ನವದೆಹಲಿ (ಜು.9): ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಪೆಟ್ರೋಲ್‌ (petrol ) ನಿಷೇಧಿಸಲಾಗುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ (Union Minister of Road Transport and Highways Nitin Gadkari) ಅವರು ಹೇಳಿರುವುದು ತೀವ್ರ ಸಂಚಲನಕ್ಕೆ ಕಾರಣವಾಗಿದೆ.

ಮಹಾರಾಷ್ಟ್ರದ ಅಕೋಲಾದಲ್ಲಿರುವ ಡಾ. ಪಂಜಾಬ್‌ರಾವ್‌ ದೇಶಮುಖ್‌ ಕೃಷಿ ವಿದ್ಯಾಪೀಠದಲ್ಲಿ ಗೌರವ ವಿಜ್ಞಾನ ಡಾಕ್ಟರೆಟ್‌ ಸ್ವೀಕರಿಸಿ ಮಾತನಾಡಿರುವ ಅವರು, ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಪೆಟ್ರೋಲ್‌ ಕೊರತೆ ಎದುರಾಗಲಿದೆ. ಹೀಗಾಗಿ ಪೆಟ್ರೋಲ್‌ ಅನ್ನೇ ದೇಶದಲ್ಲಿ ನಿಷೇಧಿಸಲಾಗುತ್ತದೆ ಎಂದು ಹೇಳಿದರು ಎಂದು ವರದಿಗಳು ತಿಳಿಸಿವೆ.

Tap to resize

Latest Videos

ಮಹಾರಾಷ್ಟ್ರದ ವಿದರ್ಭ ಜಿಲ್ಲೆಯಲ್ಲಿ ಬಯೋ ಎಥನಾಲ್‌ ಅನ್ನು ಉತ್ಪಾದಿಸಲಾಗುತ್ತಿದ್ದು, ಅದನ್ನು ವಾಹನಗಳಿಗೆ ಬಳಸಲಾಗುತ್ತಿದೆ. ಹಸಿರು ಜಲಜನಕವನ್ನು (green hydrogen fuel) ಆಳವಾದ ಬಾವಿಗಳಿಂದ ಹೊರತೆಗೆದು ಕೇಜಿಗೆ 70 ರು.ನಂತೆ ಮಾರಾಟ ಮಾಡಬಹುದಾಗಿದೆ. ಇದೇ ವೇಳೆ ರೈತರು ಬರೀ ಆಹಾರ ಉತ್ಪಾದಕರಾದರಷ್ಟೇ ಸಾಲದು, ಇಂಧನ ಉತ್ಪಾದಕರಾಗಬೇಕು. ಭತ್ತ, ಗೋಧಿ, ಜೋಳ ಬೆಳೆದುಕೊಂಡಿದ್ದರೆ ರೈತರ ಭವಿಷ್ಯ ಬದಲಾಗದು ಎಂದು ಹೇಳಿದರು ಎಂದು ವರದಿಗಳು ಹೇಳಿವೆ.

Price Fall:ಎಸಿ, ಫ್ರಿಜ್, ವಾಷಿಂಗ್ ಮಷಿನ್ ಬೆಲೆ ಶೀಘ್ರದಲ್ಲೇ ಇಳಿಕೆ! ಅಗ್ಗವಾಗಲಿವೆಯಾ ಎಲೆಕ್ಟ್ರಾನಿ

 

ಬ್ಯಾರೆಲ್‌ಗೆ 100 ಡಾಲರ್‌ಗಿಂತ ಕೆಳಗಿಳಿದ ಕಚ್ಚಾ ತೈಲ: ಜಾಗತಿಕ ಆರ್ಥಿಕ ಹಿಂಜರಿತದ (global recession) ನಡುವೆಯೂ ಭಾರತಕ್ಕೆ (India) ಸಮಾಧಾನದ ಸುದ್ದಿಯಿದೆ. (Crude Oil ) ಬೆಲೆ ಕುಸಿತ ಮುಂದುವರಿದಿದ್ದು, ಈಗ ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ಗಿಂತಲೂ ಕೆಳಗಿಳಿದಿದೆ. ಕಳೆದ ವಹಿವಾಟಿನಲ್ಲಿ ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ತಲುಪಿದ್ದ ಕಚ್ಚಾ ತೈಲದ ಬ್ಯಾರೆಲ್‌ನ ಬೆಲೆ ಗುರುವಾರವೂ ಇಳಿಕೆ ಕಂಡಿದೆ. ಕಚ್ಚಾತೈಲ ಬೆಲೆ ಇಳಿಕೆಯಿಂದಾಗಿ ದೇಶದಲ್ಲಿ ಪೆಟ್ರೋಲ್-ಡೀಸೆಲ್ (Petrol-Diesel) ಅಗ್ಗವಾಗುವ ನಿರೀಕ್ಷೆ ಹೆಚ್ಚಿದೆ.

ಮೂರು ತಿಂಗಳ ಕನಿಷ್ಠ ಬೆಲೆ: ಬಿಸಿನೆಸ್ ಟುಡೆ ವರದಿಯ ಪ್ರಕಾರ, ಕಚ್ಚಾ ತೈಲ ಬೆಲೆಯಲ್ಲಿ ನಿರಂತರ ಕುಸಿತದಿಂದಾಗಿ, ಸುಮಾರು ಮೂರು ತಿಂಗಳ ಕನಿಷ್ಠ ಮಟ್ಟವನ್ನು ತಲುಪಿದೆ. ಗುರುವಾರದ ಆರಂಭಿಕ ವಹಿವಾಟಿನಲ್ಲಿಯೂ ತೈಲ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯ ನಡುವೆಯೇ ತೈಲದ ಬೇಡಿಕೆಯ ಬಗ್ಗೆ ಆತಂಕ ಹೆಚ್ಚಿರುವುದೇ ಇದಕ್ಕೆ ಕಾರಣ. ಬ್ರೆಂಟ್ ಕಚ್ಚಾ LCOc1 ಫ್ಯೂಚರ್ಸ್ ಬ್ಯಾರೆಲ್‌ಗೆ 71% ಇಳಿಕೆ ಕಂಡಿದ್ದು, 99.98 ಡಾಲರ್‌ಗೆ ಇಳಿದಿದೆ. WTI ಕಚ್ಚಾ CLc1 ಫ್ಯೂಚರ್ಸ್ ಬ್ಯಾರೆಲ್‌ 62% ಇಳಿಕೆ ಕಂಡಿದ್ದು 97.91 ಡಾಲರ್‌ಗೆ ಇಳಿದಿದೆ.

ಗ್ರಾಹಕರಿಗೆ ಸಂತಸದ ಸುದ್ದಿ: ಇಳಿಯುತ್ತಿದೆ ತಾಳೆ ಎಣ್ಣೆ ಬೆಲೆ, ಪ್ರತಿ ಕೆಜಿಗೆ 40 ರೂ. ಕಡಿಮೆ..!

ಉತ್ಪಾದನೆ ಮತ್ತು ಬಳಕೆಯ ಹೆಚ್ಚುವ ಮೊದಲು, ಮಂಗಳವಾರದಂದು WTI ಕಚ್ಚಾ ತೈಲವು ಶೇಕಡಾ 8 ರಷ್ಟು ಮತ್ತು ಬ್ರೆಂಟ್ ಕಚ್ಚಾ ತೈಲವು ಶೇಕಡಾ 9 ರಷ್ಟು ಕುಸಿದಿದೆ. SPI ಅಸೆಟ್ ಮ್ಯಾನೇಜ್‌ಮೆಂಟ್‌ನ ವ್ಯವಸ್ಥಾಪಕ ಪಾಲುದಾರ ಸ್ಟೀಫನ್ ಇನ್ನೆಸ್, ಉತ್ಪಾದನೆ ಮತ್ತು ಬಳಕೆಯ ಬಗ್ಗೆ ಹೊಸ ಮಾಹಿತಿ ತೈಲ ಬೆಲೆಗಳನ್ನು ಕಡಿಮೆ ಮಾಡುತ್ತಿವೆ ಎಂದು ಹೇಳಿದ್ದಾರೆ. ಮಾರುಕಟ್ಟೆ ಮೂಲಗಳನ್ನು ನಂಬುವುದಾದರೆ, ಬುಧವಾರದ ಅಂಕಿಅಂಶಗಳು ಕಳೆದ ವಾರದಲ್ಲಿ ಅಮೆರಿಕದಲ್ಲಿ ಕಚ್ಚಾ ಸ್ಟಾಕ್‌ಗಳು ಸುಮಾರು 3.8 ಮಿಲಿಯನ್ ಬ್ಯಾರೆಲ್‌ಗಳಷ್ಟು ಹೆಚ್ಚಾಗಿದೆ ಎನ್ನುವುದನ್ನು ತೋರಿಸಿದೆ. ಆದರೆ ಗ್ಯಾಸೋಲಿನ್ ಸ್ಟಾಕ್‌ಗಳು 1.8 ಮಿಲಿಯನ್ ಬ್ಯಾರೆಲ್‌ಗಳಷ್ಟು ಕಡಿಮೆಯಾಗಿದೆ.

click me!